ಮತ್ತೆ ಅಧಿಕಾರಕ್ಕೆ ಬರಲು ಅಮೆರಿಕದ ಸಹಾಯ ಕೇಳಿದ್ದ ಮುಷರಫ್
ವಾಷಿಂಗ್ಟನ್, ಡಿಸೆಂಬರ್ 29: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್, ಮತ್ತೆ ಅಧಿಕಾರ ಹಿಡಿಯಲು ಅಮೆರಿಕದಿಂದ ಗುಪ್ತ ಸಹಾಯ ಬಯಸಿದ್ದರು ಎಂಬ ಸಂಗತಿ ಬಹಿರಂಗವಾಗಿದೆ.
ಮುಷರಫ್ ಅವರಿಗೆ ಮುಜುಗರ ಉಂಟುಮಾಡುವಂತಹ ಸರಣಿ ವಿಡಿಯೋಗಳು ಬಿಡುಗಡೆಯಾಗಿದ್ದು, ಅದರಲ್ಲಿ ಮುಷರಫ್ ಅವರು ಅಲ್ ಕೈದಾ ಮುಖ್ಯಸ್ಥ ಒಸಾಮಾ ಬಿನ್ ಲ್ಯಾಡೆನ್ ಎಲ್ಲಿ ಅಡಗಿದ್ದಾನೆ ಎಂಬುದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ ಐ ಬಗ್ಗೆ ನಾಚಿಕೆಯಾಗುತ್ತಿದೆ ಎಂದು ಅಮೆರಿಕದ ಸಂಸದರ ಬಳಿ ಹೇಳಿಕೊಂಡಿದ್ದು ಸಹ ಬಹಿರಂಗವಾಗಿದೆ.
ಪಾಕಿಸ್ತಾನದ ಅಂಕಣಕಾರ ಗುಲ್ ಬುಖಾರಿ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ತುಣುಕುಗಳನ್ನು ಪ್ರಕಟಿಸಿದ್ದಾರೆ.

ಐಎಸ್ಐನ ನಿರ್ಲಕ್ಷ್ಯವು ಕ್ಷಮಾರ್ಹವಾಗಿದೆ. ಏಕೆಂದರೆ 9/11ರ ಅಮೆರಿಕದ ದಾಳಿಯಲ್ಲಿ ಸಿಐಎ ಕೂಡ ಇದೇ ರೀತಿ ನಿರ್ಲಕ್ಷ್ಯ ವಹಿಸಿತ್ತು ಎಂದೂ ಮುಷರಫ್ ಹೇಳಿದ್ದಾರೆ.
4/7 pic.twitter.com/Fh08ivTEp5
— Gul Bukhari (@GulBukhari) 28 December 2018
'ನಾನು ಅಧಿಕಾರದಲ್ಲಿದ್ದಾಗ ಸಾಕಷ್ಟು ವಿಶ್ವಾಸ ಗಳಿಸಿದ್ದೆ. ನಾನು ಮತ್ತೆ ಅಧಿಕಾರ ಹಿಡಿಯಲು ಬಯಸಿದ್ದೇನೆ. ನನಗೆ ಬೆಂಬಲ ಬೇಕು. ನೇರವಾಗಿ ಅಲ್ಲ, ಆದರೆ, ರಹಸ್ಯವಾಗಿ. ಈ ಮೂಲಕ ನಾವು ಮತ್ತೆ ಗೆಲ್ಲಬಹುದು' ಎಂದು ಮುಷರಫ್ ಅಮೆರಿಕದ ಸಂಸದರ ಬಳಿ ಹೇಳಿಕೊಳ್ಳುವುದು ವಿಡಿಯೋದಲ್ಲಿ ದಾಖಲಾಗಿದೆ.











Click it and Unblock the Notifications