ಭಾರತದ ಹೆಮ್ಮೆಯ ಎಸ್ಯಾಟ್ ಪರೀಕ್ಷೆಯನ್ನು ಭಯಾನಕ ಎಂದ ಅಮೆರಿಕ
ವಾಷಿಂಗ್ಟನ್, ಏಪ್ರಿಲ್ 02: ಇತ್ತೀಚೆಗಷ್ಟೇ ಭಾರತ ಉಪಗ್ರಹ ಪ್ರತಿರೋಧಕ ಅಸ್ತ್ರವನ್ನು ಯಶಸ್ವಿಯಾಗಿ ಪರೀಕ್ಷಿಸಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಚಾಪು ಮೂಡಿಸಿ ಬೀಗುತ್ತಿದ್ದರೆ, ಭಾರತದ ಈ ನಡೆಯನ್ನು ಅಮೆರಿಕ 'ಭಯಾನಕ' ಎಂದು ಕರೆದಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನಾಸಾ(ನ್ಯಾಶನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟೇಶನ್)ದ ಮುಖಂಡರೊಬ್ಬರು ಈ ಬಗ್ಗೆ ಮಾತನಾಡಿ, ಭಾರತ ಪರೀಕ್ಷಿಸಿದ ಎ ಸ್ಯಾಟ್ ನಿಂದಾಗಿ ಉಪಗ್ರಹದ 400 ಕ್ಕೂ ಹೆಚ್ಚು ಭಾಗಗಳು(Debris) ತ್ಯಾಜ್ಯ ವಾಗಿ ಹೊರಹೊಮ್ಮಿವೆ. ಇದೊಂದಯ ಭಯಾನಕ ಸನ್ನಿವೇಶ ಸೃಷ್ಟಿಸಿದೆ ಎಂದು ಅದು ಹೇಳಿದೆ.
ಬಾಹ್ಯಾಕಾಶ ಲೋಕಸಲ್ಲಿ ಉಪಗ್ರಹ ಪ್ರತಿರೋಧಕ ಅಸ್ತ್ರವನ್ನು ಹೊಂದಿರುವ ಜಗತ್ತಿನ ಮೂರು ರಾಷ್ಟ್ರಗಳಾದ ರಷ್ಯಾ, ಅಮೆರಿಕ ಮತ್ತು ಚೀನಾದೊಡನೆ ಭಾರತವೂ ಸೇರಿಕೊಳ್ಳುವ ಮೂಲಕ ಹೊಸ ದಾಖಲೆ ಬರೆದಿತ್ತು. ಭಾರತ ಎಸ್ಯಾಟ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 27 ರಂದು ಹೇಳಿದ್ದರು.

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ
ಭಾರತ ಎ ಸ್ಯಾಟ್ ಪರೀಕ್ಷಿಸಿದ್ದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನೂ ಅಪಾಯಕ್ಕೆ ತಮದೊಡ್ಡಿದೆ ಎಂದು ನಾಸಾ ಹೇಳಿದೆ. ಭಾರತ ಧ್ವಂಸಗೊಳಿಸಿದ ಉಪಗ್ರಹದ ತ್ಯಾಜ್ಯ ಭಾಗಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಮೇಲೆಯೂ ಹಾರಾಡುತ್ತಿವೆ ಎಂದು ಅವರು ಹೇಳಿದೆ.

ಭಯಾನಕ ಎಂದ ಅಮೆರಿಕ
ಈಗಾಗಲೇ ಅರವತ್ತಕ್ಕೂ ಹೆಚ್ಚು ತ್ಯಾಜ್ಯ ಭಾಗಗಳು ಕಾಣಿಸಿದ್ದು, ಎಸ್ಯಾಟ್ ಮೂಲಕ ಭಾರತ ಹೊಡೆದುರುಳಿಸಿದ ಉಪಗ್ರಹದ ಇನ್ನೂ ಸಾಕಷ್ಟು ಭಾಗಗಳು ಬಾಹ್ಯಾಕಾಶದಲ್ಲೇ ಉಳಿದುಕೊಂಡಿವೆ. ಅಲ್ಲದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಯ ಮೇಲ್ಗಡೆ ಅವು ಹಾರಾಡುತ್ತಿದ್ದಿದ್ದು, ಸಾಕಷ್ಟು ತಾಪತ್ರಯ ಸೃಷ್ಟಿಸುವ ಲಕ್ಷಣವಿದೆ. ಈ ತ್ಯಾಜ್ಯಗಳು ನಮ್ಮ ಉಪಗ್ರಹಗಳ ಮೇಲೇನಾದರೂ ಪರಿಣಾಮ ಬೀರಿದರೆ ನಾವು ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನಾಸಾ ಹೇಳಿದೆ.
ಕರ್ನಾಟಕದ ಲೋಕಸಭಾ ಸದಸ್ಯರಲ್ಲಿ ಯಾರು ಎಷ್ಟು ಓದಿದ್ದಾರೆ?

ಮೊದಲೇ ಎಚ್ಚರಿಕೆ ನೀಡಿದ್ದ ಅಮೆರಿಕ!
"ನಾವೆಲ್ಲರೂ ಬಾಹ್ಯಾಕಾಶದಲ್ಲಿ ಬದುಕುತ್ತಿದ್ದೇವೆ, ಆದ್ದರಿಂದ ಅದನ್ನು ಅವ್ಯವಸ್ಥಿತಕೊಳಿಸೋದು ಬೇಡ. ನಾವು ವ್ಯವಹಾರ ಮಾಡಲು, ನಾವು ಸ್ವತಂತ್ರವಾಗಿ ಹಾರಾಡಲು ಬಾಹ್ಯಾಕಾಶ ಒಂದು ಜಾಗವಾಗಲಿ. ಆದರೆ ಉಪಗ್ರಹಗಳನ್ನು ಹೊಡೆದು, ಬಾಹ್ಯಾಕಾಶವನ್ನು ಕೊಳಕು ಮಾಡುವುದು ಬೇಡ" ಎಂದು ಈ ಮೊದಲೇ ಅಮೆರಿಕ ಹೇಳಿತ್ತು.

ಭಾರತದ ವಾದವೇನು?
ಉಪಗ್ರಹ ತ್ಯಾಜ್ಯವು ಸಮಸ್ಯೆ ಸೃಷ್ಟಿಸುವ ಬಗ್ಗೆ ಕಾಳಜಿ ವ್ಯಕ್ತಪಡಿಸಿರುವ ಭಾರತ ಎ ಸ್ಯಾಟ್ ಪರೀಕ್ಷೆಯ ನಂತರ ಇದಕ್ಕೆ ಸಮಜಾಯಿಷಿಯನ್ನೂ ನೀಡಿತ್ತು. "ನಾವು ಎ ಸ್ಯಾಟ್ ಪರೀಕ್ಷೆಯನ್ನು low-earth orbit ನಲ್ಲಿ ಮಾಡಿದ್ದರಿಂದ ಬಾಹ್ಯಾಕಾಶದಲ್ಲೇ ತ್ಯಾಜ್ಯಗಳು ಉಳಿದುಹೋಗುವ ಭಯವಿಲ್ಲ. ಅವು ನಾಶವಾಗಿ, ಇನ್ನೊಂದು ವಾರದೊಳಗೆ ಭೂಮಿಗೆ ಬೀಳುತ್ತವೆ" ಎಂದು ಭಾರತ ಹೇಳಿತ್ತು.












Click it and Unblock the Notifications