ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಆಸ್ಪತ್ರೆಯಲ್ಲಿ ನಿಗೂಢ ಮಾರಣಾಂತಿಕ ಫಂಗಸ್ ಪತ್ತೆ

|
Google Oneindia Kannada News

ವಾಷಿಂಗ್ಟನ್, ಜನವರಿ 9: ಅಮೆರಿಕದ ಫ್ಲೋರಿಡಾದ ಆಸ್ಪತ್ರೆಯಲ್ಲಿ ಕೋವಿಡ್ 19ಕ್ಕೆ ಚಿಕಿತ್ಸೆ ಪಡೆಯುತ್ತಿರುವ ಹತ್ತಾರು ರೋಗಿಗಳಿಗೆ ನಿಗೂಢ ಹಾಗೂ ಮಾರಕ ಫಂಗಸ್ ಒಂದರ ಸೋಂಕು ತಗುಲಿದೆ. ಈಗ ಕೋವಿಡ್ ಜತೆಗೆ ಕ್ಯಾಂಡಿಡಾ ಆರಿಸ್ ಎಂಬ ಫಂಗಸ್‌ಗೂ ಚಿಕಿತ್ಸೆ ನೀಡಲಾಗಿದೆ ಎಂದು ಸರ್ಕಾರಿ ಸಂಸ್ಥೆಯೊಂದು ತಿಳಿಸಿದೆ.

ಬಹುಔಷಧೀಯ-ನಿರೋಧಕ ಈಸ್ಟ್ ಅನ್ನು 2009ರಲ್ಲಿ ಮೊದಲ ಬಾರಿಗೆ ಜಪಾನ್‌ನಲ್ಲಿ ಗುರುತಿಸಲಾಗಿತ್ತು. ಇದು ಜಾಗತಿಕವಾಗಿ ವ್ಯಾಪಕ ಮಟ್ಟದಲ್ಲಿ ಹರಡುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರಗಳನ್ನು ಅದನ್ನು ತಡೆಯಲು ಹೆಚ್ಚಿನ ಆದ್ಯತೆ ನೀಡುತ್ತಿವೆ.

ದೇಶದಲ್ಲಿ ಶೀಘ್ರದಲ್ಲಿಯೇ ಬರಲಿದೆ ಮೂಗಿನ ಮೂಲಕ ನೀಡುವ ಕೋವಿಡ್-19 ಲಸಿಕೆದೇಶದಲ್ಲಿ ಶೀಘ್ರದಲ್ಲಿಯೇ ಬರಲಿದೆ ಮೂಗಿನ ಮೂಲಕ ನೀಡುವ ಕೋವಿಡ್-19 ಲಸಿಕೆ

ಸಿ. ಆರಿಸ್ ಫಂಗಸ್ ಶೇ 40ರಷ್ಟು ಆಸ್ಪತ್ರೆಯಲ್ಲಿನ ಮರಣಗಳಿಗೆ ಕಾರಣವಾಗುತ್ತಿದೆ. ಸಾಮಾನ್ಯವಾಗಿ ಇದು ಆರೋಗ್ಯ ಕೇಂದ್ರದ ಒಳಭಾಗದಲ್ಲಿಯೇ ತಗುಲುತ್ತದೆ. ಮುಖ್ಯವಾಗಿ ಆಹಾರ ನಳಿಗೆ ಅಥವಾ ಉಸಿರಾಟದ ನಳಿಗೆಯನ್ನು ಜೋಡಿಸಿರುವವರು ಹಾಗೂ ರಕ್ತನಾಳಗಳಿಗೆ ಕ್ಯಾಥೆಟರ್‌ಗಳನ್ನು ಅಳವಡಿಸಲಾದ ರೋಗಿಗಳಲ್ಲಿ ಇಂದು ಕಂಡುಬರುತ್ತದೆ.

Mysterious Candida Auris Fungus Spread At Florida Hospital Covid Ward

ಈ ಫಂಗಸ್ ರಕ್ತಸ್ರಾವ, ಗಾಯ ಹಾಗೂ ಕಿವಿ ಸೋಂಕುಗಳಿಗೆ ಕಾರಣವಾಗುತ್ತದೆ. ಅಲ್ಲದೆ ಮೂತ್ರ ಹಾಗೂ ಉಸಿರಾಟದ ಮಾದರಿಗಳಲ್ಲಿಯೂ ಇದು ಕಂಡುಬಂದಿದೆ. ಆದರೆ ಇದು ಶ್ವಾಸಕೋಶ ಮತ್ತು ಮೂತ್ರಕೋಶಗಳಿಗೆ ಹಾನಿ ಮಾಡುತ್ತವೆಯೇ ಎನ್ನುವುದು ಖಾತರಿಯಾಗಿಲ್ಲ.

ಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತುಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತು

ಜುಲೈ ತಿಂಗಳಲ್ಲಿ ಫ್ಲೋರಿಡಾದ ಆಸ್ಪತ್ರೆಯೊಂದರಲ್ಲಿ ನಾಲ್ವರು ಕೋವಿಡ್ ರೋಗಿಗಳಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು. ಆಗಸ್ಟ್ ತಿಂಗಳಲ್ಲಿ ಕೋವಿಡ್ 19ರ ಘಟಕದಲ್ಲಿ ಹೆಚ್ಚುವರಿ ಪರಿಶೀಲನೆ ನಡೆಸಿದಾಗ ನಾಲ್ಕು ಮಹಡಿಗಳ ಐದು ವಿಭಾಗಗಳಲ್ಲಿ ಸುಮಾರು 35 ಕೋವಿಡ್ ರೋಗಿಗಳಲ್ಲಿ ಸಿ. ಆರಿಸ್ ಪಾಸಿಟಿವ್ ಕಂಡುಬಂದಿತ್ತು.

ಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಇಡೀ ವಿಮಾನವನ್ನೇ ಬುಕ್ ಮಾಡಿಕೊಂಡ ಪ್ರಯಾಣಿಕಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಇಡೀ ವಿಮಾನವನ್ನೇ ಬುಕ್ ಮಾಡಿಕೊಂಡ ಪ್ರಯಾಣಿಕ

ಪ್ರಸ್ತುತ ಈ 35 ರೋಗಿಗಳ ಪೈಕಿ 20 ಮಂದಿಯ ವಿವರ ಮಾತ್ರ ದೊರಕಿದೆ. ಅವರಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಇದಕ್ಕೆ ಫಂಗಸ್ ಮುಖ್ಯ ಕಾರಣವೇ ಅಥವಾ ಅಲ್ಲವೇ ಎನ್ನುವುದು ಸ್ಪಷ್ಟವಾಗಿಲ್ಲ.

English summary
Mysterious Candida Auris fungus has infected over 35 people who were being treated at a Florida hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X