• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾಷಿಂಗ್ಟನ್, ರೋಮ್‌ನಲ್ಲಿ ರಾಯಭಾರ ಕಚೇರಿ ಮುಂದೆ ಖಲಿಸ್ತಾನಿಗಳ ಪ್ರತಿಭಟನೆ

|

ವಾಷಿಂಗ್ಟನ್, ಜನವರಿ 27: ಭಾರತದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಎದುರು ಖಲಿಸ್ತಾನ್ ಬೆಂಬಲಿಗರು ಪ್ರತಿಭಟನೆ ನಡೆಸಿದರು.

ಖಲಿಸ್ತಾನ್ ಬಾವುಟಗಳನ್ನು ಹಿಡಿದ ಪ್ರತಿಭಟನಾಕಾರರು, 'ನಾವು ರೈತರು, ಉಗ್ರರಲ್ಲ' ಎಂಬ ಬಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಇದೇ ವೇಳೆ ಅವರು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕೆಂಪುಕೋಟೆಯಲ್ಲಿ ಸಿಲುಕಿದ್ದ 300 ಕಲಾವಿದರನ್ನು ರಕ್ಷಿಸಿದ ಪೊಲೀಸರುಕೆಂಪುಕೋಟೆಯಲ್ಲಿ ಸಿಲುಕಿದ್ದ 300 ಕಲಾವಿದರನ್ನು ರಕ್ಷಿಸಿದ ಪೊಲೀಸರು

ಇಟಲಿಯ ರೋಮ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಎದುರು ಕೂಡ ಖಲಿಸ್ತಾನ್ ಬೆಂಬಲಿಗರು ತಮ್ಮ ಬಾವುಟಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು ಎನ್ನಲಾಗಿದೆ. ರೋಮ್‌ನಲ್ಲಿನ ರಾಯಭಾರ ಕಚೇರಿಯ ಗೋಡೆಗಳ ಮೇಲೆ 'ಖಲಿಸ್ತಾನ್ ಜಿಂದಾಬಾದ್' ಎಂದು ಬರೆದ ಚಿತ್ರಗಳು ಕಂಡುಬಂದಿವೆ. ಭಾರತೀಯ ಸಂವಿಧಾನದ ಪ್ರತಿಗಳನ್ನು ಹರಿದು ನೆಲದ ಮೇಲೆ ಎಸೆದು ಹಾಕಿದರು ಎಂದು ಏಷ್ಯಾನೆಟ್ ವರದಿ ಮಾಡಿದೆ.

ರಾಜಧಾನಿ ದೆಹಲಿಗೆ ನುಗ್ಗಿದ್ದ ಪ್ರತಿಭಟನಾಕಾರರು ಕೆಂಪುಕೋಟೆಯಲ್ಲಿ ಸಿಖ್ ಧಾರ್ಮಿಕ ದ್ವಜವನ್ನು ಹಾರಿಸಿದ್ದರು. ಈ ಸಂದರ್ಭದಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಟ್ರ್ಯಾಕ್ಟರ್ ಮಗುಚಿ ಒಬ್ಬ ರೈತ ಮೃತಪಟ್ಟಿದ್ದಾನೆ. ರೈತರ ಟ್ರ್ಯಾಕ್ಟರ್ ಮೆರವಣಿಗೆ ತಡೆಯಲು ಪ್ರಯತ್ನಿಸಿದ ಪೊಲೀಸರ ಮೇಲೆ ಹಲ್ಲೆಗಳಾಗಿದ್ದು, ಸುಮಾರು 86 ಪೊಲೀಸರಿಗೆ ಗಾಯಗಳಾಗಿವೆ.

Video: ದೆಹಲಿಯಲ್ಲಿ ರೈತನ ಸಾವಿನ ಭಯಾನಕ ದೃಶ್ಯ!Video: ದೆಹಲಿಯಲ್ಲಿ ರೈತನ ಸಾವಿನ ಭಯಾನಕ ದೃಶ್ಯ!

ರೈತರ ಪ್ರತಿಭಟನೆಯಲ್ಲಿ ಖಲಿಸ್ತಾನ್ ಪ್ರತ್ಯೇಕತಾವಾದಿಗಳು ಸೇರಿಕೊಂಡು ಗದ್ದಲ ಎಬ್ಬಿಸುತ್ತಿದ್ದಾರೆ. ಹಿಂಸಾಚಾರ ನಡೆಸುವುದು ಅವರ ಉದ್ದೇಶ ಎಂದು ಕೃಷಿ ಕಾಯ್ದೆಗಳ ಪರವಾಗಿರುವ ಅನೇಕ ಮುಖಂಡರು ಹೇಳಿದ್ದರು. ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಕೂಡ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು.

English summary
Khalistani supporters held protests outside the Indian Embassy in Washington DC and Rome in support of the protest against farm laws in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X