ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯರ್ಥ ಮಾಡಲು ಸಮಯವಿಲ್ಲ: ಮೊದಲ ದಿನವೇ ಕರ್ತವ್ಯದಲ್ಲಿ ಬ್ಯುಸಿಯಾದ ಬೈಡನ್

|
Google Oneindia Kannada News

ವಾಷಿಂಗ್ಟನ್, ಜನವರಿ 21: ಛಿದ್ರಗೊಂಡ ಆರ್ಥಿಕತೆ ಮತ್ತು 4 ಲಕ್ಷಕ್ಕೂ ಅಧಿಕ ಅಮೆರಿಕನ್ನರ ಜೀವ ಬಲಿತೆಗೆದುಕೊಂಡ ಕೊರೊನಾ ವೈರಸ್ ಪಿಡುಗಿನ ನಡುವೆ ತೀವ್ರವಾಗಿ ವಿಭಜನೆಯಾಗಿರುವ ದೇಶದಲ್ಲಿನ ಅನಾಗರಿಕ ಯುದ್ಧವನ್ನು ಅಂತ್ಯಗೊಳಿಸುವುದಾಗಿ ಜೋ ಬೈಡನ್ ಶಪಥ ಮಾಡಿದ್ದಾರೆ.

ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಅವರು, ಈ ಸವಾಲುಗಳನ್ನು ತಗ್ಗಿಸಲು ನಾನು ನನ್ನ ಆತ್ಮವನ್ನು ಮರುಸ್ಥಾಪಿಸಬೇಕಿದೆ. ಭವಿಷ್ಯದ ಅಮೆರಿಕವನ್ನು ಭದ್ರಪಡಿಸಲು ಮಾತಿಗಿಂತಲೂ ಹೆಚ್ಚಿನ ಶ್ರಮದ ಅಗತ್ಯವಿದೆ. ಅದಕ್ಕೆ ಪ್ರಜಾಪ್ರಭುತ್ವವು ಒಳಗೊಳ್ಳುವ ಎಲ್ಲ ಅಂಶಗಳೂ ಅಗತ್ಯವಾಗಿದೆ ಎಂದರು.

'ನಾವು ನೀಲಿ ವಿರುದ್ಧದ ಕೆಂಪು ಬಣ್ಣದ (ರಿಪಬ್ಲಿಕ್ ವರ್ಸಸ್ ಡೆಮಾಕ್ರಟಿಕ್), ಗ್ರಾಮೀಣ ವರ್ಸಸ್ ನಗರ, ಸಾಂಪ್ರದಾಯಿಕತೆ ವರ್ಸಸ್ ಉದಾರವಾದಗಳ ನಡುವಿನ ಅನಾಗರಿಕ ಯುದ್ಧವನ್ನು ಅಂತ್ಯಗೊಳಿಸಬೇಕಿದೆ. ನಮ್ಮ ಹೃದಯವನ್ನು ಗಟ್ಟಿಗೊಳಿಸುವ ಬದಲು ನಮ್ಮ ಆತ್ಮಗಳನ್ನು ತೆರೆದರೆ ಇದು ಸಾಧ್ಯ' ಎಂದು ಹೇಳಿದರು.

Joe Biden Vows To End Uncivil War, Says No Time To Waste To Tackle Crisis

ಅಧ್ಯಕ್ಷರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಬಳಿಕ ಮೊದಲ ಟ್ವೀಟ್ ಮಾಡಿದ ಜೋ ಬೈಡನ್, 'ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ವಿಚಾರ ಬಂದಾಗ ವ್ಯರ್ಥ ಮಾಡಲು ಸಮಯವೇ ನಮ್ಮ ಬಳಿ ಇಲ್ಲ. ಹೀಗಾಗಿ ಇಂದು ನಾನು ಓವಲ್ ಕಚೇರಿ ಕಡೆಗೆ ಸಾಗುತ್ತಿದ್ದು, ಅಮೆರಿಕದ ಕುಟುಂಬಗಳಿಗೆ ತತ್‌ಕ್ಷಣದ ಪರಿಹಾರ ನೀಡುವ ಮತ್ತು ದಿಟ್ಟ ಕ್ರಮಗಳನ್ನು ನೀಡುವ ಕೆಲಸದ ಹಕ್ಕು ಪಡೆದುಕೊಳ್ಳಲಿದ್ದೇನೆ' ಎಂದು ತಾವು ಮೊದಲ ದಿನದಿಂದಲೇ ಕಾರ್ಯೋನ್ಮುಖರಾಗುವುದಾಗಿ ಹೇಳಿದ್ದಾರೆ.

English summary
US President Joe Biden has vowed to end uncivil war within the country and said no time to waste to tackling the crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X