• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೋ ಬೈಡನ್ ಸರ್ಕಾರದಲ್ಲಿ ಭಾರತ ಮೂಲದ ನೀರಾ ಟಂಡೆನ್‌ಗೆ ಮುಖ್ಯ ಹುದ್ದೆ

|

ವಾಷಿಂಗ್ಟನ್, ನವೆಂಬರ್ 30: ಅಮೆರಿಕನ್ ಪ್ರೋಗ್ರೆಸ್ ಕೇಂದ್ರದ ಮುಖ್ಯ ಕಾರ್ಯನಿರ್ವಾಹಕಿ ನೀರಾ ಟಂಡೆನ್ ಅವರನ್ನು ನಿರ್ವಹಣೆ ಮತ್ತು ಆಯವ್ಯಯ ಕಚೇರಿಯ ನಿರ್ದೇಶಕಿಯನ್ನಾಗಿ ನಾಮನಿರ್ದೇಶನ ಮಾಡಲು ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್ ಉದ್ದೇಶಿಸಿದ್ದಾರೆ ಎನ್ನಲಾಗಿದೆ. ಇದರಿಂದ ಡೆಮಾಕ್ರಟಿಕ್ ಪಕ್ಷದ ಭವಿಷ್ಯದ ಆಡಳಿತ ತಂಡದಲ್ಲಿ ಭಾರತ ಮೂಲದವರಿಗೆ ಮತ್ತೊಂದು ಆದ್ಯತೆ ದೊರೆತಂತಾಗಿದೆ.

ಬೈಡನ್ ವಿಜಯಿ ಎಂದು ಎಲೆಕ್ಟೊರಲ್ ಕಾಲೇಜ್ ಘೋಷಿಸಿದರೆ ಶ್ವೇತಭವನ ತೊರೆಯುತ್ತೇನೆ: ಟ್ರಂಪ್

ಅರ್ಥಶಾಸ್ತ್ರಜ್ಞೆ ಸೆಸಿಲಿಯಾ ರೋಸ್ ಅವರನ್ನು ಆರ್ಥಿಕ ಸಲಹೆಗಾರರ ಸಮಿತಿಯ ಮುಖ್ಯಸ್ಥರನ್ನಾಗಿ ಮತ್ತು ಒಬಾಮ ಆಡಳಿತದ ಅವಧಿಯಲ್ಲಿ ಹಿರಿಯ ಅಂತಾರಾಷ್ಟ್ರೀಯ ಸಲಹೆಗಾರರಾಗಿದ್ದ ವ್ಯಾಲಿ ಅಡೆಯೆಮೊ ಅವರನ್ನು ಖಜಾನೆ ಇಲಾಖೆಯ ಮುಖ್ಯ ಉಪ ಮುಖ್ಯಸ್ಥರನ್ನಾಗಿ ನೇಮಿಸಲು ಸಹ ಮುಂದಾಗಿದ್ದಾರೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಶ್ವೇತಭವನದಲ್ಲಿ ಉನ್ನತ ಹುದ್ದೆ ಪಡೆದ ಮಹಿಳೆಗೆ ಕುಂದಾಪುರದ ನಂಟು

ಇನ್ನು ಅರ್ಥಶಾಸ್ತ್ರಜ್ಞರಾದ ಜೇರಡ್ ಬರ್ನ್‌ಸ್ಟೀನ್ ಮತ್ತು ಹೆದರ್ ಬೌಶ್ಲೆ ಅವರನ್ನು ಆರ್ಥಿಕ ಸಲಹೆಗಾರರ ಸಮಿತಿಗೆ ನೇಮಿಸುವ ಸಾಧ್ಯತೆ ಇದೆ. ಇವರೆಲ್ಲರೂ ಬೈಡನ್ ಅವರ ಪ್ರಚಾರ ತಂಡದಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ನೀರಾ ಟಂಡೆನ್ ಅವರು ಭಾರತ ಮೂಲದವರಾಗಿದ್ದು, ಬೈಡನ್ ಆಡಳಿತದಲ್ಲಿ ಬಜೆಟ್ ನಿರ್ವಹಣೆಯ ಅತ್ಯಂತ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಂಭವವಿದೆ. ಈ ವರದಿ ಖಚಿತವಾದರೆ ಅಮೆರಿಕ ಪ್ರಗತಿ ಕೇಂದ್ರ ಮುಖ್ಯ ಕಾರ್ಯನಿರ್ವಾಹಕಿಯಾದ 50 ವರ್ಷದ ನೀರಾ ಅವರು ನಿರ್ವಹಣೆ ಮತ್ತು ಆಯವ್ಯಯ ಕಚೇರಿಗೆ ಮುಖ್ಯಸ್ಥರಾಗಲಿರುವ ಮೊದಲ ಮಹಿಳೆ ಎನಿಸಿಕೊಳ್ಳಲಿದ್ದಾರೆ.

ನಾಯಿ ಜತೆ ಆಡುವಾಗ ಕಾಲು ಮುರಿದುಕೊಂಡ ಬೈಡನ್

ಸೆಂಟರ್ ಫಾರ್ ಅಮೆರಿಕನ್ ಪ್ರೊಗ್ರೆಸ್ ಚಿಂತಕರ ಚಾವಡಿಯ ನೇತೃತ್ವ ವಹಿಸಿಕೊಳ್ಳುವ ಮುನ್ನ ಟಂಡೆನ್ ಅವರು ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತದಲ್ಲಿ ಆರೋಗ್ಯ ವಿಭಾಗದ ಸಲಹೆಗಾರರಲ್ಲಿ ಒಬ್ಬರಾಗಿದ್ದರು. ಹಾಗೆಯೇ 2016ರಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರ ಪ್ರಚಾರ ತಂಡದಲ್ಲಿ ಭಾಗಿಯಾಗಿದ್ದರು.

ಖಜಾನೆ ಕಾರ್ಯದರ್ಶಿಯನ್ನಾಗಿ ಜೇನೆಟ್ ಯೆಲ್ಲೆನ್ ಅವರ ಹೆಸರನ್ನು ನಾಮನಿರ್ದೇಶನ ಮಾಡಲು ಬೈಡನ್ ಉದ್ದೇಶಿಸಿದ್ದಾರೆ. ಇದರೊಂದಿಗೆ ಬೈಡನ್ ಅವರ ಆರ್ಥಿಕ ಸಲಹೆ ತಂಡವು ಮಹಿಳೆಯರಿಂದಲೇ ತುಂಬಿಕೊಳ್ಳಲಿದೆ. ಜತೆಗೆ ಆರ್ಥಿಕ ಸಲಹೆಗಾರರ ಸಮಿತಿಯ ಮುಖ್ಯಸ್ಥರಾಗಿ ಮೊದಲ ಬಾರಿಗೆ ಕಪ್ಪು ವರ್ಣೀಯ ಮಹಿಳೆಯಾಗಿ ಸೆಸಿಲಿಯಾ ರೋಸ್ ನೇಮಕ ಐತಿಹಾಸಿಕ ತೀರ್ಮಾನಾಗಲಿದೆ.

English summary
US President Elect Joe Biden to nominate Indian American Neera Tanden as director of the Office of Management and Budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X