ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ವಲಸೆ ನೀತಿಗೆ ಬ್ರೇಕ್, ನಿರಾಶ್ರಿತರ ಪರ ನಿಂತ ಬೈಡನ್

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 3: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಾರಿಗೆ ತಂದಿದ್ದ ವಲಸೆ ನೀತಿಯನ್ನು ಹಿಂಪಡೆಯಲು ಹಾಲಿ ಅಧ್ಯಕ್ಷ ಜೋ ಬೈಡನ್ ಆದೇಶಿಸಿದ್ದಾರೆ. ಈ ಮೂಲಕ ನಿರಾಶ್ರಿತರ ಪರ ಬೈಡನ್ ನಿಂತಿದ್ದಾರೆ.

ರಾಷ್ಟ್ರೀಯ ವಲಸೆ ನೀತಿಯಲ್ಲಿ ಮುಖ್ಯವಾಗಿ ಯುಎಸ್ ದಕ್ಷಿಣ ಗಡಿಗೆ ಸಂಬಂಧಿಸಿದಂತೆ ಬೈಡನ್ ಕಳವಳ ವ್ಯಕ್ತಪಡಿಸಿದ್ದಾರೆ. ವಲಸೆ ಕುಟುಂಬಸ್ಥರು ನಿರಾಶ್ರಿತರಾಗಿ ತಮ್ಮ ಸಂಬಂಧಿಕರಿಂದ ಬೇರ್ಪಟ್ಟು ನೋವು ಅನುಭವಿಸಿದ್ದಾರೆ. ಇದಕ್ಕೆಲ್ಲ ಅಂತ್ಯ ಹಾಡಲಾಗಿದೆ ಎಂದು ಬೈಡನ್ ಹೇಳಿದ್ದಾರೆ.

ಯುಎಸ್ H1B ವೀಸಾ ನಿಯಮದಲ್ಲಿ ಬದಲಾವಣೆ ತಂದ ಬೈಡನ್ ಯುಎಸ್ H1B ವೀಸಾ ನಿಯಮದಲ್ಲಿ ಬದಲಾವಣೆ ತಂದ ಬೈಡನ್

ಟ್ರಂಪ್ ಅವರ ಕಠಿಣ ವಲಸೆ ನೀತಿಯ ಪರಿಣಾಮ, ಹೆತ್ತವರಿಂದ ಮಕ್ಕಳು ಬೇರ್ಪಟ್ಟು ಜೀವಿಸಬೇಕಾಗಿತ್ತು. ಸೋದರರು ಅಗಲಿಕೆ ನೋವು ಅನುಭವಿಸಿದ್ದರು. ಇದೊಂದು ರಾಷ್ಟ್ರೀಯ ಅಪಮಾನವಾಗಿ ಪರಿಣಮಿಸಿತ್ತು. ಹೀಗಾಗಿ, ಹಳೆ ಆದೇಶವನ್ನು ರದ್ದುಗೊಳಿಸಲಾಗಿದ್ದು, ವಲಸೆ ನೀತಿ ಬಗ್ಗೆ ಪುನರ್ ಪರಿಶೀಲನೆ ನಡೆಸಲು ಕಾರ್ಯಕಾರಿ ಆದೇಶ ನೀಡಲಾಗಿದೆ ಎಂದು ಬೈಡನ್ ಹೇಳಿದರು.

Joe Biden signs orders to Undo Trump immigration policies

ಟ್ರಂಪ್ ಕಾಲದ ಆದೇಶ ರದ್ದಾಗುವುದರಿಂದ ವಾರ್ಷಿಕ 95 ಸಾವಿರ ನಿರಾಶ್ರಿತರಿಗೆ ಅಮೆರಿಕ ಪ್ರವೇಶಕ್ಕೆ ಅನುಮತಿ ಸಿಗಲಿದೆ. ಒಬಾಮಾ ಕಾಲದಲ್ಲಿ ವರ್ಷಕ್ಕೆ 1.25 ಲಕ್ಷ ಮಂದಿಗೆ ಅವಕಾಶ ನೀಡಲಾಗಿತ್ತು. ಟ್ರಂಪ್ ಈ ನೀತಿಗೆ ಬ್ರೇಕ್ ಹಾಕಿದ್ದರು. ಅಮೆರಿಕ ಕೇವಲ ಅಮೆರಿಕನ್ನರಿಗೆ ಮಾತ್ರ ಎಂಬುದು ಟ್ರಂಪ್ ನಿಲುವಾಗಿತ್ತು. ಆದರೆ ಬೈಡನ್ ಈ ಎಲ್ಲಾ ಎಲ್ಲೆಗಳನ್ನು ಮೀರಿ ವಲಸಿಗರಿಗೂ ಅಮೆರಿಕದಲ್ಲಿ ಅವಕಾಶ ಕಲ್ಪಿಸತೊಡಗಿದ್ದಾರೆ.

ವೈಟ್‌ಹೌಸ್ ಕಚೇರಿ ಡಿಸೈನ್ ಚೇಂಜ್ ಮಾಡಿಸಿದ ಜೋ ಬೈಡನ್..! ವೈಟ್‌ಹೌಸ್ ಕಚೇರಿ ಡಿಸೈನ್ ಚೇಂಜ್ ಮಾಡಿಸಿದ ಜೋ ಬೈಡನ್..!

ಅಮೆರಿಕದ ನೆರೆ ರಾಷ್ಟ್ರ ಮೆಕ್ಸಿಕೋ ಗಡಿಯಲ್ಲಿ ಟ್ರಂಪ್ ವಿವಾದಾತ್ಮಕ ಯೋಜನೆಯೊಂದನ್ನು ಕೈಗೊಂಡಿದ್ದರು. ಅಕ್ರಮ ವಲಸಿಗರನ್ನು ತಡೆಯುವ ನೆಪದಲ್ಲಿ ಗಡಿಯಲ್ಲಿ ಗೋಡೆ ಕಟ್ಟಲು ಮುಂದಾಗಿದ್ದರು. ಗೋಡೆ ವಿಷಯ ಅದೆಷ್ಟು ನಗೆಪಾಟಲಿಗೆ ಈಡಾಗಿತ್ತು ಎಂದರೆ, ಇಷ್ಟು ಅಗಾಧ ಗಾತ್ರದ ಗೋಡೆಗಳನ್ನೂ ಅಕ್ರಮ ವಲಸಿಗರು ದಾಟಿ ಬಂದಿದ್ದರು. ಅಷ್ಟೇ ಅಲ್ಲದೆ ಕಾಮಗಾರಿ ಕೂಡ ಕಳಪೆಯಾಗಿದೆ ಎಂಬುದು ಹಲವು ಸಂದರ್ಭದಲ್ಲಿ ಪ್ರೂವ್ ಆಗಿತ್ತು. ಸಾವಿರಾರು ಕೋಟಿ ಡಾಲರ್ ಸುರಿದು ಈ ಯೋಜನೆ ಕೈಗೊಂಡಿದ್ದರೂ, ಅದು ಫ್ಲಾಪ್ ಆಗುವ ಜೊತೆ ಅಮೆರಿಕ ಮತ್ತು ಮೆಕ್ಸಿಕೋ ಸಂಬಂಧಕ್ಕೆ ಹುಳಿ ಹಿಂಡಿತ್ತು. ಇಂತಹ ವಿವಾದಾತ್ಮಕ ಯೋಜನೆ ಬಗ್ಗೆ ಬೈಡನ್ ಈ ಹಿಂದೆಯೂ ಹಲವು ಸಂದರ್ಭಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಮೆಕ್ಸಿಕೋ ಗಡಿಯಲ್ಲಿ ಗೋಡೆ ಕಟ್ಟುವುದನ್ನು ಬೈಡನ್ ನಿಲ್ಲಿಸುವ ಸಾಧ್ಯತೆ ಇದೆ.

English summary
Biden said the second executive order he signed will address the root causes of migration to the US southern border. The third executive order directs a full review of the Trump administration's immigration policies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X