ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಟ್ರಂಪ್ ಬರದಿರುವುದೇ ಒಳ್ಳೆ ವಿಷಯ ಎಂದ ಬೈಡನ್

|
Google Oneindia Kannada News

ವಾಷಿಂಗ್ಟನ್, ಜನವರಿ 09: ಡೊನಾಲ್ಡ್ ಟ್ರಂಪ್, ಅಧಿಕಾರ ಸ್ವೀಕಾರದ ಕಾರ್ಯಕ್ರಮಕ್ಕೆ ಆಗಮಿಸದೇ ಇರುವುದು ಒಳ್ಳೆಯ ನಿರ್ಧಾರ. ಈ ನಿರ್ಧಾರ ನಾನು ಮತ್ತು ಅವರು ಒಪ್ಪಿಕೊಂಡ ಕೆಲವೇ ವಿಷಯಗಳಲ್ಲಿ ಒಂದು ಎಂದು ನಿಯೋಜಿತ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಶುಕ್ರವಾರ ವಿಲ್ಮಿಂಗ್ ಟನ್ ನಲ್ಲಿ ಮಾತನಾಡಿದ ಜೋ ಬೈಡನ್, ಟ್ರಂಪ್ ಕಾರ್ಯಕ್ರಮಕ್ಕೆ ಬರದೇ ಇರುವುದು ಒಳ್ಳೆಯ ವಿಷಯ. ಅವರು ಕಾಣಿಸಿಕೊಳ್ಳದೇ ಇರುವುದು ಒಳ್ಳೆಯದೇ ಎಂದು ಹೇಳಿದ್ದಾರೆ. "ಟ್ರಂಪ್ ಬಗ್ಗೆ ನನಗಿದ್ದ ಕೆಟ್ಟ ಕಲ್ಪನೆಗಳನ್ನೂ ಮೀರಿದ್ದಾರೆ. ದೇಶಕ್ಕೆ ಮುಜುಗರ ತಂದಿದ್ದಾರೆ. ನಮ್ಮನ್ನು ಪ್ರಪಂಚದ ಮುಂದೆ ಮುಜುಗರಕ್ಕೀಡುಮಾಡಿದ್ದಾರೆ. ಅವರು ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಲು ಯಾವುದೇ ರೀತಿಯಲ್ಲೂ ಅರ್ಹರಲ್ಲ" ಎಂದು ಬೈಡನ್ ಹೇಳಿದ್ದಾರೆ.

ಟ್ರಂಪ್‌ಗೆ ಮತ್ತೊಂದು ಹಿನ್ನಡೆ: ಟ್ವಿಟ್ಟರ್ ಖಾತೆ ಶಾಶ್ವತ ಸ್ಥಗಿತಟ್ರಂಪ್‌ಗೆ ಮತ್ತೊಂದು ಹಿನ್ನಡೆ: ಟ್ವಿಟ್ಟರ್ ಖಾತೆ ಶಾಶ್ವತ ಸ್ಥಗಿತ

ಉಪಾಧ್ಯಕ್ಷ ಮೈಕ್ ಪೆನ್ಸ್ ಅವರು ಉದ್ಘಾಟನೆಗೆ ಹಾಜರಾಗುತ್ತಿವುದು ಸಂತೋಷದ ವಿಷಯ. ಅವರು ಕಾರ್ಯಕ್ರಮಕ್ಕೆ ಬರುತ್ತಿರುವುದು ನಮಗೆ ಗೌರವ. ಬದಲಾವಣೆಯನ್ನು ನಾವು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.

Joe Biden Says Trump Not Coming To Inauguration Is Good Thing

ಜನವರಿ 20ರಂದು ಟ್ರಂಪ್ ಅಧಿಕಾರ ಕೊನೆಗೊಳ್ಳಲಿದೆ. ಜೋ ಬೈಡನ್ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈಚೆಗೆ ಟ್ರಂಪ್ ವಿರುದ್ಧದ ಫಲಿತಾಂಶವನ್ನು ರದ್ದಗೊಳಿಸಬೇಕು ಎಂದು ಅವರ ಬೆಂಬಲಿಗರು ಯುಎಸ್ ಕ್ಯಾಪಿಟಲ್ ಕಟ್ಟಡಕ್ಕೆ ಮುತ್ತಿಗೆ ಹಾಕಿ ಹಿಂಸಾಚಾರ ನಡೆಸಿದ್ದರು.

English summary
President-elect Joe Biden said President Donald Trump's decision to skip his inauguration is good thing,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X