ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದಿಂದ ಭಾರತ ಎಷ್ಟು ತೈಲ ಖರೀದಿ?: ಜೈಶಂಕರ್ ಸ್ಪಷ್ಟನೆ

|
Google Oneindia Kannada News

ವಾಷಿಂಗ್ಟನ್‌, ಏಪ್ರಿಲ್ 12: ವಾಷಿಂಗ್ಟನ್‌ನ ಸ್ಟೇಟ್ ಡಿಪಾರ್ಟ್‌ಮೆಂಟ್‌ನಲ್ಲಿ ನಡೆದ ಭಾರತ-ಯುಎಸ್ 2+2 ಮಂತ್ರಿಗಳ ಸಂವಾದದಲ್ಲಿ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಭಾರತವು ರಷ್ಯಾದಿಂದ ಎಷ್ಟು ತೈಲವನ್ನು ಖರೀದಿ ಮಾಡುತ್ತದೆ ಎಂಬ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ.

ಈ ಸಭೆಯನ್ನು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಜೆ ಬ್ಲಿಂಕೆನ್ ಜಾಗತಿಕ ವ್ಯವಹಾರಗಳಲ್ಲಿ ಇದು ಒಂದು ದೊಡ್ಡ ಕ್ಷಣ ಎಂದು ಕರೆದಿದ್ದು, ಭಾರತದೊಂದಿಗಿನ ಪಾಲುದಾರಿಕೆಯು "ಹೆಚ್ಚು ಪರಿಣಾಮವಾಗಿ ಮತ್ತು ಮಹತ್ವದ್ದಾಗಿದೆ" ಎಂದು ಒತ್ತಿ ಹೇಳಿದರು. ಹಾಗೆಯೇ ರಷ್ಯಾದ ಹೆಚ್ಚುವರಿ ತೈಲವನ್ನು ಖರೀದಿಸದಂತೆ ಭಾರತವನ್ನು ಬ್ಲಿಂಕನ್ ಒತ್ತಾಯಿಸಿದರು.

ಉಕ್ರೇನ್ ಯುದ್ಧದ ನಡುವೆ ರಷ್ಯಾದಿಂದ 20 ಲಕ್ಷ ಬ್ಯಾರೆಲ್ ತೈಲ ಖರೀದಿಸಿದ ಬಿಪಿಸಿಎಲ್ಉಕ್ರೇನ್ ಯುದ್ಧದ ನಡುವೆ ರಷ್ಯಾದಿಂದ 20 ಲಕ್ಷ ಬ್ಯಾರೆಲ್ ತೈಲ ಖರೀದಿಸಿದ ಬಿಪಿಸಿಎಲ್

ಈ ಸಂದರ್ಭದಲ್ಲಿ ಭಾರತದ ಮಾಸಿಕ ರಷ್ಯಾದ ತೈಲ ಖರೀದಿಯು ಯುರೋಪ್ 1 ಮಧ್ಯಾಹ್ನ ಖರೀದಿಸುವುದಕ್ಕಿಂತ ಕಡಿಮೆಯಾಗಿದೆ ಎಂದು ಯುಎಸ್‌ಗೆ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದ್ದಾರೆ.

Indias monthly purchase of Russian oil less than what Europe buys in 1 afternoon Says Jaishankar

ಬ್ಲಿಂಕನ್ ಹೇಳುವುದು ಏನು?

"ತೈಲ ಖರೀದಿಗಳು, ನಿರ್ಬಂಧಗಳು ಮತ್ತು ಇತರ ವಿಷಯಗಳಿಗೆ ಬಂದಾಗ, ಇಂಧನ ಖರೀದಿಗೆ ಹಲವು ಆಯಾಮಗಳು ಇದೆ ಎಂದು ನಾನು ಗಮನಿಸುತ್ತೇನೆ. ಖಂಡಿತವಾಗಿಯೂ, ನಾವು ರಷ್ಯಾದಿಂದ ಹೆಚ್ಚುವರಿ ಇಂಧನ ಸರಬರಾಜುಗಳನ್ನು ಖರೀದಿಸದಂತೆ ದೇಶಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ," ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಜೆ ಬ್ಲಿಂಕೆನ್ ಹೇಳಿದರು.

ಉಕ್ರೇನ್‌ ಯುದ್ಧದ ನಡುವೆ ರಷ್ಯಾದಿಂದ ಭಾರತ ತೈಲ ಖರೀದಿಉಕ್ರೇನ್‌ ಯುದ್ಧದ ನಡುವೆ ರಷ್ಯಾದಿಂದ ಭಾರತ ತೈಲ ಖರೀದಿ

"ಪ್ರತಿಯೊಂದು ದೇಶವು ವಿಭಿನ್ನವಾಗಿದೆ. ಎಲ್ಲಾ ದೇಶವು ವಿಭಿನ್ನ ಅಗತ್ಯತೆಗಳು, ಅವಶ್ಯಕತೆಗಳನ್ನು ಹೊಂದಿದೆ. ಆದರೆ ನಾವು ರಷ್ಯಾದ ಶಕ್ತಿಯ ಖರೀದಿಯನ್ನು ಹೆಚ್ಚಿಸದಿರಲು ಮಿತ್ರರಾಷ್ಟ್ರಗಳು ಮತ್ತು ಪಾಲುದಾರರಲ್ಲಿ ತಿಳಿಸುತ್ತೇವೆ," ಎಂದು ಆಂಟೋನಿ ಜೆ ಬ್ಲಿಂಕೆನ್ ಪುನರುಚ್ಛರಿಸಿದರು.

ಜೈಶಂಕರ್ ಪ್ರತಿಕ್ರಿಯೆ ಹೀಗಿದೆ...

ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಜೆ ಬ್ಲಿಂಕೆನ್ ಈ ಮಾತಿಗೆ ಪ್ರತಿಕ್ರಿಯೆ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್, "ತಿಂಗಳಿಗೆ ಭಾರತದ ಒಟ್ಟು ಖರೀದಿಯು ಯುರೋಪ್ ಮಧ್ಯಾಹ್ನ ಖರೀದಿಸುವುದಕ್ಕಿಂತ ಕಡಿಮೆಯಿರುತ್ತದೆ," ಎಂದು ಸ್ಪಷ್ಟಣೆ ನೀಡಿದ್ದಾರೆ.

Indias monthly purchase of Russian oil less than what Europe buys in 1 afternoon Says Jaishankar

"ನೀವು ರಷ್ಯಾದಿಂದ ಇಂಧನ ಖರೀದಿಯ ಗಮನವನ್ನು ಹರಿಸುತ್ತಿದ್ದರೆ, ನಿಮ್ಮ ಗಮನವು ಯುರೋಪಿನತ್ತ ಕೇಂದ್ರೀಕರಿಸಬೇಕೆಂದು ನಾನು ಸಲಹೆ ನೀಡುತ್ತೇನೆ. ನಾವು ನಮ್ಮ ಇಂಧನ ಭದ್ರತೆಗೆ ಅಗತ್ಯವಾದ ಇಂಧನವನ್ನು ಮಾತ್ರ ಖರೀದಿಸುತ್ತೇವೆ, ಆದರೆ ಅಂಕಿಅಂಶಗಳನ್ನು ನೋಡುವುದು ಸರಿಯಲ್ಲ. ಯುರೋಪ್ ಒಂದು ದಿನದಲ್ಲೊ ಮಧ್ಯಾಹ್ನದವರೆಗೆ ರಷ್ಯಾದಿಂದ ಎಷ್ಟು ಇಂಧನವನ್ನು ಖರೀದಿ ಮಾಡುತ್ತದೆಯೋ ಅದಕ್ಕಿಂತ ಕಡಿಮೆ ತೈಲವನ್ನು ನಾವು ತಿಂಗಳಿಗೆ ಖರೀದಿ ಮಾಡುತ್ತೇವೆ," ಎಂದು ಹೇಳಿದರು.

2+2 ಸಚಿವರ ಸಂವಾದವು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಡುವೆ ನಡೆಯಿತು. ಜಂಟಿ ಪತ್ರಿಕಾಗೋಷ್ಠಿಯಲ್ಲಿ, ಉಕ್ರೇನ್ ಬಿಕ್ಕಟ್ಟು, ಪ್ರಜಾಸತ್ತಾತ್ಮಕ ಮತ್ತು ಸುರಕ್ಷಿತ ಇಂಡೋ-ಪೆಸಿಫಿಕ್, ಕೋವಿಡ್ -19, ಭಯೋತ್ಪಾದನೆ ನಿಗ್ರಹ ಸೇರಿದಂತೆ ಜಾಗತಿಕ ವಿಷಯಗಳ ಕುರಿತು ಚರ್ಚಿಸಲಾಗಿದೆ ಎಂದು ನಾಯಕರುಗಳು ತಿಳಿಸಿದ್ದಾರೆ.

ಇನ್ನು ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ ಕಾರಣದಿಂದಾಗಿ ಹಲವಾರು ದೇಶಗಳು ರಷ್ಯಾದ ಮೇಲೆ ನಿರ್ಬಂಧವನ್ನು ಹೇರಿದೆ. ಈ ನಡುವೆ ಭಾರತದ ತೈಲ ಸಂಸ್ಕರಣಾ ಕಂಪನಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ (ಬಿಪಿಸಿಎಲ್) 20 ಲಕ್ಷ ಯೂರಲ್ಸ್ ಕಚ್ಚಾ ತೈಲವನ್ನು ರಷ್ಯಾದಿಂದ ಖರೀದಿ ಮಾಡಿದೆ ಎಂದು ವರದಿ ತಿಳಿಸಿದೆ. ಭಾರತದ ತೈಲ ಸಂಸ್ಕರಣಾ ಕಂಪನಿಗಳು ಕೂಡಾ ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ (ಬಿಪಿಸಿಎಲ್) 20 ಲಕ್ಷ ಯೂರಲ್ಸ್ ಕಚ್ಚಾ ತೈಲವನ್ನು ರಷ್ಯಾದಿಂದ ಖರೀದಿಸಿದ್ದು, ಇದು ಇದು ಮೇ ತಿಂಗಳಲ್ಲಿ ಸಾಗಣೆ ಆಗಲಿದೆ ಎಂದು ಮಾಹಿತಿ ಲಭ್ಯವಾಗಿದೆ.

English summary
Ukraine-Russia War: India's monthly purchase of Russian oil less than what Europe buys in 1 afternoon Says Jaishankar to US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X