ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಕಿಗೆ ಲೈಂಗಿಕ ಪ್ರಚೋದನೆ ಅಮೆರಿಕದಲ್ಲಿ ಭಾರತೀಯ ಮೂಲದ ಯುವಕ ಬಂಧನ

By ಅನಿಲ್ ಆಚಾರ್
|
Google Oneindia Kannada News

ವಾಷಿಂಗ್ಟನ್, ನವೆಂಬರ್ 22: ಸಾಮಾಜಿಕ ಮಾಧ್ಯಮದ ಮೂಲಕ ಹನ್ನೊಂದು ವರ್ಷದ ಬಾಲಕಿಗೆ ಲೈಂಗಿಕ ಪ್ರಚೋದನೆ ನೀಡಿದ ಆರೋಪದಲ್ಲಿ ಇಪ್ಪತ್ತೆರಡು ವರ್ಷದ ಭಾರತೀಯ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನ್ಯೂಯಾರ್ಕ್ ನ ಬಫೆಲೋ ನಗರದ ಸಚಿನ್ ಅಜಿ ಭಾಸ್ಕರ್ ಬಂಧಿತ.

ಬಾಲಕಿಯರ ಅತ್ಯಾಚಾರ, ಕೊಲೆ; ಇಪ್ಪತ್ತು ವರ್ಷದ ಈ ಕ್ರೂರಿ ಬಾಯ್ಬಿಟ್ಟ ಭಯಾನಕ ಸತ್ಯ ಬಾಲಕಿಯರ ಅತ್ಯಾಚಾರ, ಕೊಲೆ; ಇಪ್ಪತ್ತು ವರ್ಷದ ಈ ಕ್ರೂರಿ ಬಾಯ್ಬಿಟ್ಟ ಭಯಾನಕ ಸತ್ಯ

10 ವರ್ಷದ ಜೈಲು ಶಿಕ್ಷೆ, ಗರಿಷ್ಠ ಜೀವಾವಧಿ ಶಿಕ್ಷೆ ಮತ್ತು 2,50,000 ಅಮೆರಿಕನ್ ಡಾಲರ್ ದಂಡ ವಿಧಿಸಬಹುದಾಗಿದೆ. ಸಹಾಯಕ ಯುಎಸ್ ಅಟಾರ್ನಿ ವೈ ಕ್ಸಿಯಾಂಗ್ ಮಾತನಾಡಿ, ಕಳೆದ ಆಗಸ್ಟ್ ನಲ್ಲಿ ಸಾಮಾಜಿಕ ಮಾಧ್ಯಮ ಬಳಸಿ ಭಾಸ್ಕರ್ ಬಫೆಲೋ ನಗರದಲ್ಲಿ ತನಗೆ ಹದಿನೈದು ವರ್ಷ ಎಂದು ಹೇಳಿಕೊಂಡಿದ್ದ ಹನ್ನೊಂದು ವರ್ಷದ ಬಾಲಕಿಯನ್ನು ಸಂಪರ್ಕಿಸಿದ್ದಾನೆ.

Indian origin 22 year old man arrested for luring girl into sex in US

ತನ್ನ ಕಾರಿನಲ್ಲಿ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ ಮತ್ತು ಆಕೆ ಜತೆಗೆ ಲೈಂಗಿಕ ಕ್ರಿಯೆ ನಡೆಸಿ, ಮೂರು ಗಂಟೆ ನಂತರ ವಾಪಸಾಗಿದ್ದಾನೆ. ಮೊದಲಿಗೆ ಆರೋಪಿಯನ್ನು ಯುಎಸ್ ಮ್ಯಾಜಿಸ್ಟ್ರೇಟ್ ನ್ಯಾ. ಕೆನೆತ್ ಸ್ಕ್ರಾಡರ್ ಎದುರು ಹಾಜರುಪಡಿಸಲಾಗಿದೆ ಮತ್ತು ಬಂಧನದ ವಿಚಾರಣೆ ಕಾಯ್ದಿರಿಸಲಾಗಿದೆ.

ಅಂದು ಬಹುಮಾನ ಪಡೆದಿದ್ದ ಪೊಲೀಸ್ ಪೇದೆ ಇಂದು ಜೈಲಿಗೆ! ಅಂದು ಬಹುಮಾನ ಪಡೆದಿದ್ದ ಪೊಲೀಸ್ ಪೇದೆ ಇಂದು ಜೈಲಿಗೆ!

ಮಕ್ಕಳ ಮೇಲಿನ ಶೋಷಣೆ ಟಾಸ್ಕ್ ಫೋರ್ಸ್ ಫೆಡರಲ್ ಬ್ಯುರೋದಿಂದ ತನಿಖೆ ನಡೆಸಿದ ನಂತರ ಕ್ರಿಮಿನಲ್ ದೂರು ದಾಖಲಿಸಲಾಗಿದೆ. ‌

English summary
A 22-year-old Indian-origin man in the US has been arrested and charged with sexual enticement of a minor girl through social media, authorities have said. Sachin Aji Bhaskar, a resident of New York's Buffalo city, faces a minimum penalty of 10 years in prison, maximum of life in prison and a USD 250,000 fine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X