• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಾವಿನ ಪಾಠ ಮಾಡುತ್ತಿರುವ ಟ್ರಂಪ್, ಎದುರಾಳಿ ವಿರುದ್ಧ ಬಿಡೆನ್ ವಾಗ್ದಾಳಿ

|

ಭಾರತದಲ್ಲಿ ಈಗಾಗಲೇ ಕೊರೊನಾ ವ್ಯಾಕ್ಸಿನ್ ಚುನಾವಣಾ ಅಸ್ತ್ರವಾಗಿದೆ. ಬಿಹಾರ ಚುನಾವಣೆ ಹಿನ್ನೆಲೆ ಕೇಂದ್ರ ಸರ್ಕಾರ ಬಿಹಾರಿಗಳಿಗೆ ಉಚಿತ ಲಸಿಕೆಯ ಆಫರ್ ನೀಡಿದೆ. ಇದು ದೇಶಾದ್ಯಂತ ವಿವಾದ ಎಬ್ಬಿಸಿರುವುದು ಆ ಕಡೆ ಇರಲಿ, ಮತ್ತೊಂದ್ಕಡೆ ಅಮೆರಿಕದಲ್ಲಿ ಕೂಡ ಕೊರೊನಾ ಲಸಿಕೆ ಚುನಾವಣಾ ಅಸ್ತ್ರವಾಗಿದೆ ಮಾರ್ಪಟ್ಟಿದೆ. ಟ್ರಂಪ್ ಎದುರಾಳಿ ಹಾಗೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಬಿಡೆನ್ ಈ ಆಶ್ವಾಸನೆ ನೀಡಿದ್ದಾರೆ. ತಾವು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದರೆ ಪ್ರತಿಯೊಬ್ಬ ಅಮೆರಿಕನ್ನರಿಗೂ ಕೊರೊನಾ ಲಸಿಕೆ ಉಚಿತವಾಗಿ ನೀಡುವುದಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ ಜೋ ಬಿಡೆನ್.

ಈ ಮೂಲಕ ಡೊನಾಲ್ಡ್ ಟ್ರಂಪ್‌ಗೆ ಬಿಡೆನ್ ತಿರುಗೇಟು ನೀಡಿದ್ದಾರೆ. ಅಮೆರಿಕನ್ ಎಲೆಕ್ಷನ್ ಡಿಬೆಟ್ ಬಳಿಕ ಪ್ರಚಾರ ಅಖಾಡಕ್ಕೆ ಮರಳಿರುವ ಬಿಡೆನ್ ಈ ಆಶ್ವಾಸನೆ ನೀಡಿದ್ದಾರೆ. ಇದು ಅಮೆರಿಕನ್ ವೋಟರ್ಸ್‌ ಸೆಳೆಯುವ ಜೊತೆಗೇ ಟ್ರಂಪ್‌ಗೂ ಟಾಂಗ್ ಕೊಟ್ಟಿದೆ. ನವೆಂಬರ್ 3ರಂದು ಅಮೆರಿಕದಲ್ಲಿ ಚುನಾವಣೆ ಕೊನೆಗೊಳ್ಳಲಿದ್ದು, ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆ ವರದಿ ಪ್ರಕಾರ ಬಿಡೆನ್ ಟ್ರಂಪ್‌ಗಿಂತ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇಷ್ಟೆಲ್ಲದರ ನಡುವೆ ವ್ಯಾಕ್ಸಿನ್ ಕುರಿತು ಬಿಡೆನ್ ನೀಡಿರುವ ಹೇಳಿಕೆ ಚುನಾವಣೆಯಲ್ಲಿ ಬಿಡೆನ್‌ಗೆ ಮತ್ತಷ್ಟು ಸಹಾಯಕವಾಗಲಿದೆ.

ಲಸಿಕೆ ಸಿಕ್ಕ ಕೂಡಲೇ ಹಂಚಿಕೆ..!

ಲಸಿಕೆ ಸಿಕ್ಕ ಕೂಡಲೇ ಹಂಚಿಕೆ..!

ಬಿಡೆನ್ ಪ್ರಕಾರ ಸಧ್ಯದಲ್ಲೇ ಲಸಿಕೆ ಸಿಗುವ ನಿರೀಕ್ಷೆ ಇದೆ, ಕೊರೊನಾ ಲಸಿಕೆ ಲಭ್ಯವಾದ ಕೂಡಲೇ ಬೃಹತ್ ಪ್ರಮಾಣದಲ್ಲಿ ಖರೀದಿ ಮಾಡುತ್ತೇವೆ. ತಕ್ಷಣ ಪ್ರತಿಯೊಬ್ಬ ಅಮೆರಿಕನ್ನರಿಗೂ ಕೊರೊನಾ ವ್ಯಾಕ್ಸಿನ್ ಸಿಗುವಂತೆ ಮಾಡುತ್ತೇವೆ ಎಂದಿದ್ದಾರೆ ಬಿಡೆನ್. ಆದರೆ ಈ ಆಶ್ವಾಸನೆ ನೆರವೇರಲು ಜೋ ಬಿಡೆನ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಬೇಕು. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಮತ್ತೊಂದು ಆಶ್ವಾಸನೆ ನೀಡಿರುವ ಬಿಡೆನ್, ಈ ಯೋಜನೆ ಕೇವಲ ಆರೋಗ್ಯ ವಿಮೆ ಇರುವವರಿಗೆ ಮಾತ್ರವಲ್ಲ, ವಿಮೆ ಇಲ್ಲದ ಬಡವರಿಗೂ ನಾವು ವ್ಯಾಕ್ಸಿನ್ ನೀಡಲು ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.

ಸಾವಿನ ಪಾಠ ಮಾಡುತ್ತಿರುವ ಟ್ರಂಪ್..!

ಸಾವಿನ ಪಾಠ ಮಾಡುತ್ತಿರುವ ಟ್ರಂಪ್..!

ಗುರುವಾರ ನಡೆದ ಅಮೆರಿಕದ 3ನೇ ಮತ್ತು 2020ರ ಕೊನೆಯ ಎಲೆಕ್ಷನ್ ಡಿಬೆಟ್ ವಿಷಯ ಪ್ರಸ್ತಾಪಿಸಿರುವ ಬಿಡೆನ್ ಟ್ರಂಪ್‌ಗೆ ಟಾಂಗ್ ಕೊಟ್ಟಿದ್ದಾರೆ. ಟ್ರಂಪ್ ಹೇಳ್ತಾರೆ ಕೊರೊನಾ ಸೋಂಕಿನ ಪ್ರಭಾವ ಕಡಿಮೆಯಾಗಿದೆ ಎಂದು. ಅಲ್ಲದೆ ಕೊರೊನಾ ಸೋಂಕು ನಮ್ಮಿಂದ ದೂರ ಹೋಗುತ್ತಿದೆ ಎಂದು. ನಾವು ಕೊರೊನಾ ಜೊತೆಗೇ ಬದುಕಬೇಕು ಎಂಬ ಪಾಠ ಹೇಳುತ್ತಾರೆ. ಆದರೆ ಚಳಿಗಾಲದ ವೇಳೆ ಅಮೆರಿಕದಲ್ಲಿ ಕೊರೊನಾದಿಂದ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಟ್ರಂಪ್ ಮಾತು ಕೇಳಿದರೆ ಕೊರೊನಾ ಜೊತೆಗೆ ಬದುಕುವುದು ಹಾಗಿರಲಿ, ಸಾಯುವುದನ್ನು ಕಲಿಯಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ ಬಿಡೆನ್.

2ನೇ ಅಲೆಯ ಪ್ರಭಾವಕ್ಕೆ ತತ್ತರ

2ನೇ ಅಲೆಯ ಪ್ರಭಾವಕ್ಕೆ ತತ್ತರ

ಯುರೋಪ್ ರಾಷ್ಟ್ರಗಳಲ್ಲಿ ಮಾತ್ರ ಕೊರೊನಾ 2ನೇ ಅಲೆ ಅಬ್ಬರಿಸುತ್ತಿಲ್ಲ. ಬದಲಾಗಿ ಅಮೆರಿಕದಲ್ಲಿಯೂ 2ನೇ ಅಲೆ ಪ್ರಭಾವ ಹೆಚ್ಚಾಗಿದ್ದು, ಕೊರೊನಾ ಸೋಂಕಿನ ಸುಳಿಗಾಳಿಯೇ ಎದ್ದಿದೆ. ನಿನ್ನೆ ಒಂದೇ ದಿನ ಮತ್ತೆ ದಾಖಲೆ ಪ್ರಮಾಣದಲ್ಲಿ ‘ಕೊರೊನಾ' ಕೇಸ್‌ಗಳು ಪತ್ತೆಯಾಗಿವೆ. ನಿನ್ನೆ ಒಂದೇ ದಿನ ಅಮೆರಿಕದಲ್ಲಿ ಬರೋಬ್ಬರಿ 83,010 ಜನರಿಗೆ ಡೆಡ್ಲಿ ‘ಕೊರೊನಾ' ಕನ್ಫರ್ಮ್ ಆಗಿದೆ. ಈ ಮೂಲಕ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 87 ಲಕ್ಷದ ಗಡಿ ದಾಟಿದೆ. ಹಾಗೇ 903 ಅಮೆರಿಕನ್ನರು ನಿನ್ನೆ ಕೊರೊನಾಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 2 ಲಕ್ಷ 29 ಸಾವಿರಕ್ಕೆ ತಲುಪಿದೆ. ಕಳೆದ ಹಲವು ತಿಂಗಳಿಂದಲೂ ವಿಶ್ವದ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಅಮೆರಿಕ ಮೊದಲನೇ ಸ್ಥಾನದಲ್ಲೇ ಕೂತಿದೆ.

  Corona ಓಡಿಸೋ ಸಮಯ ದೂರ ಇಲ್ಲಾ | Corona Vaccine | Oneindia Kannada
  ಕೊರೊನಾ ಪಟ್ಟಿಯಲ್ಲೂ ಅಮೆರಿಕ ದೊಡ್ಡಣ್ಣ..!

  ಕೊರೊನಾ ಪಟ್ಟಿಯಲ್ಲೂ ಅಮೆರಿಕ ದೊಡ್ಡಣ್ಣ..!

  ಒಂದೆಡೆ ಬ್ರೆಜಿಲ್‌ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದಾಗ ಬ್ರೆಜಿಲ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಹೋಗಬಹುದು ಎನ್ನಲಾಗಿತ್ತು. ಆದರೆ ಬಡರಾಷ್ಟ್ರ ಬ್ರೆಜಿಲ್‌ನಲ್ಲೂ ‘ಕೊರೊನಾ' ವೈರಸ್‌ನ ಪ್ರಭಾವ ಒಂದಷ್ಟು ತಗ್ಗಿದೆ. ಮತ್ತೊಂದೆಡೆ ಭಾರತದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಏರುತ್ತಿರುವುದನ್ನು ನೋಡಿ ಇದೇ ರೀತಿ ಭಾವಿಸಲಾಗಿತ್ತು. ಆದರೆ ಭಾರತದಲ್ಲೂ ಹೊಸ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಅಮೆರಿಕದಲ್ಲಿ ಮಾತ್ರ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಲೇ ಇಲ್ಲ. ಬದಲಾಗಿ ದಿನದಿಂದ ದಿನಕ್ಕೆ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಇಷ್ಟೆಲ್ದರ ಮಧ್ಯೆ ಬಿಡೆನ್ ಉಚಿತ ಲಸಿಕೆ ಭರವಸೆ ನೀಡಿರುವುದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

  English summary
  Joe Biden pledges if he elected as president of the United States, he will take necessary action to provide free corona vaccine for every American citizen.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X