• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಸ್ಪತ್ರೆಗಳಲ್ಲಿ ತುಂಬಿ ತುಳುಕುತ್ತಿದ್ದಾರೆ ‘ಕೊರೊನಾ’ ಸೋಂಕಿತರು..!

|

ನನಗೆ ಕೊರೊನಾ ಬಂದಿದೆ, ಚಿಕಿತ್ಸೆ ಕೊಡಿ ಅಂದರೆ ಆ ಕ್ಷಣ ವೈದ್ಯ ಏನು ಮಾಡಬೇಕು ಹೇಳಿ..? ತಕ್ಷಣಕ್ಕೆ ಸೋಂಕಿತನ ಪರೀಕ್ಷೆ ನಡೆಸಿ, ಕೊರೊನಾ ದೃಢ ಮಾಡಿಕೊಂಡು ಚಿಕಿತ್ಸೆ ಆರಂಭಿಸಬೇಕು. ಆದರೆ ಇಲ್ಲೊಂದು ದೇಶದಲ್ಲಿ ಕೊರೊನಾ ಸೋಂಕಿತರು ಆಸ್ಪತ್ರೆಗೆ ಬಂದರೆ ಕೈಮುಗಿದು ಹೇಳುತ್ತಾರಂತೆ, ಸ್ವಾಮಿ ಇಲ್ಲಿ ಬೆಡ್‌ಗಳು ಖಾಲಿ ಇಲ್ಲ ದಯವಿಟ್ಟು ಇಲ್ಲಿಗೆ ಬರಬೇಡಿ ಅಂತಾ. ಅರೆ ಯಾವ ದೇಶ ಇದು, ಅದೆಷ್ಟು ಬಡತನ ಇರಬೇಕು ಅಲ್ಲಿ ಅಂತಾ ಯೋಚಿಸಬೇಡಿ.

ಏಕೆಂದರೆ ನಾವು ವಿವರಿಸಿದ್ದು ಜಗತ್ತಿನ ಶ್ರೀಮಂತ ರಾಷ್ಟ್ರ, ಸಾಲದಕ್ಕೆ ಪವರ್‌ ಫುಲ್ ಕಂಟ್ರಿ ಅಂತಾ ಬಿರುದು ಪಡೆದಿರುವ ಅಮೆರಿಕದ ಕರುಣಾಜನಕ ಸ್ಥಿತಿಯನ್ನ. ದಿನಕ್ಕೆ ನೂರು, ಇನ್ನೂರು 'ಕೊರೊನಾ' ಸೋಂಕಿತರು ಪತ್ತೆಯಾಗುವ ದೇಶದಲ್ಲೇ ಭಯಪಡುವ ಸ್ಥಿತಿ ಇದೆ. ಇನ್ನು ಅಮೆರಿಕದ ಪರಿಸ್ಥಿತಿ ಊಹೆಗೂ ಸಿಲುಕುತ್ತಿಲ್ಲ, ಅಷ್ಟು ಚಿಂತಾಜನಕವಾಗಿದೆ. ದಿನಕ್ಕೆ ಲಕ್ಷ ಲಕ್ಷ ಜನರಿಗೆ ಕೊರೊನಾ ದೃಢವಾಗುತ್ತಿದೆ.

ಸಂಸತ್‌ನ ಆರ್ಥಿಕ ಪ್ಯಾಕೇಜ್‌ಗೆ ಸಹಿ ಹಾಕಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿರಿಕ್

ಈವರೆಗೂ 1 ಕೋಟಿ 93 ಲಕ್ಷ ಅಮೆರಿಕನ್ನರಿಗೆ ಮಹಾಮಾರಿ ಕೊರೊನಾ ಕನ್ಫರ್ಮ್ ಆಗಿದೆ. ಈ ಮಧ್ಯೆ 77 ಲಕ್ಷಕ್ಕೂ ಹೆಚ್ಚು ಆಕ್ಟಿವ್ ಕೇಸ್‌ಗಳು ಅಮೆರಿಕದ ಬುಡ ಅಲುಗಾಡಿಸಿದ್ದು, ಪ್ರತಿಯೊಂದು ಆಸ್ಪತ್ರೆಯೂ ತುಂಬಿ ತುಳುಕುತ್ತಿದೆ. ಅದರಲ್ಲೂ ಲಾಸ್ ಏಂಜಲೀಸ್ ಪಾಡು ತೀರಾ ಗಂಭೀರವಾಗಿದೆ.

‘ಹಾಲಿವುಡ್’ ತವರು ಈಗ ನರಕ

‘ಹಾಲಿವುಡ್’ ತವರು ಈಗ ನರಕ

ಇಷ್ಟು ದಿನಗಳ ಕಾಲ ಜಗತ್ತಿನ ಸಿನಿಮಾ ಕ್ಷೇತ್ರವನ್ನ ಬೆರಳ ತುದಿಯಲ್ಲಿ ಹಿಡಿದು ಆಡಿಸಿದ್ದ ಹಾಲಿವುಡ್ ಮಂದಿ ಈಗ ಜೀವ ಉಳಿದರೆ ಸಾಕಪ್ಪಾ ಅಂತಾ ಗೋಗರೆಯುವಂತಾಗಿದೆ. ಏಕೆಂದರೆ ಹಾಲಿವುಡ್ ತವರು ಮನೆಯಲ್ಲಿ ಸ್ಮಶಾನ ಮೌನ ನರಕ ಸದೃಶ ವಾತಾವರಣ ನಿರ್ಮಾಣವಾಗಿದೆ. ಹಾಲಿವುಡ್ ಹರಡಿರುವ ಲಾಸ್ ಏಂಜಲೀಸ್ ಸ್ತಬ್ಧವಾಗಿದೆ. ಅಲ್ಲಿ ಪ್ರತಿನಿತ್ಯ ಹತ್ತಾರು ಸಾವಿರ ಜನರಿಗೆ ಕೊರೊನಾ ದೃಢವಾಗುತ್ತಿದ್ದು, ಕೊರೊನಾ ಸೋಂಕಿಗೆ ಮಹಾನಗರಿಯಲ್ಲಿ ಚಿಕಿತ್ಸೆ ನೀಡಲು ಒಂದೇ ಒಂದು ಆಸ್ಪತ್ರೆ ಬಾಕಿ ಉಳಿದಿಲ್ಲ. ಹೀಗಾಗಿ ಸೋಂಕಿತರಿಗೆ ಚಿಕಿತ್ಸೆ ಸಿಗದೆ ಅವರೆಲ್ಲಾ ನರಳಿ ನರಳಿ ಪ್ರಾಣ ಬಿಡುವ ಸ್ಥಿತಿ ನಿರ್ಮಾಣವಾಗಿದೆ.

3 ಲಕ್ಷ 39 ಸಾವಿರ ಅಮೆರಿಕನ್ನರು ಬಲಿ

3 ಲಕ್ಷ 39 ಸಾವಿರ ಅಮೆರಿಕನ್ನರು ಬಲಿ

ಅಮೆರಿಕದಲ್ಲಿ ಈವರೆಗೂ 1 ಕೋಟಿ 93 ಲಕ್ಷ ಜನರಿಗೆ ಕೊರೊನಾ ದೃಢವಾಗಿದ್ದರೆ ಒಟ್ಟು 3 ಲಕ್ಷ 39 ಸಾವಿರ ಅಮೆರಿಕನ್ನರು ಕೊರೊನಾ ಎಂಬ ಮಹಾಮಾರಿಗೆ ಬಲಿಯಾಗಿದ್ದಾರೆ. ಇಡೀ ಜಗತ್ತಿನಲ್ಲಿ 17 ಲಕ್ಷದ 60 ಸಾವಿರ ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದರೆ, ಅಮೆರಿಕ ಒಂದರಲ್ಲೇ 3 ಲಕ್ಷ 39 ಸಾವಿರ ಜನರನ್ನ ಈ ಡೆಡ್ಲಿ ಕೊರೊನಾ ಬಲಿ ಪಡೆದಿದೆ. ಹಾಗಾದರೆ ಲೆಕ್ಕ ಹಾಕಿ ಅಮೆರಿಕದ ಸ್ಥಿತಿ ಹೇಗಿರಬೇಡ ಎಂಬುದನ್ನ. ಅಲ್ಲಿನ ಜನ ಚಿಕಿತ್ಸೆ ಪಡೆಯಲು ಹೇಗೆಲ್ಲಾ ಪರದಾಡಿರಬೇಡ ಅಂತಾ.

ಅಮೆರಿಕದ ಮಾಡೆರ್ನಾ ಲಸಿಕೆ ಪಡೆದ ವೈದ್ಯರಲ್ಲಿ ತೀವ್ರ ಅಲರ್ಜಿ

ಕೆಲಸ ಇಲ್ಲದೆ ಬೀದಿಗೆ ಬಿದ್ದ ಜನ

ಕೆಲಸ ಇಲ್ಲದೆ ಬೀದಿಗೆ ಬಿದ್ದ ಜನ

ಹೊರಗಿಂದ ನೋಡುವ ಜನರಿಗೆ ಅಮೆರಿಕ ಶ್ರೀಮಂತ ದೇಶ, ಬಡತನ ಇಲ್ಲವೇ ಇಲ್ಲ ಎಂಬಂತೆ ಕಾಣುತ್ತದೆ. ಆದರೆ ದೂರದ ಬೆಟ್ಟ ನುಣ್ಣಗೆ ಎಂಬ ಗಾದೆ ಮಾತು ಅಮೆರಿಕದ ಆರ್ಥಿಕ ಸ್ಥಿತಿಗೆ ಒಪ್ಪುತ್ತದೆ. ಅಮೆರಿಕದ ಸ್ಥಿತಿ ಬಗ್ಗೆ ಹೊರಗಿನಿಂದ ಊಹೆ ಮಾಡಿಕೊಳ್ಳುವ ಜನರಿಗೆ ಅಲ್ಲಿ ಎಲ್ಲವೂ ನೆಟ್ಟಗಿದೆ ಎಂಬಂತೆ ಕಂಡರೂ, ಪರಿಸ್ಥಿತಿ ಮಾತ್ರ ವ್ಯತಿರಿಕ್ತವಾಗಿದೆ. ಅಮೆರಿಕದಲ್ಲಿ ಇಂದಿಗೂ ಕೋಟ್ಯಂತರ ಜನ ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಈ ಮಧ್ಯೆ ಕೊರೊನಾ ಬೇರೆ ಬಂದು ಅಪ್ಪಳಿಸಿದ್ದು, ಹತ್ತಾರು ಕೋಟಿ ಜನರಿಗೆ ಕೆಲಸವೇ ಇಲ್ಲದಂತಾಗಿದೆ. ಜನರು ಕೆಲಸ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.

ಮಾಸ್ಕ್ ವಿಚಾರಕ್ಕೆ ಮಹಾಯುದ್ಧ..!

ಮಾಸ್ಕ್ ವಿಚಾರಕ್ಕೆ ಮಹಾಯುದ್ಧ..!

ಅಮೆರಿಕದಲ್ಲಿ 2020ರ ಚುನಾವಣೆ ಮಾಸ್ಕ್ ಹಾಕುವವರು ಹಾಗೂ ಮಾಸ್ಕ್ ಹಾಕದೇ ಇರುವವರ ನಡುವಿನ ಮಹಾಯುದ್ಧವಾಗಿ ಮಾರ್ಪಟ್ಟಿದೆ. ಟ್ರಂಪ್ ಮತ್ತು ಬೆಂಬಲಿಗರು ಮಾಸ್ಕ್ ತೊಡುವ ವಿಚಾರಕ್ಕೆ ವಿರೋಧವನ್ನ ತೋರುತ್ತಾ ಬಂದಿದ್ದರೆ, ಬಿಡೆನ್ ಮತ್ತು ಡೆಮಾಕ್ರಟಿಕ್ ನಾಯಕರು ಮಾಸ್ಕ್ ಕಡ್ಡಾಯ ಮಾಡಿ ಎನ್ನುತ್ತಿದ್ದಾರೆ. ಆದರೆ ಟ್ರಂಪ್ ಮಾತ್ರ ಮಾಸ್ಕ್ ವಿಚಾರವಾಗಿ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದರು. ಕೊರೊನಾ ವಿರುದ್ಧ ಮಾಸ್ಕ್ ಉಪಯೋಗಕ್ಕೆ ಬರುವುದಿಲ್ಲ ಎಂಬ ಅರ್ಥದಲ್ಲಿ ಹೇಳಿಕೆಗಳನ್ನ ನೀಡಿದ್ದರು.

ಟ್ರಂಪ್ ಎಡವಟ್ಟಿನಿಂದ ಸಮಸ್ಯೆ ಉಲ್ಬಣ

ಟ್ರಂಪ್ ಎಡವಟ್ಟಿನಿಂದ ಸಮಸ್ಯೆ ಉಲ್ಬಣ

ಅಮೆರಿಕದ ಇಂದಿನ ಸ್ಥಿತಿಗೆ ನಿರ್ಗಮಿತ ಅಧ್ಯಕ್ಷ ಟ್ರಂಪ್ ನೇರ ಕಾರಣ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ. ಡೊನಾಲ್ಡ್ ಟ್ರಂಪ್ ಅಮೆರಿಕದ ನಾಯಕನಾಗಿ, ಅಮೆರಿಕನ್ನರಿಗೆ ಸರಿಯಾಗಿ ಮಾರ್ಗದರ್ಶನವನ್ನ ನೀಡುವ ಬದಲು, ದಾರಿ ತಪ್ಪಿಸಿದ್ದರು. ಮಾಸ್ಕ್ ಬೇಡ, ವ್ಯಾಕ್ಸಿನ್ ಅಗತ್ಯವಿಲ್ಲ ಎಂಬಂತಹ ಹೇಳಿಕೆ ನೀಡುತ್ತಾ ಅಮೆರಿಕನ್ನರು ದಾರಿತಪ್ಪುವಂತೆ ಮಾಡಿದ್ರು. ಇದರಿಂದ ಅಮೆರಿಕದಲ್ಲಿ ಭಯಾನಕ ವಾತಾವರಣ ಎದುರಾಗಿದೆ. ಲಕ್ಷಾಂತರ ಜನರ ಸಾವಿಗೆ ಟ್ರಂಪ್ ಕಾರಣ ಎಂಬ ಆರೋಪ ವಿಪಕ್ಷಗಳಿಂದ ಕೇಳಿಬರುತ್ತಿದೆ. ಇಷ್ಟೆಲ್ಲದರ ಮಧ್ಯೆ ಆರ್ಥಿಕ ಪುನಶ್ಚೇತನಕ್ಕೆ ಲಕ್ಷ ಲಕ್ಷ ಕೋಟಿ ರೂಪಾಯಿ ಸುರಿಯುತ್ತಿದ್ದು, ಅಮೆರಿಕದ ಆರ್ಥಿಕ ಸ್ಥಿತಿ ಎಷ್ಟು ಬೇಗ ಸುಧಾರಿಸುತ್ತೆ ಎಂಬುದನ್ನ ಕಾದು ನೋಡಬೇಕಿದೆ.

English summary
Heart of the Hollywood, also California's biggest city Los Angeles hospitals are filled with corona patients. Corona patients are suffered to get treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X