ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲಸ ಕಳೆದುಕೊಂಡ ಎಚ್-1 ಬಿ ಉದ್ಯೋಗಿಗಳಿಗೆ ಹೊರೆಯಾದ 'ಆರೋಗ್ಯ ವಿಮೆ'

|
Google Oneindia Kannada News

ಅಮೇರಿಕಾದಲ್ಲಿ ಎಚ್-1 ಬಿ ವೀಸಾ ಹೊಂದಿರುವ ಪೈಕಿ ಕೆಲವರು ಈಗಾಗಲೇ ಉದ್ಯೋಗ ಕಳೆದುಕೊಂಡಿದ್ದರೆ, ಹಲವರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಕೆಲಸ ಕಳೆದುಕೊಂಡು ಯು.ಎಸ್ ನಲ್ಲಿರುವ ಎಚ್-1 ಬಿ ವೀಸಾ ಹೊಂದಿರುವ ಉದ್ಯೋಗಿಗಳು ಎಂಪ್ಲಾಯರ್-ಸ್ಪಾನ್ಸರ್ಡ್ ಆರೋಗ್ಯ ವಿಮೆಯನ್ನು ಮುಂದುವರೆಸಲು ಬಯಸಿದರೆ, ತಮ್ಮ ಮತ್ತು ತಮ್ಮ ಕುಟುಂಬದ ವಿಮೆಗಾಗಿ ಹೆಚ್ಚು ಮೊತ್ತವನ್ನು ಪಾವತಿ ಮಾಡುವುದು ಅನಿವಾರ್ಯವಾಗಿದೆ.

ಕೊರೊನಾ ತಂದ ಆಪತ್ತು: ಡೊನಾಲ್ಡ್ ಟ್ರಂಪ್ ರಾಜಕೀಯ ಭವಿಷ್ಯಕ್ಕೆ ಕುತ್ತು?ಕೊರೊನಾ ತಂದ ಆಪತ್ತು: ಡೊನಾಲ್ಡ್ ಟ್ರಂಪ್ ರಾಜಕೀಯ ಭವಿಷ್ಯಕ್ಕೆ ಕುತ್ತು?

''ಕೋವಿಡ್-19 ನಂತಹ ಪ್ಯಾಂಡೆಮಿಕ್ ಸಂದರ್ಭದಲ್ಲಿ ಉದ್ಯೋಗಿಗಳು ಎಂಪ್ಲಾಯರ್-ಸ್ಪಾನ್ಸರ್ಡ್ ಆರೋಗ್ಯ ವಿಮೆಯನ್ನು ಮುಂದುವರೆಸುವುದು ಉತ್ತಮ'' ಅಂತ ತಜ್ಞರು ಸಲಹೆ ಏನೋ ನೀಡಿದ್ದಾರೆ. ಆದ್ರೆ, ಕೆಲಸ ಕಳೆದುಕೊಂಡವರಿಗೆ ಮಾತ್ರ ಆರೋಗ್ಯ ವಿಮೆ 'ಹೊರೆ'ಯಾಗಿ ಪರಿಣಮಿಸಿದೆ.

ಕೊರೊನಾದಿಂದ ಕಕ್ಕಾಬಿಕ್ಕಿಯಾದ ಅಮೆರಿಕಾದಲ್ಲಿ ವಲಸಿಗರಿಗೆ ಉದ್ಯೋಗವಿಲ್ಲ!ಕೊರೊನಾದಿಂದ ಕಕ್ಕಾಬಿಕ್ಕಿಯಾದ ಅಮೆರಿಕಾದಲ್ಲಿ ವಲಸಿಗರಿಗೆ ಉದ್ಯೋಗವಿಲ್ಲ!

ಕೋವಿಡ್-19 ಸಂದರ್ಭದಲ್ಲಿ ಒಂದುಕಡೆ ನಿರುದ್ಯೋಗ.. ಇನ್ನೊಂದು ಕಡೆ ದುಬಾರಿ ಆರೋಗ್ಯ ವಿಮೆ.. ಇದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಎಚ್-1 ಬಿ ವೀಸಾ ಹೊಂದಿರುವವರಿಗೆ 'ಶಾಪ'ವಾಗಿದೆ.

ಮುಂದುವರೆಸುವ ಆಯ್ಕೆ ಕಾರ್ಮಿಕರಿಗೆ ಬಿಟ್ಟಿದ್ದು.!

ಮುಂದುವರೆಸುವ ಆಯ್ಕೆ ಕಾರ್ಮಿಕರಿಗೆ ಬಿಟ್ಟಿದ್ದು.!

ಕನ್ಸಾಲಿಡೇಟೆಡ್ ಓಮ್ನಿಬಸ್ ಬಜೆಟ್ ರೀಕನ್ಸಿಲಿಯೇಷನ್ ಆಕ್ಟ್-1985 ಅನ್ವಯ, ತಮಗೆ ಮತ್ತು ತಮ್ಮ ಕುಟುಂಬಗಳಿಗೆ ಆರೋಗ್ಯ ಪ್ರಯೋಜನಗಳನ್ನು ಮುಂದುವರೆಸಲು ಆಯ್ಕೆ ಮಾಡುವ ಹಕ್ಕನ್ನು ಕಾರ್ಮಿಕರಿಗೆ ನೀಡಲಾಗಿದೆ. ''ಆರೋಗ್ಯ ವಿಮೆಯನ್ನು ಎಂಪ್ಲಾಯರ್ ನೀಡಿದ್ದರೆ, ಕಾಯ್ದೆ ಅನ್ವಯ ಉದ್ಯೋಗ ಕಳೆದುಕೊಂಡವರಿಗೆ ಆರೋಗ್ಯದ ವಿಮೆಯನ್ನು ಮುಂದುವರೆಸುವ ಆಯ್ಕೆಯನ್ನು ಎಂಪ್ಲಾಯರ್ ನೀಡಬೇಕು'' ಎನ್ನುತ್ತಾರೆ ವಕೀಲ ಸೈರಸ್.ಡಿ.ಮೆಹ್ತಾ.

ಕೆಲಸ ಕಳೆದುಕೊಂಡ್ಮೇಲೆ ಸಂಪೂರ್ಣ ವೆಚ್ಚ ಭರಿಸಬೇಕು

ಕೆಲಸ ಕಳೆದುಕೊಂಡ್ಮೇಲೆ ಸಂಪೂರ್ಣ ವೆಚ್ಚ ಭರಿಸಬೇಕು

''ಎಂಪ್ಲಾಯರ್-ಸ್ಪಾನ್ಸರ್ಡ್ ಆರೋಗ್ಯ ವಿಮೆಯ ಪ್ಲಾನ್ ಗಳು ಉತ್ತಮ ಗುಣಮಟ್ಟದ್ದಾಗಿರುತ್ತವೆ. ಉತ್ತಮ ಯೋಜನೆಗಳನ್ನು ವಿಮಾ ಕಂಪನಿಗಳಿಂದ ರಿಯಾಯಿತಿ ಗುಂಪು ದರದಲ್ಲಿ ಎಂಪ್ಲಾಯರ್ ಗಳು ಖರೀದಿಸುತ್ತಾರೆ. ಇದರಲ್ಲಿ ಹೆಚ್ಚಿನ ಪ್ರೀಮಿಯಮ್ ಅನ್ನು ಎಂಪ್ಲಾಯರ್ ಪಾವತಿಸಿದರೆ, ಸ್ವಲ್ಪ ಮೊತ್ತವನ್ನು ಮಾತ್ರ ಉದ್ಯೋಗಿಗಳು ಪಾವತಿಸುತ್ತಾರೆ. ಆದರೆ, ಕೆಲಸವನ್ನು ಕಳೆದುಕೊಂಡಾಗ, ವಿಮೆಯ ಸಂಪೂರ್ಣ ವೆಚ್ಚವನ್ನು ಉದ್ಯೋಗಿ ಪಾವತಿಸಬೇಕಾಗುತ್ತದೆ''

''ಎಚ್-1 ಬಿ ವೀಸಾ ಹೊಂದಿರುವವರು ಎಂಪ್ಲಾಯರ್-ಸ್ಪಾನ್ಸರ್ಡ್ ಆರೋಗ್ಯ ವಿಮೆಯ ಪ್ಲಾನ್ ಗಳನ್ನು ಮುಂದುವರೆಸಿದರೆ, ಯಾವುದೇ ಅಡೆತಡೆಗಳಿಲ್ಲದೆ ಪ್ರಯೋಜನ ಪಡೆಯಬಹುದು. ಅದರಲ್ಲೂ ಮೆಡಿಕಲ್ ಹೆಲ್ಪ್ ಅವಶ್ಯವಿರುವವರೆಗೆ ಈ ವಿಮೆ ಸಹಕಾರಿಯಾಗುತ್ತದೆ'' ಎನ್ನುತ್ತಾರೆ ಸೈರಸ್.ಡಿ.ಮೆಹ್ತಾ.

ನಿರುದ್ಯೋಗಿಗಳಿಗೆ ದುಬಾರಿ

ನಿರುದ್ಯೋಗಿಗಳಿಗೆ ದುಬಾರಿ

''ಎಚ್-1 ಬಿ ವೀಸಾ ಹೊಂದಿರುವ ಉದ್ಯೋಗಿಗಳು ವರ್ಷಕ್ಕೆ ಸರಾಸರಿ $70,000 - $ 120,000 ಗಳಿಸುತ್ತಾರೆ. ಕೆಲಸ ಕಳೆದುಕೊಂಡ ಬಳಿಕ ಉದ್ಯೋಗಿ 100% ಪ್ರೀಮಿಯಮ್ ಕಟ್ಟಬೇಕಾಗುತ್ತದೆ. 20 ವರ್ಷ ಮೇಲ್ಪಟ್ಟ ಒಬ್ಬ ಉದ್ಯೋಗಿಯ ವಿಮೆಗೆ ತಿಂಗಳಿಗೆ $200-$300 ಖರ್ಚಾದರೆ, 30 ವರ್ಷ ಮೇಲ್ಪಟ್ಟವರಿಗೆ $350-$450 ವೆಚ್ಚವಾಗುತ್ತದೆ. ತಮ್ಮ ಉದ್ಯೋಗ ಆಧಾರಿತ ವಿಮೆಯನ್ನು ಕಳೆದುಕೊಳ್ಳುವ ಅನೇಕ ಜನರು ಕಾಯ್ದೆ ಮೂಲಕ ಆ ವ್ಯಾಪ್ತಿಯನ್ನು ವಿಸ್ತರಿಸಬಹುದು. ನಿರುದ್ಯೋಗಿಗಳು ಸಂಪೂರ್ಣ ಪ್ರೀಮಿಯಂ ಪಾವತಿಸಬೇಕಾಗಿರುವ ಕಾರಣ ಇದು ಹಲವರಿಗೆ ದುಬಾರಿಯಾಗಬಹುದು'' ಅಂತಾರೆ ದಿ ಶರ್ಮಾ ಲಾ ಆಫೀಸ್ ನ ಅಶ್ವಿನ್ ಶರ್ಮಾ.

ವಿಳಂಬ ಧೋರಣೆ

ವಿಳಂಬ ಧೋರಣೆ

ಯು.ಎಸ್.ಸಿ.ಐ.ಎಸ್ ತೋರುವ ವಿಳಂಬ ಧೋರಣೆಯಿಂದಾಗಿ ವಿಮೆಯ ಪ್ರಯೋಜನಗಳನ್ನು ಉಳಿಸಿಕೊಳ್ಳಲು ಉದ್ಯೋಗಿಗಳಿಗೆ ಸಾಧ್ಯವಾಗುತ್ತಿಲ್ಲ.

ಉದ್ಯೋಗ ಸಂಸ್ಥೆಯ ಮೂಲಕ ಆರೋಗ್ಯ ವಿಮೆ ಲಭ್ಯವಿಲ್ಲದಿದ್ದರೆ, ಎಚ್-1 ಬಿ ವೀಸಾ ಹೊಂದಿರುವವರು ಪೂರಕ ಅಲ್ಪಾವಧಿಯ ಅಥವಾ ವಿಸಿಟರ್ ವಿಮೆಯನ್ನು ಪಡೆಯಬಹುದು ಎನ್ನುತ್ತಾರೆ ವಕೀಲ ವಿಕ್ರಮ್ ಶ್ರಾಫ್.

English summary
Employees on H1B visas in USA, who have lost jobs have to bear the burden of Medical Insurance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X