• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡೊನಾಲ್ಡ್ ಟ್ರಂಪ್ ಡಿಸ್ಚಾರ್ಜ್; ಮಾಸ್ಕ್ ಇಲ್ಲದೆ ಸಂಚಾರ!

|

ವಾಷಿಂಗ್ಟನ್, ಅಕ್ಟೋಬರ್ 06: ಕೋವಿಡ್ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಡಿಸ್ಚಾರ್ಜ್ ಆಗಿದ್ದಾರೆ. ಆದರೆ, ಶ್ವೇತ ಭವನದಲ್ಲಿ ಮಾಸ್ಕ್ ಇಲ್ಲದೇ ಅವರು ಸಂಚಾರ ನಡೆಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ವಾಲ್ಟರ್ ರೀಡ್ ರಾಷ್ಟ್ರೀಯ ಸೇನಾ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡೊನಾಲ್ಡ್ ಟ್ರಂಪ್ ಡಿಸ್ಚಾರ್ಜ್ ಆದರು. ಹೆಲಿಕಾಪ್ಟರ್ ಮೂಲಕ ಅವರು ಶ್ವೇತ ಭವನಕ್ಕೆ ವಾಪಸ್ ಆದರು.

ಅಭಿಮಾನಿಗಳಿಗೆ ಧನ್ಯವಾದ ಹೇಳದೆ ಒರಟ ಎನಿಸಿಕೊಳ್ಳಬೇಕಿತ್ತೆ?: ಟ್ರಂಪ್

ಸೋಮವಾರ ಟ್ರಂಪ್ ಅಭಿಮಾನಿಗಳಿಗೆ ಅಚ್ಚರಿ ನೀಡುವುದಾಗಿ ಟ್ವೀಟರ್‌ನಲ್ಲಿ ವಿಡಿಯೋ ಹಾಕಿದ್ದರು. ಆಸ್ಪತ್ರೆಯಿಂದ ಕಾರಿನಲ್ಲಿ ಹೊರ ಬಂದು ಆಸ್ಪತ್ರೆ ಬಳಿ ಜಮಾವಣೆಗೊಂಡಿದ್ದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದರು.

ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ಮೊಳಗಿದ ಆಕ್ರೋಶ, ನಿಯಮ ಪಾಲಿಸಲಿಲ್ವಾ ಅಮೆರಿಕ ಅಧ್ಯಕ್ಷ..?

ಕಾರಿನಲ್ಲಿ ಸಂಚಾರ ನಡೆಸುವಾಗ ಮಾಸ್ಕ್ ಹಾಕಿದ್ದ ಟ್ರಂಪ್, ಶ್ವೇತ ಭವನದಲ್ಲಿ ಮಾಸ್ಕ್ ಇಲ್ಲದೇ ಸಂಚಾರ ನಡೆಸುತ್ತಿದ್ದಾರೆ. ಕೋವಿಡ್ ಸೋಂಕು ತಗುಲಿದ್ದ ಟ್ರಂಪ್ ಶುಕ್ರವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಟ್ರಂಪ್‌ಗೆ ಕೊರೊನಾ: ನಿಂತು ಹೋಗುತ್ತಾ ಅಮೆರಿಕ ಅಧ್ಯಕ್ಷೀಯ ಚುನಾವಣೆ..?

ಆಸ್ಪತ್ರೆಯಲ್ಲಿದ್ದಾಗಲೇ ಸರಣಿ ಟ್ವೀಟ್‌ಗಳನ್ನು ಡೊನಾಲ್ಡ್ ಟ್ರಂಪ್ ಮಾಡುತ್ತಿದ್ದರು. ಅವುಗಳಲ್ಲಿ ರಾಜಕೀಯವೇ ಹೆಚ್ಚಾಗಿತ್ತು. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಪ್ರಚಾರ ಕಾರ್ಯ ನಡೆಯುತ್ತಿದೆ. ಟ್ರಂಪ್ ಆಸ್ಪತ್ರೆಗೆ ದಾಖಲಾದ ಹಿನ್ನಲೆಯಲ್ಲಿ ಅವರ ಪ್ರಚಾರ ಕಾರ್ಯಕ್ರಮಗಳನ್ನು ಮುಂದೂಡಲಾಗಿತ್ತು.

   Muttappa Rai ಪುತ್ರ Ricky Rai ಮನೆ ಮೇಲೆ CCB ದಾಳಿ | Oneindia kannada

   ವಾಲ್ಟರ್ ರೀಡ್ ರಾಷ್ಟ್ರೀಯ ಸೇನಾ ವೈದ್ಯಕೀಯ ಕೇಂದ್ರದಲ್ಲಿ ಟ್ರಂಪ್ ದಾಖಲಾಗುತ್ತಿದ್ದಂತೆ ಅಲ್ಲಿನ ಜನ ಸಂದಣಿ ಹೆಚ್ಚಾಗಿತ್ತು. ಸೋಮವಾರ ಕಾರಿನಲ್ಲಿ ಆಸ್ಪತ್ರೆಯಿಂದ ಹೊರಗೆ ಬಂದಿದ್ದ ಟ್ರಂಪ್ ಅಭಿಮಾನಿಗಳತ್ತ ಕೈ ಬೀಸಿದ್ದರು.

   English summary
   America president Donald Trump discharged from Walter Reed National Military Medical Center where he is being treated for COVID-19.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X