ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಎಚ್ಚರಿಕೆ ಲೆಕ್ಕಿಸದ ಟ್ರಂಪ್: ದಲೈಲಾಮ ಆಯ್ಕೆಯ ಕಾನೂನಿಗೆ ಸಹಿ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 28: ದಲೈಲಾಮ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಹಕ್ಕು ಟಿಬೆಟ್‌ಗೆ ಇದೆ ಎಂಬ ಹೇಳಿಕೆಯನ್ನು ಪುನರುಚ್ಚರಿಸುವ ಮಸೂದೆಗೆ ಚೀನಾ ಎಚ್ಚರಿಕೆಯನ್ನೂ ಮೀರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಟಿಬೆಟ್‌ನಲ್ಲಿ ನೆಲೆಸಿರುವ ಟಿಬೆಟ್ಟಿಯನ್ನರಿಗೆ ಭರವಸೆ ಮತ್ತು ನ್ಯಾಯವನ್ನು ಒದಗಿಸುವ ಕಠಿಣ ಸಂದೇಶ ಇದು ಎಂದು ಟಿಬೆಟ್ ಸರ್ಕಾರ ಈ ನಡೆಯನ್ನು ಸ್ವಾಗತಿಸಿದೆ.

ಟಿಬೆಟ್ ನೀತಿ ಮತ್ತು ಬೆಂಬಲ ಕಾಯ್ದೆಯನ್ನು ಅಮೆರಿಕದ ಸಂಸತ್ತು ಕಳೆದ ವಾರ ಅಂಗೀಕರಿಸಿತ್ತು. ಇದಕ್ಕೆ ಚೀನಾ ಕೆರಳಿತ್ತು. ಈ ಮಸೂದೆಯು ಚೀನಾದ ವ್ಯವಹಾರಗಳ ನಡುವೆ ಮೂಗುತೂರಿಸುವ ಪ್ರಯತ್ನ ಎಂದು ಅಲ್ಲಿನ ವಿದೇಶಾಂಗ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿತ್ತು.

ಭಾರತದಿಂದಲೇ ನನ್ನ ಉತ್ತರಾಧಿಕಾರಿ ಎಂದು ಚೀನಾಕ್ಕೆ ಟಾಂಗ್ ಕೊಟ್ಟ ದಲೈಲಾಮಭಾರತದಿಂದಲೇ ನನ್ನ ಉತ್ತರಾಧಿಕಾರಿ ಎಂದು ಚೀನಾಕ್ಕೆ ಟಾಂಗ್ ಕೊಟ್ಟ ದಲೈಲಾಮ

'ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸುವಂತೆ ಮತ್ತು ಈ ನಕಾರಾತ್ಮಕ ವಿಧಿಗಳು ಹಾಗೂ ಕಾಯ್ದೆಗಳಿಗೆ ಸಹಿ ಹಾಕುವ ಮೂಲಕ ಕಾನೂನು ರೂಪಿಸದಂತೆ ಅಮೆರಿಕಕ್ಕೆ ಕೋರುತ್ತೇವೆ. ಇದು ನಮ್ಮ ಮುಂದಿನ ಸಹಕಾರ ಹಾಗೂ ದ್ವಿಪಕ್ಷೀಯ ಸಂಬಂಧಗಳಿಗೆ ಹಾನಿಯುಂಟುಮಾಡುತ್ತದೆ' ಎಂದು ಮಸೂದೆಯನ್ನು ಅಮೆರಿಕ ಸಂಸತ್ತು ಅಂಗೀಕರಿಸಿದ ಬಳಿಕ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಮಗ್ ವೆನ್ಬಿನ್ ಹೇಳಿದ್ದರು.

Donald Trump Defies China Warning Signs Bill To Stop Chinese Move On Dalai Lamas Succession

ಈ ಮಸೂದೆಯು ಟಿಬೆಟ್‌ನ ಮುಖ್ಯ ನಗರ ಲ್ಹಾಸಾದಲ್ಲಿ ಅಮೆರಿಕದ ರಾಯಭಾರ ಕಚೇರಿಯನ್ನು ಸ್ಥಾಪಿಸುವುದು ಮತ್ತು 14ನೇ ದಲೈಲಾಮ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಟಿಬೆಟ್ಟಿಯನ್ನರ ಪರಮಾಧಿಕಾರವನ್ನು ಎತ್ತಿಹಿಡಿಯುವುದು ಹಾಗೂ ಟಿಬೆಟ್ ಪರಿಸರವನ್ನು ಸಂರಕ್ಷಿಸುವುದನ್ನು ಒಳಗೊಂಡಿದೆ.

1959 ರಿಂದ ದಲೈ ಲಾಮಾ ಆತಿಥ್ಯ ವಹಿಸಿದ್ದಕ್ಕೆ ಭಾರತಕ್ಕೆ ಧನ್ಯವಾದ ಎಂದ ಅಮೆರಿಕಾ1959 ರಿಂದ ದಲೈ ಲಾಮಾ ಆತಿಥ್ಯ ವಹಿಸಿದ್ದಕ್ಕೆ ಭಾರತಕ್ಕೆ ಧನ್ಯವಾದ ಎಂದ ಅಮೆರಿಕಾ

ಮುಂದಿನ ದಲೈಲಾಮರ ಆಯ್ಕೆಯಲ್ಲಿ ಚೀನಾ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳಲು ಅಂತಾರಾಷ್ಟ್ರೀಯ ಸಹಭಾಗಿತ್ವವನ್ನು ರಚಿಸುವ ಬಗ್ಗೆ ಅಮೆರಿಕ ಉದ್ದೇಶಿಸಿದೆ. ತಮ್ಮ ಪೂರ್ವಾಧಿಕಾರಿ ಪಂಚೆನ್ ಲಾಮರನ್ನಾಗಿ ದಲೈಲಾಮ ಆಯ್ಕೆ ಮಾಡಿದ್ದ ಬಾಲಕ ಗೆದುಮ್ ನ್ಯಿಮಾ ಅವರನ್ನು 1995ರಲ್ಲಿ ಬಂಧಿಸಿದ್ದ ಚೀನಾ, ತನ್ನದೇ ಪಂಚೆನ್ ಲಾಮರನ್ನು ನೇಮಕ ಮಾಡಿತ್ತು. ಆಕ ಬಾಲಕ ಗೆದುಮ್ ಅವರಿಗೆ ಆರು ವರ್ಷವಷ್ಟೇ ಆಗಿತ್ತು. ದಲೈಲಾಮ ಸ್ಥಾನಕ್ಕೆ ಆಯ್ಕೆ ಮಾಡುವಾಗ ಬೀಜಿಂಗ್‌ನ ಒಪ್ಪಿಗೆ ಅತ್ಯಗತ್ಯ ಎಂದು ಚೀನಾ ಹೇಳಿಕೊಂಡಿದೆ. ಇದನ್ನು ಟಿಬೆಟ್ ತಿರಸ್ಕರಿಸಿದೆ.

English summary
US President Donald Trump has singned a bill to stop interference in selection of Dalai Lama's succession.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X