ಡೊನಾಲ್ಡ್ ಟ್ರಂಪ್ ವಿರುದ್ಧ ಐತಿಹಾಸಿಕ ವಾಗ್ದಂಡನೆ ಪ್ರಕ್ರಿಯೆ

ವಾಷಿಂಗ್ಟನ್, ಜನವರಿ 13: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಾಗ್ದಂಡನೆ ಪ್ರಕ್ರಿಯೆಗೆ ಅಮೆರಿಕ ಸಂಸತ್ತು ಮುಂದಾಗಿದೆ. ಜನಪ್ರತಿನಿಧಿ ಸಭೆಯಲ್ಲಿ ಡೆಮಾಕ್ರಟಿಕ್ ಸದಸ್ಯರು ಕಚೇರಿಯಿಂದ ಡೊನಾಲ್ಡ್ ಟ್ರಂಪ್ ಅವರನ್ನು ತೆಗೆದುಹಾಕುವ ಐತಿಹಾಸಿಕ ಕ್ರಮಕ್ಕೆ ಹೆಜ್ಜೆ ಇರಿಸಿದ್ದು, ಇದಕ್ಕೆ ರಿಪಬ್ಲಿಕ್ ಪಕ್ಷದ ಐವರು ಸದಸ್ಯರೂ ಕೈಜೋಡಿಸಿದ್ದಾರೆ.

ಟ್ರಂಪ್ ಅಧಿಕಾರಾವಧಿಯಲ್ಲಿ ಎಂಟು ದಿನಗಳು ಬಾಕಿ ಉಳಿದಿರುವಂತೆಯೇ ಜನಪ್ರತಿನಿಧಿ ಸಭೆಯಲ್ಲಿ ಬುಧವಾರ ವಾಗ್ದಂಡನೆಗೆ ಮತಚಲಾವಣೆ ನಡೆಯುತ್ತಿದೆ. ಕಳೆದ ವಾರ ಕ್ಯಾಪಿಟಲ್ ಹಿಲ್‌ನಲ್ಲಿ ಬೆಂಬಲಿಗರು ಗುಂಪುಗೂಡಿ ಹಿಂಸಾಚಾರ ನಡೆಸಲು ಡೊನಾಲ್ಡ್ ಟ್ರಂಪ್ ಕುಮ್ಮಕ್ಕು ನೀಡಿದ ಆರೋಪದಡಿ ಅವರ ವಿರುದ್ಧ ವಾಗ್ದಂಡನೆಗೆ ಗುರಿಪಡಿಸಲಾಗುತ್ತಿದೆ.

ಸೆನೆಟ್‌ನಲ್ಲಿ ಈಗಲೂ ರಿಪಬ್ಲಿಕನ್ ಪ್ರಾಬಲ್ಯ ಇದೆ. ಹೀಗಾಗಿ ವಾಗ್ದಂಡನೆ ಪ್ರಕ್ರಿಯೆ ವೇಳೆ ಭಾರಿ ಗದ್ದಲ ನಡೆಯುವ ಸಾಧ್ಯತೆ ಇದೆ. ಟ್ರಂಪ್ ಅವರನ್ನು ವಜಾಗೊಳಿಸಲು ಸಾಕಷ್ಟು ಸಮಯ ಅಥವಾ ರಾಜಕೀಯ ಪ್ರಕ್ರಿಯೆ ನಡೆಯುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

Democrats In House Of Representatives Pushes Historic Impeachment Vote Against Trump

ಉಪಾಧ್ಯಕ್ಷ ಮೈಕ್ ಪೆನ್ಸ್ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪದಚ್ಯುತಗೊಳಿಸುವ ಅಮೆರಿಕ ಸಂವಿಧಾನದ 25ನೇ ತಿದ್ದುಪಡಿಯನ್ನು ಜಾರಿಗೆ ತರಲು ನಿರಾಕರಿಸಿದ ಬಳಿಕ ಡೆಮಾಕ್ರಟಿಕ್ ಪಕ್ಷದ ವಾಗ್ದಂಡನೆ ಮತಚಲಾವಣೆಗೆ ಮುಂದಾಗಿದೆ.

'ನಮ್ಮ ದೇಶದ ಹಿತಾಸಕ್ತಿ ಅಥವಾ ಸಂವಿಧಾನದ ಒಳಿತಿಗೆ ಅಂತಹ ನಡೆ ಪೂರಕವಾಗಿದೆ ಎಂದು ನನಗೆ ಅನಿಸುತ್ತಿಲ್ಲ' ಎಂಬುದಾಗಿ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರಿಗೆ ಬರೆದಿದ್ದ ಪತ್ರದಲ್ಲಿ ಪೆನ್ಸ್ ಹೇಳಿದ್ದರು.

ಪತ್ರದ ಹೊರತಾಗಿಯೂ ಪೆನ್ಸ್ ಅವರು ತಿದ್ದುಪಡಿ ಜಾರಿಗೆ ತರುವಂತೆ ಸಭೆಯಲ್ಲಿ ಔಪಾಚಾರಿಕವಾಗಿ ನಿರ್ಣಯ ಕೈಗೊಳ್ಳಲಾಯಿತು. 223-205 ಮತಗಳು ಪದಚ್ಯುತಿ ನಿಯಮದ ಪರವಾಗಿ ಚಲಾವಣೆಗೊಂಡವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+