ಅಧಿಕಾರ ಹಸ್ತಾಂತರ ತಡವಾದರೆ ಕೊರೊನಾ ಲಸಿಕೆಯೂ ವಿಳಂಬ: ಬೈಡನ್ ಎಚ್ಚರಿಕೆ
ವಾಷಿಂಗ್ಟನ್ , ನವೆಂಬರ್ 19: ಒಂದೊಮ್ಮೆ ಡೊನಾಲ್ಡ್ ಟ್ರಂಪ್ ಅಧಿಕಾರ ಹಸ್ತಾಂತರ ವಿಳಂಬ ಮಾಡಿದರೆ ಕೊರೊನಾ ಲಸಿಕೆಯೂ ವಿಳಂಬವಾಗುತ್ತದೆ ಎಂದು ಜೋ ಬೈಡನ್ ಎಚ್ಚರಿಕೆ ನೀಡಿದ್ದಾರೆ.
ನ.03 ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಒಪ್ಪಿಕೊಳ್ಳುವುದಕ್ಕೆ ಡೊನಾಲ್ಡ್ ಟ್ರಂಪ್ ಸಿದ್ಧರಿಲ್ಲ ಹಾಗೂ ಹಲವು ರಾಜ್ಯಗಳಲ್ಲಿ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಅಧಿಕಾರ ಹಸ್ತಾಂತರ ವಿಳಂಬವಾದಷ್ಟೂ ಕೆಲವು ವಾರ ಅಥವಾ ತಿಂಗಳು ಕೊವಿಡ್-19 ಲಸಿಕೆ ಯೋಜನೆ ಹಿಂದಕ್ಕೆ ಬೀಳಲಿದೆ ಎಂದು ಬೈಡನ್ ಎಚ್ಚರಿಸಿದ್ದಾರೆ.

ಕೊವಿಡ್-19 ಆರೋಗ್ಯ ಸೇವೆಗಳಲ್ಲಿ ನಿರತರಾಗಿರುವವರೊಂದಿಗೆ ವರ್ಚ್ಯುಯಲ್ ಸಭೆ ನಡೆಸಿರುವ ಬೈಡನ್, ಅಧಿಕಾರ ಹಸ್ತಾಂತರದೆಡೆಗೆ ಕೆಲಸ ಮಾಡುತ್ತಿರುವ ತಮ್ಮ ತಂಡಕ್ಕೆ ನಿರ್ಗಮಿಸುತ್ತಿರುವ ಅಧ್ಯಕ್ಷರ ತಂಡದಿಂದ ಸಕಾರಾತ್ಮಕ ಸ್ಪಂದನೆ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಈ ವರೆಗೂ ನಮಗೆ ಯಾವೆಲ್ಲಾ ಮಾಹಿತಿ ಬೇಕೋ ಅದನ್ನು ಪಡೆದುಕೊಳ್ಳುವುದಕ್ಕೆ ನಮ್ಮ ತಂಡಕ್ಕೆ ಸಾಧ್ಯವಾಗಿಲ್ಲ, ಲಸಿಕೆ ಯಾವಾಗ ಬರಲಿದೆ, ಅದನ್ನು ವಿತರಣೆ ಮಾಡುವುದಕ್ಕೆ ಸಿದ್ಧವಾಗಿರುವ ಯೋಜನೆಗಳೇನು ಎಂಬ ಬಗ್ಗೆ ಮಾಹಿತಿ ಇಲ್ಲದಂತಾಗಿದೆ ಎಂದು ಬೈಡನ್ ಹೇಳಿದ್ದಾರೆ.
ಆಡಳಿತ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಯನ್ನು ಒಪ್ಪಿಕೊಂಡು ಸರ್ಕಾರದ ಅಂಕಿ-ಅಂಶಗಳು, ಮಾಹಿತಿಗಳು ಸಂಪೂರ್ಣವಾಗಿ ಆತನಿಗೆ ಲಭ್ಯವಾಗುವಂತೆ ಮಾಡಬೇಕು.












Click it and Unblock the Notifications