ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯ್ಯೋ ವಿಧಿಯೇ.. ಪತಿ ಕೋಮಾದಿಂದ ಎಚ್ಚರಗೊಳ್ಳುವ ಹೊತ್ತಿಗೆ ಪತ್ನಿ ಸಾವಿನ ಮನೆಗೆ

|
Google Oneindia Kannada News

ವಾಷಿಂಗ್ಟನ್, ಮೇ 14: ವೃದ್ಧರೊಬ್ಬರು ಅಂತೂ ಸಾವನ್ನು ಗೆದ್ದು ಕೋಮಾದಿಂದ ಹೊರ ಬಂದಿದ್ದರು, ಪತ್ನಿಗಾಗಿ ಹುಡುಕಾಡಿದ ಆಕೆ ಎಲ್ಲೂ ಕಾಣ್ತಿಲ್ಲ, ಯಾರೂ ಆಕೆಯ ಬಗ್ಗೆ ಮಾತೂ ಆಡ್ತಿಲ್ಲ ಕೊನೆಗೆ ಧೈರ್ಯ ಮಾಡಿ ಆಕೆ ಎಲ್ಲಿ ಎಂದು ಕೇಳಿಯೇಬಿಟ್ಟರು.

ಮಕ್ಕಳು ಹೇಳಿದ ಸುದ್ದಿ ಕೇಳಿ ಆಘಾತವಾಗಿತ್ತು, ಇವರು ಕೊರೊನಾ ವೈರಸ್‌ನಿಂದಾಗಿ ಉಸಿರಾಟದ ಸಮಸ್ಯೆಯಾಗಿ ಕೋಮಾಗೆ ಜಾರಿದ್ದರು. ಬಳಿಕ ಪತ್ನಿಗೂ ಕೂಡ ಕೊರೊನಾ ಸೋಂಕು ತಗುಲಿ ಹೃದಯಾಘಾತದಿಂದ ಪ್ರಾಣಬಿಟ್ಟಿದ್ದರು. ವೃದ್ಧ ಚೇತರಿಸಿಕೊಳ್ಳುತ್ತಿದ್ದಾರೆ ಅವರೇ ಉಸಿರಾಡುತ್ತಿದ್ದಾಗ, ಕೃತಕ ಉಸಿರಾಟದ ಅಗತ್ಯ ಇಲ್ಲವಾಗಿದೆ.

ಅಮೆರಿಕದಲ್ಲಿ ಕೊರೊನಾ ಸಾವಿನ ಬೇಟೆ, ಒಂದೇ ದಿನ 1813 ಸಾವುಅಮೆರಿಕದಲ್ಲಿ ಕೊರೊನಾ ಸಾವಿನ ಬೇಟೆ, ಒಂದೇ ದಿನ 1813 ಸಾವು

ವೃದ್ಧ ಇರುವ ಆಸುಪಾಸಿನಲ್ಲಿ ಒಟ್ಟು 95 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ. ನೋಕ್ಸ್ ಮಾರ್ಚ್ 30ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಕೋಮಾಕ್ಕೆ ಜಾರಿದ್ದರು.

US Man Woke From Coma Later Died Of Coronavirus

ಬಳಿಕ ಅವರಿಗೆ ಎಚ್ಚರವಾದಾಗ ಅವರ ಪತ್ನಿಯ ಬಗ್ಗೆಯೇ ಮೊದಲು ವಿಚಾರಿಸಿದ್ದರು. ಪದೇ ಪದೇ ಅವರು ವಿಚಾರಿಸಿದ ಬಳಿಕ ಅನಿವಾರ್ಯವಾಗಿ ಸತ್ಯವನ್ನು ಹೇಳಲೇಬೇಕಾಯಿತು.

ಪತಿಯನ್ನು ಆಸ್ಪತ್ರೆಗೆ ಕಳುಹಿಸಿದ ಬಳಿಕ ಆಕೆಯ ಆರೋಗ್ಯ ಅಷ್ಟು ಸರಿ ಇರಲಿಲ್ಲ, ಪತಿಯ ಬಗ್ಗೆಯೇ ಆಲೋಚಿಸುತ್ತಿದ್ದರು ಪತಿಯನ್ನು ಆಕೆ ಜೂನಿಯರ್ ಎಂದು ಕರೆಯುತ್ತಿದ್ದಳು, ಆಕೆಯ 72 ಷರ್ವದ ಹುಟ್ಟು ಹಬ್ಬ ಇನ್ನೇನು 2 ದಿನ ಇದೆ ಎನ್ನುವಾಗ ಏಪ್ರಿಲ್ 7ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು.

ಈ ಸುದ್ದಿ ಕೇಳಿದ ಬಳಿಕ ನೋಕ್ಸ್ ಅವರ ಆರೋಗ್ಯ ಮತ್ತೆ ಹದಗೆಟ್ಟಿತ್ತು, ಕಾಲ ಮಕ್ಕಳು, ಮೊಮ್ಮಕ್ಕಳನ್ನು ಕರೆದು ಒಂದು ವಾರಗಳ ಕಾಲ ತಮ್ಮವರೊಂದಿಗೆ ಹೇಗಿರಬೇಕು, ಎಲ್ಲರನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಕುರಿತು ಪಾಠ ಮಾಡಿದ್ದರು.

ಕೊರೊನಾ ಮಹಾಮಾರಿ ನಮ್ಮಿಂದ ದೂರವಾಗದು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಕೊರೊನಾ ಮಹಾಮಾರಿ ನಮ್ಮಿಂದ ದೂರವಾಗದು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಏಪ್ರಿಲ್ 15 ರಂದು ನೋಕ್ಸ್ ಕೂಡ ಸಾವಿನ ಮನೆಗೆ ತೆರಳಿದರು. ಎರಡು ವರ್ಷಗಳ ಹಿಂದೆ ತಾಯಿಯ ಹುಟ್ಟುಹಬ್ಬವಾಗಿತ್ತು ಅಂದು ಸ್ನೇಹಿತರು, ಕುಟುಂಬದವರನ್ನು ಕರೆದು ಪಾರ್ಟಿ ಮಾಡಿದ್ದೆವು, ವಿಶೇಷ ಉಡುಗೊರೆಯನ್ನು ಕೊಟ್ಟಿದ್ದೆವು ಎಲ್ಲರೂ ಆ ದಿನವನ್ನು ಸಂತೋಷವಾಗಿ ಕಳೆದಿದ್ದೆವು ಎಂದು ಮಕ್ಕಳು ಹಳೆಯ ನೆನಪುಗಳನ್ನು ಮೆಲುಕುಹಾಕಿದ್ದಾರೆ.

English summary
When Lawrence Nokes, 69, was taken off the respirator on April 10, doctors told his family that he had a good chance of recovering.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X