ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಬಗ್ಗೆ ಮಹತ್ವದ ಸಂಶೋಧನೆ ಮಾಡುತ್ತಿದ್ದ ಚೀನಾದ ಪ್ರೊಫೆಸರ್ ಗುಂಡೇಟಿಗೆ ಬಲಿ!

|
Google Oneindia Kannada News

ಮೇ 7: ಡೆಡ್ಲಿ ಕೊರೊನಾ ವೈರಸ್ ಕುರಿತು ಮಹತ್ವದ ಸಂಶೋಧನೆ ಮಾಡುತ್ತಿದ್ದ ಚೀನಾದ ಪ್ರೊಫೆಸರ್ ಬಿಂಗ್ ಲಿಯು ಅಮೇರಿಕಾದ ತಮ್ಮ ನಿವಾಸದಲ್ಲಿ ಗುಂಡೇಟಿಗೆ ಬಲಿಯಾಗಿದ್ದಾರೆ.

ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದ 37 ವರ್ಷದ ಬಿಂಗ್ ಲಿಯು, ಪಿಟ್ಸ್ ಬರ್ಗ್ ನ ಉತ್ತರದಲ್ಲಿರುವ ರಾಸ್ ಟೌನ್ ಶಿಪ್ ನಲ್ಲಿರುವ ತಮ್ಮ ಮನೆಯೊಳಗೆ ಕಳೆದ ಶನಿವಾರ ಗುಂಡೇಟಿನಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಲೆ, ಕುತ್ತಿಗೆ ಭಾಗದಲ್ಲಿ ಗುಂಡೇಟಿನ ಗಾಯದ ಗುರುತು ಕಂಡುಬಂದಿದೆ ಎಂದು ರಾಸ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನೆರಡು ವರ್ಷ ಅಮೇರಿಕಾದಲ್ಲಿ ಕೊರೊನಾ ಕಂಟಕ ತಪ್ಪಿದ್ದಲ್ಲ!ಇನ್ನೆರಡು ವರ್ಷ ಅಮೇರಿಕಾದಲ್ಲಿ ಕೊರೊನಾ ಕಂಟಕ ತಪ್ಪಿದ್ದಲ್ಲ!

ಬಿಂಗ್ ಲಿಯು ಮನೆಯ ಮುಂದೆಯೇ 46 ವರ್ಷದ ಹಾವೋ ಗು ಎಂಬ ಮತ್ತೊಬ್ಬ ವ್ಯಕ್ತಿ ತನ್ನ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಬಿಂಗ್ ಲಿಯು ರನ್ನ ಕೊಂದ ಬಳಿಕ ಹಾವೋ ಗು ತಾನೇ ಶೂಟ್ ಮಾಡಿಕೊಂಡು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಡಿಟೆಕ್ಟಿವ್ ಹೇಳುವುದೇನು?

ಡಿಟೆಕ್ಟಿವ್ ಹೇಳುವುದೇನು?

''ಹಾವೋ ಗು ಮತ್ತು ಬಿಂಗ್ ಲಿಯುಗೆ ಪರಿಚಯ ಇರಬಹುದು. ಆದರೆ, ಬಿಂಗ್ ಲಿಯು ಚೀನಿ ಎಂಬ ಕಾರಣಕ್ಕೆ ಹತ್ಯೆಗೈದಿರುವ ಸಾಧ್ಯತೆ ಇಲ್ಲ'' ಅಂತ ಡಿಟೆಕ್ಟಿವ್ ಬ್ರಿಯಾನ್ ಕೊಹ್ಲೆಪ್ ತಿಳಿಸಿದ್ದಾರೆ.

ಸಂತಾಪ ಸೂಚಿಸಿದ ವಿಶ್ವವಿದ್ಯಾಲಯ

ಸಂತಾಪ ಸೂಚಿಸಿದ ವಿಶ್ವವಿದ್ಯಾಲಯ

''ಸಂಶೋಧಕ ಮತ್ತು ನೆಚ್ಚಿನ ಸಹೋದ್ಯೋಗಿ ಬಿಂಗ್ ಲಿಯು ಅವರ ದುರಂತ ಸಾವಿನಿಂದ ತೀವ್ರ ದುಃಖವಾಗಿದೆ. ಈ ಕಷ್ಟದ ಸಮಯದಲ್ಲಿ ವಿಶ್ವವಿದ್ಯಾಲಯವು ಬಿಂಗ್ ಲಿಯು ಅವರ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ನೋವು ಭರಿಸುವ ಶಕ್ತಿ ಸಿಗಲಿ'' ಎಂದು ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯ ಹೇಳಿದೆ.

ಶಾಕಿಂಗ್: ಚೀನಾದಲ್ಲಿ ಪತ್ತೆಯಾಗುವ ಮುನ್ನವೇ 'ಈ' ದೇಶದಲ್ಲಿತ್ತೇ ಕೊರೊನಾ?ಶಾಕಿಂಗ್: ಚೀನಾದಲ್ಲಿ ಪತ್ತೆಯಾಗುವ ಮುನ್ನವೇ 'ಈ' ದೇಶದಲ್ಲಿತ್ತೇ ಕೊರೊನಾ?

ಮಹತ್ವದ ಸಂಶೋಧನೆ ಮಾಡುತ್ತಿದ್ದರು

ಮಹತ್ವದ ಸಂಶೋಧನೆ ಮಾಡುತ್ತಿದ್ದರು

''SARS-Cov-2 ಸೋಂಕಿಗೆ ಕಾರಣವಾಗುವ ಸೆಲ್ಯುಲಾರ್ ಮೆಕ್ಯಾನಿಸಮ್ ಅರ್ಥ ಮಾಡಿಕೊಳ್ಳುವಲ್ಲಿ ಬಿಂಗ್ ಲಿಯು ಮಹತ್ವದ ಸಂಶೋಧನೆಗಳನ್ನು ಮಾಡುತ್ತಿದ್ದರು'' ಎಂದು ವಿಶ್ವವಿದ್ಯಾಲಯದ ಕಂಪ್ಯೂಟೇಶನಲ್ ಮತ್ತು ಸಿಸ್ಟಮ್ಸ್ ಬಯಾಲಜಿ ವಿಭಾಗದ ಬಿಂಗ್ ಲಿಯು ಸಹೋದ್ಯೋಗಿಗಳು ಹೇಳಿದ್ದಾರೆ.

ನಿಖರ ಕಾರಣ ಏನು.?

ನಿಖರ ಕಾರಣ ಏನು.?

ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರ್ ನಲ್ಲಿ ಕಂಪ್ಯೂಟೇಶನ್ ಸೈನ್ಸ್ ನಲ್ಲಿ ಪಿ.ಎಚ್.ಡಿ ಪಡೆದಿದ್ದ ಬಿಂಗ್ ಲಿಯು ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯದಲ್ಲೂ ಕಾರ್ಯನಿರ್ವಹಿಸಿದ್ದರು. ಬಳಿಕ ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ರಿಸರ್ಚ್ ಅಸೋಸಿಯೇಟ್ ಆದರು. ಕೊರೊನಾ ವೈರಸ್ ಕುರಿತು ಸಂಶೋಧನೆ ಮಾಡುತ್ತಿದ್ದ ಬಿಂಗ್ ಲಿಯು ಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

ಕೊರೊನಾ ರೋಗಿಗಳಿಗೆ 'ಈ' ಔಷಧಿ ಕೊಡಲು ಅಮೇರಿಕಾ ಗ್ರೀನ್ ಸಿಗ್ನಲ್!ಕೊರೊನಾ ರೋಗಿಗಳಿಗೆ 'ಈ' ಔಷಧಿ ಕೊಡಲು ಅಮೇರಿಕಾ ಗ್ರೀನ್ ಸಿಗ್ನಲ್!

English summary
Chinese Researcher Bing Liu was shot dead in US Home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X