• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಂಸತ್ ಭವನದಲ್ಲಿ ರಕ್ತದ ಕೋಡಿ ಹರಿಸಿದ್ದ ರಾಕ್ಷಸರು ಎಸ್ಕೇಪ್..!

|

ಹೊಡಿ ಮಗಾ, ಚುಚ್ಚು, ಇನ್ನೂ ಒಂದು ಇಕ್ಕು, ಅಲ್ನೋಡು ಅಲ್ನೋಡು, ಅವ್ನ ಹಿಡ್ಕೊಂಡು ಬಾರ್ಸು... ಅರೆರೆ ಇದು ಯಾವುದೋ ಕ್ರೈಂ ಸೀನ್ ಅಲ್ಲ ರೀ. ಜನವರಿ 6ರಂದು ಅಮೆರಿಕದ 'ಕ್ಯಾಪಿಟಲ್ ಹಿಲ್‌'ನಲ್ಲಿ ನಡೆದಿದ್ದ ಗಲಾಟೆಯ ವಾಸ್ತವ. ಹೌದು, ಟ್ರಂಪ್ ಬೆಂಬಲಿಗರು ಜನವರಿ 6ರಂದು ರೊಚ್ಚಿಗೆದ್ದು ಬಂದು ಸಂಸತ್ ಭವನ ಅಲುಗಾಡುವಂತೆ ಮಾಡಿದ್ದರು. 'ಕ್ಯಾಪಿಟಲ್ ಹಿಲ್‌'ನಲ್ಲಿ ಅಕ್ಷರಶಃ ರಕ್ತದ ಕೋಡಿ ಹರಿಸಿದ್ದರು. ಆದರೆ ಅವರೇ ಈಗ ಎಸ್ಕೇಪ್ ಆಗಿದ್ದಾರೆ.

ಯಾವಾಗ ಒಬ್ಬೊಬ್ಬರೇ ಗಲಾಟೆ ಕೇಸ್‌ನಲ್ಲಿ ಲಾಕ್ ಆಗೋಕೆ ಶುರುವಾದರೋ, ಆಗಿನಿಂದ ಮಿಕ್ಕವರು ಕಾಲಿಗೆ ಬುದ್ಧಿ ಹೇಳುತ್ತಿದ್ದಾರೆ. ಜನವರಿ 6ರಂದು ಹಿಂಸಾಚಾರ ನಡೆಯುವಾಗ ಅದನ್ನು ಪ್ರಚೋದನೆ ಮಾಡುತ್ತಾ, ಫೋಟೋ ತೆಗೆಯುತ್ತಾ, ಕೂಗಾಡುತ್ತಾ, ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕುತ್ತಾ ಹುಚ್ಚರಂತೆ ಆಡಿದ್ದವರು ಕಣ್ಣಿಗೆ ಕಾಣುತ್ತಿಲ್ಲ. ಅದು ಬಿಡಿ ಎಷ್ಟೋ ಜನ ಜೈಲು ಸೇರುವುದು ಪಕ್ಕಾ ಆಗುತ್ತಿದ್ದಂತೆ ತಮ್ಮ ಮೊಬೈಲ್ ಫೋನ್‌ಗಳನ್ನೇ ಸುಟ್ಟು ಹಾಕುತ್ತಿದ್ದಾರೆ. ಪೊಲೀಸರಿಗೆ ಯಾವುದೇ ಸಾಕ್ಷ್ಯಗಳು ಸಿಗದಂತೆ ತಮ್ಮ ದುಬಾರಿ ಬೆಲೆಯ ಫೋನ್‌ಗಳನ್ನು ನಾಶ ಮಾಡುತ್ತಿದ್ದಾರಂತೆ.

ಎಲ್ಲೋ ಹೋದ್ರು ಅವರೆಲ್ಲಾ..?

ಎಲ್ಲೋ ಹೋದ್ರು ಅವರೆಲ್ಲಾ..?

ಬೈಡನ್ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ಅಮೆರಿಕ ಪೊಲೀಸ್ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕ್ಯಾಪಿಟಲ್ ಹಿಲ್ ಗಲಭೆಕೋರರ ಹೆಡೆಮುರಿ ಕಟ್ಟಲು ಖೆಡ್ಡಾ ತೋಡಿದ್ದಾರೆ. ಹೀಗೆ ಎಲ್ಲೆಲ್ಲಿ ಹಿಂಸಾಚಾರ ನಡೆಸಿದ್ದವರು ಅಡಗಿದ್ದಾರೆ ಎಂಬುದನ್ನ ಹುಡುಕುತ್ತಿದ್ದಾರೆ. ಹೀಗಾಗಿ ಎಚ್ಚೆತ್ತುಕೊಂಡ ಕಿರಾತಕರು, ತಮ್ಮ ಮೊಬೈಲ್‌ಗಳನ್ನು ನಾಶ ಮಾಡುವ ಜೊತೆಗೆ ಸೋಷಿಯಲ್ ಮೀಡಿಯಾಗಳಿಂದ ಓಡಿ ಬಂದಿದ್ದಾರೆ. ಆ ದಿನ ಅಂದರೆ ಜನವರಿ 6ರಂದು ಹಿಂಸೆ ನಡೆಯುವಾಗ ಹಾಕಿದ್ದ ಪ್ರಚೋದನಕಾರಿ ಪೋಸ್ಟ್‌ಗಳನ್ನ ಕೂಡ ಸದ್ಯ ಡಿಲೀಟ್ ಮಾಡಿ ಬಿಸಾಕಿದ್ದಾರೆ. ಹೀಗಾಗಿ ಹಿಂಸೆ ನಡೆಸಿದ್ದ ಹಲವರು ಎಲ್ಲೋದರು ಅನ್ನೋದೇ ಗೊತ್ತಾಗುತ್ತಿಲ್ಲ.

ವಾಗ್ದಂಡನೆಯಿಂದ ಖುಲಾಸೆ ನಂತರ ಡೊನಾಲ್ಡ್ ಟ್ರಂಪ್ ವಾಗ್ದಾಳಿ

 230 ಜನರಿಗೆ ಜೈಲೂಟ..!

230 ಜನರಿಗೆ ಜೈಲೂಟ..!

ಈವರೆಗೂ ಅಮೆರಿಕದ ತನಿಖಾ ಸಂಸ್ಥೆಗಳು 230 ಜನರ ವಿರುದ್ಧ ಪ್ರಕರಣ ದಾಖಲಿಸಿವೆ. ಕ್ಯಾಪಿಟಲ್ ಹಿಲ್ ಅಟ್ಯಾಕ್ ಸಂಬಂಧ ಇವರನ್ನೆಲ್ಲಾ ಬಂಧಿಸಲಾಗಿದೆ. ಸಂಸತ್ ಭವನಕ್ಕೆ ನುಗ್ಗಿ ಹುಚ್ಚರಂತೆ ವರ್ತಿಸಿದ್ದೂ ಅಲ್ಲದೆ ಹಿಂಸೆ ನಡೆಸಿದ್ದರಂತೆ ಇವರು. ಇದನ್ನೆಲ್ಲಾ ತೀರಾ ಗಂಭೀರವಾಗಿ ಪರಿಗಣಿಸಿದ್ದ ಅಮೆರಿಕದ ಸಂಸದರು ಹಾಗೂ ಶಾಸಕರು ಪಕ್ಷಾತೀತವಾಗಿ ಟ್ರಂಪ್ ಮತ್ತು ಟ್ರಂಪ್ ಗ್ಯಾಂಗ್ ವಿರುದ್ಧ ತಿರುಗಿಬಿದ್ದರು. ಮತ್ತಷ್ಟು ಆರೋಪಿಗಳು ಸೆರೆಯಾಗುವ ಸಾಧ್ಯತೆ ಇದ್ದು, ಅವರಿಗಾಗಿ ಇಂಚಿಂಚು ಜಾಗವನ್ನೂ ತನಿಖಾಧಿಕಾರಿಗಳು ಬೆದಕುತ್ತಿದ್ದಾರೆ.

ಶಾಸಕರು ಕೂಡ ಅರೆಸ್ಟ್..!

ಶಾಸಕರು ಕೂಡ ಅರೆಸ್ಟ್..!

ಉನ್ನತ ಸ್ಥಾನದಲ್ಲಿದ್ದು ಜನತೆಗೆ ಒಳ್ಳೆಯದನ್ನೇ ಬಯಸಬೇಕಿದ್ದ ಕೆಲ ಶಾಸಕರು ಟ್ರಂಪ್ ಮಾತಿಗೆ ಮರುಳಾಗಿ, ಜನವರಿ 6ರಂದು ಹಿಂಸೆಗೆ ಪ್ರಚೋದನೆ ನೀಡಿದ್ದರು. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹಿಂಸಾಚಾರಕ್ಕೆ ಬೆಂಬಲ ನೀಡಿದ್ದರಂತೆ. ಇದೇ ಕಾರಣಕ್ಕೆ ಹಲವು ಶಾಸಕರು ಈಗಾಗಲೇ ಕಂಬಿ ಹಿಂದೆ ಬಿದ್ದಿದ್ದಾರೆ. ಇನ್ನಷ್ಟು ಶಾಸಕರಿಗೆ ಬಲೆ ಬೀಸಲಾಗಿದೆ. ಇದು ಅಮೆರಿಕದ ಇತಿಹಾಸವೇ ಮುಜುಗರ ಪಡುವಂತಹ ಘಟನೆಯಾಗಿದ್ದು, ಕಾನೂನು ರಚಿಸಿ ಸಮಾಜ ರಕ್ಷಿಸಬೇಕಿದ್ದ ಶಾಕಸರು ಕೂಡ ಅಶಾಂತಿ ಸೃಷ್ಟಿಸಿದ್ದು ವಿಪರ್ಯಾಸವಾಗಿದೆ. ಈ ವಿಚಾರದಲ್ಲಿ ಅಮೆರಿಕ ಈಗಾಗಲೇ ಜಗತ್ತಿನ ಮುಂದೆ ತಲೆತಗ್ಗಿಸಿ ನಿಲ್ಲಬೇಕಾದ ಸ್ಥಿತಿ ಎದುರಾಗಿದೆ.

ಶಾಸಕರು, ಒಲಿಂಪಿಕ್ ಚಿನ್ನದ ಪದಕ ಗೆದ್ದವರು ಕಂಬಿ ಹಿಂದೆ ಬಿದ್ದ ಕಥೆ ಇದು..!

ಪಾರ್ಲಿಮೆಂಟ್ ಒಳಗೆ ಸಿಗರೇಟ್, ಸಿಗಾರ್..!

ಪಾರ್ಲಿಮೆಂಟ್ ಒಳಗೆ ಸಿಗರೇಟ್, ಸಿಗಾರ್..!

ಕ್ಯಾಪಿಟಲ್ ಹಿಲ್ ಕೇವಲ ಕಟ್ಟಡವಲ್ಲ. ಅದು ಅಮೆರಿಕ ಹಾಗೂ ಅಮೆರಿಕನ್ನರ ಪಾಲಿಗೆ ಗರ್ಭಗುಡಿ ಇದ್ದಂತೆ. ಇಂತಹ ಪವಿತ್ರ ಸ್ಥಳದ ಮೇಲೆ ಟ್ರಂಪ್ & ಗ್ಯಾಂಗ್ ಅಟ್ಯಾಕ್ ಮಾಡಿತ್ತು. ಕ್ಯಾಪಿಟಲ್ ಹಿಲ್ ಗಲಭೆಗೆ ಮುನ್ನ ಟ್ರಂಪ್ ನಡೆಸಿದ ಪ್ರಚೋದನಾಕಾರಿ ಭಾಷಣ, ಬೆಂಬಲಿಗರನ್ನು ಒಳಗೆ ನುಗ್ಗುವಂತೆ ಪ್ರೇರಿಪಿಸಿತ್ತು. ಆದರೆ ಹೀಗೆ ಸಂಸತ್ ಕಟ್ಟಡದ ಒಳಗೆ ನುಗ್ಗಿದ ಟ್ರಂಪ್ ಬೆಂಬಲಿಗರು ಕೈಯಲ್ಲಿ ದೊಣ್ಣೆ, ಗನ್ ಸೇರಿದಂತೆ ಮಾರಕಾಸ್ತ್ರಗಳನ್ನ ಹಿಡಿದಿದ್ದರು. ಮಾತ್ರವಲ್ಲ ಸಂಸತ್ ಸದಸ್ಯರು ಕೂರುವ ಜಾಗದಲ್ಲಿ ಕೂತು ಸಿಗರೇಟ್ ಸೇದಿದ್ದಾರೆ, ಸಿಗಾರ್ ಹೊಡೆದಿದ್ದಾರೆ. ಇಷ್ಟು ಮಾತ್ರವಲ್ಲದೆ ಅಸಹ್ಯಕರವಾಗಿ ವರ್ತಿಸಿ, ಅವರೆಷ್ಟು ಸೈಕೋಗಳು ಎಂಬುದನ್ನ ಸಾಬೀತು ಮಾಡಿದ್ದಾರೆ. ಅದರಲ್ಲೂ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕಚೇರಿ ಮೊದಲ ಟಾರ್ಗೆಟ್ ಆಗಿತ್ತು.

English summary
Some of Capitol Hill rioters are escaped and destroying their phones to avoid get arrested by American police in riots case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X