• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕ್ಯಾಲಿಫ್ ಹಬ್ಬದ ವೇಳೆ ಶೂಟೌಟ್: 3 ಮಂದಿ ಸಾವು

|

ಗಿಲ್ರಾಯ್ (ಕ್ಯಾಲಿಫೋರ್ನಿಯಾ), ಜುಲೈ 29: ಉತ್ತರ ಕ್ಯಾಲಿಫೋರ್ನಿಯಾದ ಗಿಲ್ರಾಯ್ ಪ್ರದೇಶದಲ್ಲಿ ನಡೆಯುವ ವಾರ್ಷಿಕ ಗಾರ್ಲಿಕ್(ಬೆಳ್ಳುಳ್ಳಿ) ಹಬ್ಬದ ವೇಳೆ ಅಪರಿಚಿತ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಈ ಗುಂಡಿನ ದಾಳಿಗೆ ಕನಿಷ್ಠ 3 ಮಂದಿ ಬಲಿಯಾಗಿರುವ ವರದಿ ಬಂದಿದೆ.

ಭೂಮಿ ವ್ಯಾಜ್ಯದಲ್ಲಿ 9 ಮಂದಿಯನ್ನು ಗುಂಡು ಹಾರಿಸಿ ಕೊಂದರುಭೂಮಿ ವ್ಯಾಜ್ಯದಲ್ಲಿ 9 ಮಂದಿಯನ್ನು ಗುಂಡು ಹಾರಿಸಿ ಕೊಂದರು

ಗಿಲ್ರಾಯ್ ಗಾರ್ಲಿಕ್ ಫೆಸ್ಟಿವಲ್ ನಲ್ಲಿ ಮೂರು ಮಂದಿ ಮೃತಪಟ್ಟಿರುವುದನ್ನು ಪೊಲೀಸ್ ವಕ್ತಾರರು ದೃಢಪಡಿಸಿದ್ದಾರೆ. ಘಟನಾ ಸ್ಥಳದಲ್ಲಿ ಇನ್ನು ಉದ್ವಿಗ್ನ ವಾತಾವರಣ ಮುಂದುವರೆದಿದೆ. ಸಾರ್ವಜನಿಕರು ಗೊಂದಲದಿಂದ ಓಡಾಡುವ ದೃಶ್ಯಗಳು ಸಾಮಾಜಿಕ ಜಾಲಾ ತಾಣಗಳಲ್ಲಿ ಹಂಚಲಾಗುತ್ತಿದೆ.

ಸ್ಯಾನ್ ಒಸೆಯ ದಕ್ಷಿಣ ಭಾಗಕ್ಕೆ 48 ಕಿ.ಮೀ ದೂರದಲ್ಲಿರುವ ಗಿಲ್ರಾಯ್ ನಲ್ಲಿ 1979ರಲ್ಲಿ ಮೊದಲಿಗೆ ಮೂರು ದಿನಗಳ ವಾರ್ಷಿಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ಈ ಬೆಳ್ಳುಳ್ಳಿ ಹಬ್ಬದಲ್ಲಿ ಸ್ಥಳೀಯ ಬೆಳೆಗಾರರು ಮಾರಾಟಗಾರರು ತಮ್ಮ ಉತ್ಪನ್ನಗಳನ್ನು ಮಾರುತ್ತಾರೆ ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಹಬ್ಬದ ವಾತಾವಾರಣದಲ್ಲಿ ಪಟಾಕಿ ಸಿಡಿಸುತ್ತಿರಬಹುದು ಎಂದು ಮೊದಲಿಗೆ ಗೊಂದಲಕ್ಕೀಡಾಗಿದ್ದ ಸಾರ್ವಜನಿಕರಿಗೆ ನಂತರ ಇದು ಗುಂಡಿನ ದಾಳಿ ಎಂದು ತಿಳಿದು ಬಂದಿದೆ.

ಘಟನೆ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ವೀಟ್ ಮಾಡಿ, 'ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಯನ್ನು ಪೊಲೀಸರು ನೋಡಿಕೊಳ್ಳುತ್ತಾರೆ, ನೀವು ಹುಷಾರಾಗಿರಿ' ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ಸ್ಥಳೀಯ ಪೊಲೀಸರು ಘಟನೆ ಬಗ್ಗೆ ಕ್ಷಣ ಕ್ಷಣದ ಅಪ್ಡೇಟ್ ನೀಡುತ್ತಿದ್ದು, ಆತಂಕದ ವಾತಾವರಣವನ್ನು ತಿಳಿಗೊಳಿಸುತ್ತಿದ್ದಾರೆ.

English summary
Several people have been killed after a shooter opened fire at an annual food festival in Gilroy northern California.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X