ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಸೇನೆಯಿಂದ ಐಎಸ್‌ಐಎಸ್‌ ನಾಯಕನ ಹತ್ಯೆ: ಶ್ವೇತಭವನ

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 3: ಐಎಸ್‌ಎಸ್‌ ನಾಯಕನೊಬ್ಬನನ್ನು ಅಮೆರಿಕ ಸೇನೆ ಹತ್ಯೆ ಮಾಡಿರುವುದಾಗಿ ಶ್ವೇತ ಭವನ ಟ್ವೀಟ್ ಮಾಡಿದೆ.

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಐಸಿಸ್ ನಾಯಕ ಅಬು ಇಬ್ರಾಹಿಂ ಅಲ್-ಹಶಿಮಿ ಅಲ್-ಖುರೈಶಿ ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಾಹಿತಿ ನೀಡಿದ್ದಾರೆ ಎಂದು ಶ್ವೇತ ಭವನ ಟ್ವೀಟ್‌ನಲ್ಲಿ ತಿಳಿಸಿದೆ.

ವಾಯವ್ಯ ಸಿರಿಯಾದಲ್ಲಿ ನಡೆದ ದಾಳಿಯಲ್ಲಿ ಐಸಿಸ್ ಮುಖ್ಯಸ್ಥನನ್ನು ಕೊಲ್ಲಲಾಗಿದ್ದು, ನಮ್ಮ ಸಶಸ್ತ್ರ ಪಡೆಗಳ ಶೌರ್ಯಕ್ಕೆ ಧನ್ಯವಾದಗಳು, ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಲ್ಲಾ ಅಮೆರಿಕನ್ ಸೇನಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಶ್ವೇತ ಭವನದ ಮೂಲಗಳು ಸ್ಪಷ್ಟನೆ ನೀಡಿವೆ.

Biden Calls Death Of ISIS Leader a Warning To Terrorists Worldwide

ಅಮೆರಿಕದ ಸೇನೆ ಕಳೆದ ರಾತ್ರಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ಈ ಕಾರ್ಯಾಚರಣೆಯಲ್ಲಿ ಅಬು ಇಬ್ರಾಹಿಂ ಅಲ್-ಹಶಿಮಿ ಅಲ್-ಖುರೈಶಿಯನ್ನು ಕೊಲ್ಲಲಾಗಿದೆ ಎಂದು ಜೋ ಬೈಡನ್ ಸ್ಪಷ್ಟನೆ ನೀಡಿದ್ದಾರೆ.

ಅಲ್-ಖುರೈಶಿಯನ್ನು 2004ರಲ್ಲಿ ಇರಾಕ್‌ನಲ್ಲಿ ಯುಎಸ್ ನಡೆಸುತ್ತಿರುವ ಕ್ಯಾಂಪ್ ಬುಕ್ಕಾದಲ್ಲಿ ಬಂಧಿಸಲಾಗಿತ್ತು ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಇದಷ್ಟೇ ಅಲ್ಲ ಅಲ್-ಖುರೈಶಿಯು ಮಾಜಿ ಐಸಿಸ್ ನಾಯಕನಾದ ಅಬು ಬಕರ್ ಅಲ್-ಬಾಗ್ದಾದಿಯ ವಿಶ್ವಾಸಾರ್ಹ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದನು ಎಂದು ತಿಳಿದುಬಂದಿದೆ.

Recommended Video

U19 WorldCup Final ಪಂದ್ಯಕ್ಕೂ ಮುನ್ನ Kohli ವಿಶೇಷ ಟಿಪ್ಸ್ | Oneindia Kannada

2019ರ ಅಕ್ಟೋಬರ್‌ನಲ್ಲಿ ಅಮೆರಿಕ ನಡೆಸಿದ ಕಾರ್ಯಾಚರಣೆಯಲ್ಲಿ ಅಬು ಬಕರ್ ಅಲ್-ಬಾಗ್ದಾದಿ ಹತ್ಯೆಯಾದ ನಂತರ ಐಸಿಸ್​ನ ಹೊಣೆಗಾರಿಕೆಯನ್ನು ಅಲ್-ಖುರೈಶಿ ವಹಿಸಿಕೊಂಡಿದ್ದನೆಂದು ತಿಳಿದುಬಂದಿದೆ.

English summary
President Biden said that the raid targeting Abu Ibrahim al-Hashimi al-Qurayshi in Syria showed that American forces could “take out” terrorist threats anywhere in the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X