ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಈಜುಕೊಳದಲ್ಲಿ ಮೂರ್ಛೆ ಹೋದ ತಾಯಿ- ಮಗ ಮಾಡಿದ್ದೇನು?

|
Google Oneindia Kannada News

ಈಜುಕೊಳದಲ್ಲಿ ಈಜುವ ವೇಳೆ ಮೂರ್ಛೆ ಹೋದ ತಾಯಿಯನ್ನು ಹತ್ತು ವರ್ಷದ ಮಗ ರಕ್ಷಣೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 10 ವರ್ಷದ ಬಾಲಕನೊಬ್ಬ ಮುಳುಗುತ್ತಿದ್ದ ತನ್ನ ತಾಯಿಯನ್ನು ರಕ್ಷಿಸಿದ್ದಾನೆ. ಅವರ ಮನೆಯಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾದಿಂದ ದೃಶ್ಯ ಸೆರೆಯಾಗಿದೆ. ಗೇವಿನ್ ಕೀನಿ ಎಂಬ ಬಾಲಕ ತನ್ನ ತಾಯಿಯನ್ನು ರಕ್ಷಸಿ ಹೀರೋ ಎನಿಸಿಕೊಂಡಿದ್ದಾರೆ. ಈ ದೃಶ್ಯ ಎಬಿಸಿ ನ್ಯೂಸ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಹಂಚಿಕೊಂಡ ನಂತರ ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಗೇವಿನ್ ಸಮಯ ಪ್ರಜ್ಞೆಯನ್ನು ಜನ ಮೆಚ್ಚಿಕೊಂಡಿದ್ದಾರೆ.

ಈ ಘಟನೆ ಅಮೆರಿಕಾದ ಕಿಂಗ್‌ಸ್ಟನ್ನ ಒಕ್ಲಹೋಮಾದಲ್ಲಿ ನಡೆದಿದೆ. ಈಗ ವೈರಲ್ ಆಗಿರುವ ವಿಡಿಯೊದಲ್ಲಿ, ಗೇವಿನ್ ಕೊಳದತ್ತ ಓಡಿ ಬಂದು ಏಣಿಯಿಂದ ಜಿಗಿಯುವುದನ್ನು ಕಾಣಬಹುದು. ಕೊಳದಲ್ಲಿ ಮೂರ್ಛೆ ಹೊಂದಿದ್ದ ತಾಯಿ ನೀರಿನಲ್ಲಿ ಮುಳುಗುತ್ತಿದ್ದರು. ಆಗ ಗೇವಿನ್ ತಕ್ಷಣ ಅವರನ್ನು ಮೇಲೆತ್ತಿದ್ದಾರೆ. 10 ವರ್ಷದ ಗೇವಿನ್ ತನ್ನ ತಾಯಿಯನ್ನು ಏಣಿಯ ಕಡೆಗೆ ಕರೆದೊಯ್ದಿದ್ದಾರೆ. ಅಲ್ಲಿ ಅವಳು ಮೂರ್ಛೆ ಹೋಗಿರುವ ಸ್ಥಿತಿಯಲ್ಲಿರುವುದು ಕಾಣಬಹುದು. ಶೀಘ್ರದಲ್ಲೇ, ಅವರ ಅಜ್ಜ ಬಂದು ಮಹಿಳೆಯನ್ನು ರಕ್ಷಿಸಲು ಈಜುಕೊಳದಲ್ಲಿ ಹಾರಿ ಮಹಿಳೆ ಹಾಗು ಹುಡುಗನನ್ನು ತಬ್ಬಿಕೊಳ್ಳುತ್ತಾರೆ.

America: Mother faints in swimming pool: What did the son do?

"ಮನೆಯ ಹಿತ್ತಲಿನ ಕೊಳದಲ್ಲಿ ಮೂರ್ಛೆ ಹೋಗಿ ಮುಳುಗುತ್ತಿದ್ದ ತಾಯಿಯನ್ನು 10 ವರ್ಷದ ಗೇವಿನ್ ಕೀನಿ ಕಾರ್ಯಪ್ರವೃತ್ತರಾದ ಕ್ಷಣವೇ ರಕ್ಷಿಸಿದ್ದಾನೆ. ಹೋಮ್ ಸೆಕ್ಯುರಿಟಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ನಂತರ ಅವನ ಅಜ್ಜ ಸಹಾಯಕ್ಕಾಗಿ ಜಿಗಿಯುವವರೆಗೂ ಅವಳ ತಲೆಯನ್ನು ನೀರಿನ ಮೇಲೆ ಮುಳುಗದಂತೆ ನೋಡಿಕೊಳ್ಳುತ್ತಾನೆ" ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ವೈರಲ್ ವಿಡಿಯೊವನ್ನು ಇಲ್ಲಿ ನೋಡಿ:

ನೆಟಿಜನ್‌ಗಳು ಚಿಕ್ಕ ಹುಡುಗನ ಧೈರ್ಯವನ್ನು ಶ್ಲಾಘಿಸಿದ್ದಾರೆ ಮತ್ತು ಕಾಮೆಂಟ್‌ಗಳ ವಿಭಾಗದಲ್ಲಿ ಅವನನ್ನು ಹೊಗಳಿದ್ದಾರೆ. "ಎಲ್ಲಾ ನಾಯಕರು ಕ್ಯಾಪ್ಗಳನ್ನು ಧರಿಸುವುದಿಲ್ಲ, ಕೆಲವರು ಈಜು ಪ್ರಜ್ಞೆಯನ್ನು ಹೊಂದಿರುತ್ತಾರೆ" ಎಂದು ಬಳಕೆದಾರರು ಬರೆದಿದ್ದಾರೆ.

ಮತ್ತೊಬ್ಬ ಬಳಕೆದಾರರು, "ಈ ಮಗು ತನ್ನ ತಾಯಿಯ ಮೇಲೆ ಹೊಂದಿರುವ ಪ್ರೀತಿಯು ಅವಳು ಅವನನ್ನು ಎಷ್ಟು ಪ್ರೀತಿಸುತ್ತಾಳೆಂದು ತೋರಿಸುತ್ತದೆ" ಈ ವಿಡಿಯೋ ವೃರಲ್ ಬಳಿಕ, ಕಿಂಗ್‌ಸ್ಟನ್, ಒಕ್ಲಹೋಮಾ ಪೊಲೀಸ್ ಇಲಾಖೆಯು ನಂತರ ಗೇವಿನ್ ಅವರ ಧೈರ್ಯಕ್ಕಾಗಿ ಪ್ರಶಸ್ತಿಯನ್ನು ನೀಡಿದೆ ಎಂದು ಹೇಳಲಾಗಿದೆ.

English summary
A video of a ten-year-old son saving a mother who fainted while swimming in a swimming pool has gone viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X