ಬರ್ತ್‌ ಡೇ ಪಾರ್ಟಿಯಲ್ಲಿ ಗುಂಡು ಹಾರಿಸಿಕೊಂಡು 3 ವರ್ಷದ ಮಗು ಸಾವು

ವಾಷಿಂಗ್ಟನ್, ಅಕ್ಟೋಬರ್ 27: ಹುಟ್ಟುಹಬ್ಬದ ದಿನದಂದೇ 3 ವರ್ಷದ ಮಗುವೊಂದು ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ದುರ್ಘಟನೆ ಅಮೆರಿಕದಲ್ಲಿ ನಡೆದಿದೆ.

ಅಂದು ಬರ್ತ್ ಡೇ ಪಾರ್ಟಿ ನಡೆಯುತ್ತಿತ್ತು. ಸಾಕಷ್ಟು ಸ್ನೇಹಿತರು, ಕುಟುಂಬದವರೆಲ್ಲಾ ಒಂದೆಡೆ ಸೇರಿದ್ದರು. ಪೋಷಕರೆಲ್ಲಾ ಕಾರ್ಡ್ಸ್ ಆಡುತ್ತಿದ್ದರು.

ಮನೆಯ ಕೋಣೆಯೊಂದರಿಂದ ಗುಂಡು ಹಾರಿದ ಸದ್ದು ಕೇಳಿತ್ತು. ತಕ್ಷಣವೇ ಹೋಗಿ ನೋಡಿದಾಗ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಮಗು ಹೆಣವಾಗಿ ಮಲಗಿತ್ತು.

3 Year Old Boy Dies After Shooting Self During His Birthday Party In US

ಅಲ್ಲಿ ಬಂದಿದ್ದ ಸಂಬಂಧಿಯೊಬ್ಬರ ಜೇಬಿನಿಂದ ಪಿಸ್ತೂಲ್ ನೆಲಕ್ಕೆ ಬಿದ್ದಿತ್ತು. ಅದನ್ನು ತೆಗೆದುಕೊಂಡು ಹೋಗಿದ್ದ ಮುಗು ತಾನೇ ಶೂಟ್ ಮಾಡಿಕೊಂಡಿದೆ.

ವರ್ಷದ ಆರಂಭದಿಂದ ಇಲ್ಲಿಯವರೆಗೆ ಇಂತಹ 229ಕ್ಕೂ ಹೆಚ್ಚು ಪ್ರಕರಣಗಳು ನಡೆದಿವೆ. ಅದರಲ್ಲಿ 97 ಮಂದಿ ಸಾವನ್ನಪ್ಪಿದ್ದಾರೆ.ಮಕ್ಕಳ ಎದುರಲ್ಲಿ ಗನ್‌ಗಳ ಬಳಕೆ ಕಡಿಮೆ ಮಾಡಬೇಕು, ಮಕ್ಕಳ ಕೈಗೆ ಗನ್‌ಗಳು ಸಿಗುವ ರೀತಿಯಲ್ಲಿ ಇಡಬಾರದು. ಇದರಿಂದಾಗಿ ಇಂತಹ ಅನೇಕ ದುರಂತಗಳು ಸಂಭವಿಸುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+