ವಿಜಯಪುರದಲ್ಲಿ ತಲೆಕಡಿದ ಸ್ಥಿತಿಯಲ್ಲಿ ಪ್ರೇಮಿಗಳ ಶವ ಪತ್ತೆ: ಮರ್ಯಾದಾ ಹತ್ಯೆ ಶಂಕೆ
ವಿಜಯಪುರ, ಜೂನ್ 23: ಮರ್ಯಾದಾ ಹತ್ಯೆ ಶಂಕಿತ ಪ್ರಕರಣವೊಂದರಲ್ಲಿ, 19 ವರ್ಷದ ಯುವಕ ಹಾಗು ಯುವತಿಯನ್ನು ಕುಟುಂಬ ಸದಸ್ಯರು ಹತ್ಯೆ ಮಾಡಿ, ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
"ವಿಜಯಪುರ ಜಿಲ್ಲೆಯ ಸಲಾಡಹಳ್ಳಿ ಪ್ರದೇಶದಲ್ಲಿ ಮಂಗಳವಾರ 19 ವರ್ಷದ ಯುವಕ ಮತ್ತು ಯುವತಿಯ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ,'' ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಯುವ ಪ್ರೇಮಿಗಳ ತಲೆಗಳಿಗೆ ಯುವತಿಯ ತಂದೆ, ಸಹೋದರರು ಮತ್ತು ಇತರ ಇಬ್ಬರು ಸಂಬಂಧಿಕರು ಸೇರಿ ಬಂಡೆಯಿಂದ ಹೊಡೆದು ಸಾಯಿಸಿದ್ದಾರೆ. ಹುಡುಗಿಯ ಕುಟುಂಬ ಸದಸ್ಯರು ಸದ್ಯ ನಾಪತ್ತೆಯಾಗಿದ್ದಾರೆ.

Recommended Video
ಈಜುಕೊಳ ಕಟ್ಟಿದ್ದು ರೋಹಿಣಿ ಸಿಂಧೂರಿಯ ನೈತಿಕ ಪತನ ಅಂದ್ರು IPS ಅಧಿಕಾರಿ D ರೂಪಾ | Oneindia Kannada
"ಯುವತಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದು, ಎರಡೂ ಕುಟುಂಬಗಳು ಅವರ ಸಂಬಂಧವನ್ನು ಆಕ್ಷೇಪಿಸಿದ್ದವು,'' ಎಂದು ಪೊಲೀಸರು ಹೇಳಿದ್ದಾರೆ, ಪ್ರಾಥಮಿಕ ತನಿಖೆಯಲ್ಲಿ ಇದೊಂದು ಮರ್ಯಾದಾ ಹತ್ಯೆ ಪ್ರಕರಣದಂತೆ ಕಾಣುತ್ತಿದೆ. ಏಕೆಂದರೆ ಗ್ರಾಮಸ್ಥರು ಯುವ ಜೋಡಿಯ ಬಗ್ಗೆ ಎರಡೂ ಕುಟುಂಬಗಳಿಗೆ ಇಷ್ಟವಿರಲಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications