ವಿಜಯಪುರ: ಜಿಲ್ಲಾಸ್ಪತ್ರೆ ಶೌಚಾಲಯದಲ್ಲಿ ಮಹಿಳೆ ನೇಣಿಗೆ ಶರಣು

ವಿಜಯಪುರ, ಜನವರಿ 19 : ವಿಜಯಪುರ ಜಿಲ್ಲಾಸ್ಪತ್ರೆಯ ವಾರ್ಡಿನ್ ಶೌಚಾಲಯದಲ್ಲಿ ಮಹಿಳೆ ನೇಣಿಗೆ ಶರಣಾಗಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ಸ್ವಾತಿ ಹೊಸಮನಿ(28) ಎಂಬುವವರು ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಹತ್ಯೆ ಮಾಡಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಅಪ್ರಾಪ್ತ ಬಾಲಕಿ ಮೇಲೆ ಅನುಚಿತವಾಗಿ ವರ್ತನೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಗ್ರಾಮಸ್ಥರು ಯುವಕ ಸುರೇಶ್ ಹರಿಜನ್ ಅವರಿಗೆ ಥಳಿಸಿದ್ದರು ಆ ಸಂದರ್ಭದಲ್ಲಿ ಸ್ವಾತಿಯವರ ಮೇಲೆಯೂ ಗ್ರಾಮಸ್ಥರಿಂದ ಹಲ್ಲೆ ನಡೆದಿತ್ತು ಎಂಬ ಆರೋಪವಿತ್ತು. ಅಪ್ರಾಪ್ತ ಬಾಲಕಿ ಪೋಷಕರಿಂದ ಯುವಕ ಸುರೇಶ್ ಮತ್ತು ಸ್ವಾತಿ ಹೊಸಮನಿ ವಿರುದ್ಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿ ಸುರೇಶ್ ಮತ್ತು ಸ್ವಾತಿ ಹೊಸಮನಿ ಅವರಿಂದ ಗ್ರಾಮಸ್ಥರ ವಿರುದ್ಧವೂ ಪ್ರತಿ ದೂರು ದಾಖಲಾಗಿತ್ತು.

Woman suicide in Vijayapura district Hospital

ಸ್ವಾತಿ ಹೊಸಮನಿ ಅವರು ಹಲ್ಲೆಯ ಬಳಿಕ ಸ್ವಯಂ ಆಸ್ಪತ್ರೆಗೆ ದಾಖಲಾಗಿದ್ದರು, ಗುರುವಾರ ರಾತ್ರಿ ಆಸ್ಪತ್ರೆಯಲ್ಲಿ ದುಪಟ್ಟಾ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಗಾಂಧಿಚೌಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+