ಹೀಗೂ ಉಂಟೇ.. ಪತಿಗೆ ತಾಳಿ ಕಟ್ಟಿದ ಪತ್ನಿ, ಹೊಸ ಕಲ್ಯಾಣ ಕ್ರಾಂತಿ
ವಿಜಯಪುರ, ಮಾರ್ಚ್ 12: ಸಾಮಾನ್ಯವಾಗಿ ವಧುವಿಗೆ ವರ ತಾಳಿ ಕಟ್ಟುತ್ತಾನೆ ಆದರೆ ಔದುವೇ ವರನಿಗೆ ತಾಳಿ ಕಟ್ಟಿದ ವಿಶೇಷ ಪ್ರಸಂಗವೊಂದು ವಿಜಯಪುರದಲ್ಲಿ ನಡೆದಿದೆ.
ಹೌದು ಇದು ಕಟ್ಟು ಕತೆಯಲ್ಲ ಸತ್ಯ ಘಟನೆ, ವಿಜಯಪುರದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ವಧುವಿಂದಲೇ ವರನಿಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ ಹೊಸ ಮುನ್ನಡಿ ಬರೆದಿದ್ದಾರೆ.
ಸೋಮವಾರ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಹಳ್ಳೂರ ಪ್ಯಾಲೇಸ್ನಲ್ಲಿ ದುದ್ದಗಿ, ಬರಗುಂಡಿ ಮನೆತನದಿಂದ ಹಮ್ಮಿಕೊಂಡ ಕಲ್ಯಾಣ ಮಹೋತ್ಸವದಲ್ಲಿ ವರ ಪ್ರಭುರಾಜಗೆ ವಧು ಅಂಕಿತಾ ಹಾಗೂ ವರ ಅಮಿತಗೆ ವಧು ಪ್ರಿಯಾ ಅವರು ಮಾಂಗಲ್ಯ ಧಾರಣೆ ಮಾಡಿ ವಿಶಿಷ್ಟ ರೀತಿಯಲ್ಲಿ ನವ ದಾಂಪತ್ಯಕ್ಕೆ ಕಾಲಿಟ್ಟರು.

ತಾಳಿಯ ಜತೆ ರುದ್ರಾಕ್ಷಿ ಪೋಣಿಸಿ ಕಟ್ಟುವ ಮೂಲಕ ಹೊಸ ಕಲ್ಯಾಣ ಕ್ರಾಂತಿಗೆ ನಾಂದಿ ಹಾಡಿದರು. ಅಪ್ಪಟ ಬಸವ ಧರ್ಮದ ತತ್ವದ ಅಡಿಯಲ್ಲಿ ಮದುವೆ ಕಾರ್ಯ ನಡೆದಿದೆ. ವಿಶೇಷ ಅಂದರೆ ಶುಭ ಮುಹೂರ್ತವನ್ನು ನೋಡದೆ ಮದುವೆ ಆಚರಣೆ ಮಾಡಲಾಗಿದೆ.












Click it and Unblock the Notifications