ವಿಜಯಪುರ: RTI ಅರ್ಜಿಗೆ ಮಾಹಿತಿ ನೀಡದ ತಹಸೀಲ್ದಾರ್ ಗೆ ದಂಡ
ವಿಜಯಪುರ, ಫೆಬ್ರವರಿ 14 : ನಿಗದಿತ ಸಮಯದಲ್ಲಿ ಮಾಹಿತಿ ನೀಡದ ಹಿನ್ನೆಲೆ ವಿಜಯಪುರ ಜಿಲ್ಲೆಯ ತಹಸೀಲ್ದಾರ್ ಎಂ.ಎಸ್. ಭಗವಾನ್ ಅವರಿಗೆ 10 ಸಾವಿರ ರೂ ದಂಡ ವಿಧಿಸಿ ರಾಜ್ಯ ಮಾಹಿತಿ ಆಯುಕ್ತ ಕೆ.ಎಂ. ಚಂದ್ರೇಗೌಡ ಆದೇಶ ನೀಡಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರೂ ನಿಗದಿತ ಸಮಯದಲ್ಲಿ ಮಾಹಿತಿ ನೀಡಿದ ತಹಸೀಲ್ದಾರ್ ಎಂ.ಎಸ್. ಭಗವಾನ್ ಅವರಿಗೆ 10 ಸಾವಿರ ದಂಡ ವಿಧಿಸಲಾಗಿದೆ.
ಮುದ್ದೇಬಿಹಾಳ ತಾಲೂಕಿನ ಇಣಚಗಲ್ ಗ್ರಾಮದ ಮೊರಾರ್ಜಿ ವಸತಿ ಶಾಲೆಯ ಜಾಗೆಯ ಕುರಿತು ಮಾಹಿತಿ ಅರ್ಜಿ ಸಲ್ಲಿಕೆಯಾಗಿತ್ತು ಮೊರಾರ್ಜಿ ಶಾಲೆಯ ಜಾಗೆಯ ಕುರಿತು ಮಾಹಿತಿ ಕೊಡುವಂತೆ ನಿವೃತ್ತ ನ್ಯಾಯಾಧೀಶ ಜೆ ಡಿ ಇನಾಮದಾರ ಅರ್ಜಿ ಸಲ್ಲಿಸಿದ್ದರು.

ಒಂದು ತಿಂಗಳಲ್ಲಿ ಕೊಡಬೇಕಿದ್ದ ಮಾಹಿತಿ ವರ್ಷವಾದರೂ ಕೊಡದ ಹಿನ್ನೆಲೆ ತಹಶೀಲ್ದಾರ್ ಗೆ ಕರ್ನಾಟಕ ಮಾಹಿತಿ ಆಯೋಗ ದಂಡ ವಿಧಿಸದೆ. ತಹಶೀಲ್ದಾರ್ ಸಂಬಳದಲ್ಲಿ 10 ಸಾವಿರ ರೂಪಾಯಿ ಕಡಿತಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ.












Click it and Unblock the Notifications