ಮೋದಿ ಭಾಷಣದಿಂದ ಬಡವರ ಹೊಟ್ಟೆ ತುಂಬದು: ಸೋನಿಯಾ ಗಾಂಧಿ
ವಿಜಯಪುರ, ಮೇ 08: ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸುಮಾರು ಎರಡು ವರ್ಷಗಳ ನಂತರ ಸಕ್ರಿಯ ರಾಜಕೀಯಕ್ಕೆ ಮರಳಿದ್ದಾರೆ. ಅವರು ಇಂದು ವಿಜಯಪುರದಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದರು. ರಾಹುಲ್ ಗಾಂಧಿಗೆ ಹೋಲಿಸಿದರೆ ಸೋನಿಯಾ ಅವರ ಭಾಷಣ ಅತ್ಯುತ್ತಮವಾಗಿತ್ತು ಎನ್ನಬಹುದು.
ಭಾಷಣದಲ್ಲಿ ವಿಜಯಪುರವನ್ನು ಹಾಡಿ ಹೊಗಳಿದ ಸೋನಿಯಾ ಗಾಂಧಿ ಅವರು, ಬಸವಣ್ಣನನ್ನು ನೆನೆದರು. ವಿಜಯಪುರದ ಸಂಸ್ಕೃತಿಯನ್ನು ಕರ್ನಾಟಕ ಹಾಗೂ ಭಾರತದ ಸಂಸ್ಕೃತಿಯೊಂದಿಗೆ ಹೋಲಿಸಿ ಸ್ಥಳೀಯರ ಚಪ್ಪಾಳೆ ಗಿಟ್ಟಿಸಿಕೊಂಡರು.

ಬಿಜೆಪಿಯ ಕೆಲವು ನಾಯಕರು ಮಾಡುವಂತೆ ವೈಯಕ್ತಿಕ ದಾಳಿಗಳನ್ನು ಮಾಡದೆ. ಗೌರವಯುತವಾಗಿಯೇ ಮೋದಿ ಅವರನ್ನು ಟೀಕಿಸಿದ ಸೋನಿಯಾ ಗಾಂಧಿ ಅವರು ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು ಜನರ ಮುಂದೆ ಇಟ್ಟರು.
* ಸಿದ್ದರಾಮಯ್ಯ ಸರ್ಕಾರವನನ್ನು ಹಾಡಿ ಹೊಗಳಿದ ಸೋನಿಯಾ ಅವರು, ಎಲ್ಲ ಸಮುದಾಯದ ಉದ್ಧಾರಕ್ಕೆ ಹಲವು ಯೋಜನೆಗಳನ್ನು ರೂಪಿಸಿದೆ.
* ಸಿದ್ದರಾಮಯ್ಯ ಸರ್ಕಾರವು ಕರ್ನಾಟಕವನ್ನು ದೇಶದ ನಂ1 ರಾಜ್ಯವನ್ನಾಗಿ ಮಾಡಿದ್ದಾರೆ. ಬಡಜನರ ಉದ್ಧಾರಕ್ಕಾಗಿ ಅವರು ಹಲವು ಅನೇಕ ಕಾರ್ಯಗಳನ್ನು ಮಾಡಿದ್ದಾರೆ.
* ಸಿದ್ದರಾಮಯ್ಯ ಅವರು ಎಲ್ಲ ಜನರು ಹಸಿವು ಮುಕ್ತ ಮಾಡಬೇಕೆಂದು ಇಂದಿರಾ ಕ್ಯಾಂಟೀನ್ ಮಾಡಿದ್ದಾರೆ, ಅನ್ನ ಭಾಗ್ಯ ಯೋಜನೆ ರೂಪಿಸಿದ್ದಾರೆ.
* ಆದರೆ ಕಾಂಗ್ರೆಸ್‌ನ ವಿರೋಧಿಗಳು ಈ ಯೋಜನೆಗಳಿಗೆ ವಿರೋಧ ಮಾಡುತ್ತಾರೆ, ಕಾಂಗ್ರೆಸ್ ಸರ್ಕಾರವು ನಿರುದ್ಯೋಗ ನಿವಾರಣೆಗೆ ನರೇಗಾ ತಂದಾಗ ಕೂಡ ಇದೇ ಬಿಜೆಪಿ ಮತ್ತು ಮೋದಿ ಅದನ್ನು ವಿರೋಧಿಸಿದ್ದರು.
* ಬರದಿಂದ ತತ್ತರಿಸಿದ್ದ ಕರ್ನಾಟಕದ ರೈತರಿಗೆ ಮೋದಿ ಅವರು ನಿರಾಕರಿಸಿದರು ಅಷ್ಟೆ ಅಲ್ಲ ರೈತರ ಪರ ಧನಿಯಾಗಿ ಬಂದಿದ್ದ ಸಿದ್ದರಾಮಯ್ಯ ಅವರೊಂದಿಗೆ ಕೂಡಾ ನೀವು ಭೇಟಿ ಮಾಡದೆ ನೀವು ರೈತರ ಕುಟುಂಬವನ್ನು ಅವಮಾನ ಮಾಡಿದಿರಿ.
* ಬರ ಬಂದ ಬೇರೆ ರಾಜ್ಯಗಳಿಗೆ ಸಾವಿರಾರು ಕೋಟ್ಯಾಂತರ ಅನುದಾನ ನೀಡಿದ ಮೋದಿ ಸರ್ಕಾರ ಕರ್ನಾಟಕಕ್ಕೆ ಮಾತ್ರ ಸಹಾಯ ಮಾಡಲಿಲ್ಲ, ಮೋದಿ ಅವರೇ ಇದೇನಾ ನಿಮ್ಮ ಸಬ್ ಕಾ ಸಾತ್ ಸಬ್ ಕಾ ವಿಕಾಸ್.
* ಮೋದಿ ಅವರ ಮೇಲೆ ಕಾಂಗ್ರೆಸ್ ಮುಕ್ತ ಭಾರತದ ಭೂತ ಸವಾರಿ ಮಾಡುತ್ತಿದೆ. ಅವರಿಗೆ ಕಾಂಗ್ರೆಸ್ ಮುಕ್ತ ಮಾತ್ರವಲ್ಲ ಅವರ ವಿರುದ್ಧ ಪ್ರಶ್ನೆ ಮಾಡುವ ಎಲ್ಲರನ್ನೂ ಮುಕ್ತ ಮಾಡುವ ಉಮೇದಿನಲ್ಲಿದ್ದಾರೆ.
* ಮೋದಿ ಅವರಿಗೆ ತಮ್ಮ ಬಗ್ಗೆ ಹೆಮ್ಮೆ ಇದೆ ಅವರ ಭಾಷಣದ ಬಗ್ಗೆ, ಅವರು ಚೆನ್ನಾಗಿ ಮಾತನಾಡುತ್ತಾರೆ ಒಪ್ಪಿಕೊಳ್ಳೋಣ. ಅವರ ಭಾಷಣದಿಂದ ಜನರ ಹೊಟ್ಟೆ ತುಂಬುತ್ತದೆ ಎಂಬುದಾದರೆ ಅವರು ಭಾಷಣ ಮಾಡುತ್ತಲೇ ಇರಲಿ.
* ಮೋದಿ ಅವರ ಬಣ್ಣದ ಮಾತುಗಳಿಂದ ಜನರ ಹೊಟ್ಟೆ ತುಂಬುವುದಿಲ್ಲ, ಅದಕ್ಕೆ ಏನಿದ್ದರೂ ಅನ್ನವೇ ಬೇಕು. ಅವರ ಭಾಷಣದಿಂದ ಹೆಣ್ಣು ಮಕ್ಕಳು ಸಶಕ್ತರಾಗಿಲ್ಲ.
* ಇಂದು ಬೆಲೆ ಏರಿಕೆ ಭಾರತವನ್ನು ಭಾಧಿಸುತ್ತಿದೆ. ಆದರೆ ಇದನ್ನು ನಿರ್ಲಕ್ಷಿಸಿ ಮೋದಿ ಸರ್ಕಾರ ಗ್ಯಾಸ್, ಪೆಟ್ರೋಲ್ ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಲೇ ಇದೆ. ಆದರೆ ಕರ್ನಾಟಕ ಸರ್ಕಾರ ತನ್ನ ನಿಯಮಿತ ಶಕ್ತಿಯಲ್ಲಿ ಜನರಿಗಾಗಿ ಕಾರ್ಯ ಮಾಡುತ್ತಿದೆ.
* ಇಂದು ಬೆಲೆ ಏರಿಕೆ ಭಾರತವನ್ನು ಭಾಧಿಸುತ್ತಿದೆ. ಆದರೆ ಇದನ್ನು ನಿರ್ಲಕ್ಷಿಸಿ ಮೋದಿ ಸರ್ಕಾರ ಗ್ಯಾಸ್, ಪೆಟ್ರೋಲ್ ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಲೇ ಇದೆ. ಆದರೆ ಕರ್ನಾಟಕ ಸರ್ಕಾರ ತನ್ನ ನಿಯಮಿತ ಶಕ್ತಿಯಲ್ಲಿ ಜನರಿಗಾಗಿ ಕಾರ್ಯ ಮಾಡುತ್ತಿದೆ.
* ದೇಶ ಗಾಬರಿಯಲ್ಲಿದೆ, ಮೋದಿ ಅವರು ಎಲ್ಲೇ ಹೋದರು ಇತಿಹಾಸವನ್ನು ತಿರುಚುತ್ತಾರೆ. ಅವರು ಐತಿಹಾಸಿಕ ಪುರುಷರನ್ನು ತಮ್ಮ ಆಟದ ದಾಳದಂತೆ ಬಳಸುತ್ತಾರೆ. ಇದು ಪ್ರಧಾನಿಗೆ ಶೋಭೆ ಕೊಡುತ್ತದೆಯೇ?
* ಈ ಮುಂಚೆ ಇಂತಹಾ ಒಬ್ಬ ಪ್ರಧಾನಿಯನ್ನು ನೋಡಿದ್ದಿರಾ. ಕೇವಲ ಮಾತನಾಡುವ, ಆದರೆ ದೇಶದ ನಿಜ ಸಮಸ್ಯೆಗಳ ಬಗ್ಗೆ ಎಂದೂ ಬಾಯಿ ಬಿಡುವುದಿಲ್ಲ, ಇಂತಹಾ ಪ್ರಧಾನಿಯನ್ನು ದೇಶ ಎಂದೂ ನೋಡಿಲ್ಲ.
* ಮೋದಿ ಅವರೇ ನೀವು ನಾಲ್ಕು ವರ್ಷದಲ್ಲಿ ಏನು ಮಾಡಿದ್ದೀರಿ ಹೇಳಿ. ರೈತರ ಪರವಾಗಿ, ಬಡವರ ಪರವಾಗಿ, ಸ್ತ್ರೀಯರ ಪರವಾಗಿ ಏನು ಮಾಡಿದ್ದೀರಿ ಹೇಳಿ. ಲೋಕಪಾಲ ಏಕೆ ಜಾರಿ ಮಾಡಲಿಲ್ಲ.
* ಕರ್ನಾಟಕದಲ್ಲಿ ನಿಮ್ಮ ಅಕ್ಕ-ಪಕ್ಕ ಕೂತಿರುವ ಭ್ರಷ್ಟಾಚಾರದ ಆರೋಪ ಹೊತ್ತಿರುವ ಮಂತ್ರಿಗಳ ಮಾಡೆಲ್ ಅನ್ನೂ ನೀವು ಅನುಸರಿತ್ತೀರಾ. ನಿಮ್ಮ ಆತ್ಮೀಯ ಗೆಳೆಯ ಅಮಿತ್ ಶಾ ನ ಮಗನ ಮಾಡೆಲ್ ಅನುಸರಿಸುತ್ತೀರೇನು?
* ಬಸವಣ್ಣನವರ ಆದರ್ಶಗಳೇ ಕಾಂಗ್ರೆಸ್‌ನ ಆದರ್ಶಗಳು. ಪ್ರೀತಿ, ಸ್ನೇಹ, ಒಗ್ಗಟ್ಟು ಕಾಂಗ್ರೆಸ್‌ನ ಮೂಲ ಮಂತ್ರ. ಆದರೆ ಮೋದಿ ಅವರು ಬರುತ್ತಾರೆ ದ್ವೇಷ ಹೊತ್ತಿಸಿ ಹೊರಟು ಹೋಗುತ್ತಾರೆ. ನೀವು ಈ ಬಾರಿ ಮೋದಿ ಅವರ ಎಲ್ಲಾ ನಾಟಕಗಳಿಗೆ ತೆರೆ ಎಳೆಯಿರಿ.












Click it and Unblock the Notifications