ವಿಜಯಪುರ ಕಾಂಗ್ರೆಸ್ ಕಚೇರಿಗೆ ಬಿಗಿ ಭದ್ರತೆ

Posted By: ವಿಜಯಪುರ ಪ್ರತಿನಿಧಿ
Subscribe to Oneindia Kannada

ವಿಜಯಪುರ ಡಿಸೆಂಬರ್ 28 : ಮಹಾದಾಯಿ ವಿವಾದ ತಾರಕಕ್ಕೇರಿದೆ ಇದರ ಹಿನ್ನೆಲೆಯಲ್ಲಿ ಬುಧವಾರ ಉತ್ತರ ಕರ್ನಾಟಕ ಬಂದ್ ಗೆ ಕರೆನೀಡಲಾಗಿತ್ತು. ಗುರುವಾರ ಕಲಬುರಗಿಯಲ್ಲಿ ಬಂದ್ ಮುಂದುವರೆದಿದೆ.

ವಿಜಯಪುರ ಬಾಲಕಿ ಅತ್ಯಾಚಾರ ವಿರೋಧಿಸಿ ಕಲಬುರಗಿ ಬಂದ್

ಬೆಳಗಾವಿಯಲ್ಲಿ ಬಿಜೆಪಿ ರೈತ ಮೋರ್ಚಾ ಬೆಳಗಾವಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಇದೆಲ್ಲ ಘಟನೆಗಳು ನಡೆದ ನಂತರ ವಿಜಯಪುರದಲ್ಲೂ ಕೂಡ ಕಾಂಗ್ರೆಸ್ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಹಾಗೆಯೇ ಬುಧವಾರ ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ಹಿನ್ನೆಲೆ ಭದ್ರತೆ ಒದಗಿಸಲಾಯಿತು.

Police security to district Congress office in Vijayapura

1 ಡಿಆರ್, 1 ಐ ಆರ್ ಬಿ ಪೊಲೀಸ್ ತುಕಡಿ, ಓರ್ವ ಪಿ ಎಸ್ ಐ ನಿಯೋಜನೆ ಮಾಡಲಾಗಿದೆ ಬಿಜೆಪಿಯಿಂದ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಮುತ್ತಿಗೆ ತಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ವಿಜಯಪುರ ನಗರದ ಬಾಗಲಕೋಟೆ ರಸ್ತೆಯಲ್ಲಿರುವ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Police have provided tight security to district congress party office in Vijayapura Following Bjp protest.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ