ಹಿಟಾಚಿ ಮೇಲೆ ಬಿದ್ದ ಓವರ್ ಹೆಡ್ ಟ್ಯಾಂಕ್, ಚಾಲಕ ಪಾರು

Posted By:
Subscribe to Oneindia Kannada

ವಿಜಯಪುರ, ಜನವರಿ 10: ಶಿಥಿಲಗೊಂಡಿದ್ದ ಓವರ್ ಹೆಡ್ ಟ್ಯಾಂಕ್ ಅನ್ನು ಬೀಳಿಸಬೇಕಾದರೆ ಆಯ ತಪ್ಪಿ ಅದು ಹಿಟಾಚಿ ಮೇಲೆಯೇ ಬಿದ್ದ ಘಟನೆ ವಿಜಯಪುರ ಜಿಲ್ಲೆ ಮುದ್ದೆಬಿಹಾಳ ತಾಲ್ಲುಕಿನ ನಾಲತವಾಡ ಗ್ರಾಮದಲ್ಲಿ ನಡೆದಿದೆ.

ಓವರ್ ಹೆಡ್ ಟ್ಯಾಂಕ್ ಹಿಟಾಚಿ ಮೇಲೆ ಬಿದ್ದ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಹಿಟಾಚಿ ಡ್ರೈವರ್ ಕೂದಲೆಳೆಯ ಅಂತರದಲ್ಲಿ ಪಾರಾದ ದೃಶ್ಯ ಮೈನವಿರೇಳಿಸುವಂತಿದೆ.

ಸಂಕ್ರಾಂತಿ ವಿಶೇಷ ಪುಟ

ನಾಲತವಾಡ ಗ್ರಾಮದಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಓವರ್ ಹೆಡ್ ಟ್ಯಾಂಕ್ ಅನ್ನು ಬೀಳಿಸಬೇಕೆಂದು ಗ್ರಾಮ ಪಂಚಾಯಿತಿ ನಿರ್ಣಯಿಸಿ ಹಿಟಾಚಿ ತರಿಸಿದ್ದರು. ಹಿಟಾಚಿಯಲ್ಲಿ ಓವರ್ ಹೆಡ್ ಟ್ಯಾಂಕ್‌ನ ಬುಡವನ್ನು ಕದುಲಿಸುತ್ತಿದ್ದಂತೆ ಟ್ಯಾಂಕ್ ಹಿಟಾಚಿ ಮೇಲೆ ಬಿದ್ದಿದೆ, ಹಿಟಾಚಿ ಚಾಲಕ ಹಾರಿ ಪ್ರಾಣ ಉಳಿಸಿಕೊಂಡಿದ್ದಾನೆ.

Over head water tank fell on Hitachi in Vijayapura

ಓವರ್ ಹೆಡ್ ಟ್ಯಾಂಕ್ ಬೀಳಿಸಲು ವೈಜ್ಞಾನಿಕ ವಿಧಾನ ಬಳಸದೆ ಗ್ರಾಮ ಪಂಚಾಯಿತಿ ಹಿಟಾಚಿ ಬಳಸಿ ಟ್ಯಾಂಕರ್ ಬೀಳಿಸಲು ಮುಂದಾಗಿದ್ದಕ್ಕೆ ಈ ರೀತಿಯ ಅವಘಡ ಸಂಭವಿಸಿದೆ, ಅದೃಷ್ಟವಷಾತ್ ಯಾವುದೇ ಅನಾಹುತವಾಗಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In Vijayapura district, Mudhebihal taluk Nathalawad village over head tank fell on Hitachi. Hitachi driver life is safe by luck.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ