ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಪ್ರಕಾಶ ಸ್ವಾಮೀಜಿ ಒಬ್ಬ ತಲೆಕೆಟ್ಟ ಸ್ವಾಮೀಜಿ: ಎಂ.ಬಿ.ಪಾಟೀಲ್

By ವಿಜಯಪುರ ಪ್ರತಿನಿಧಿ
|
Google Oneindia Kannada News

Recommended Video

ಬೆಳಗಾವಿ : ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿಗಳ ವಿವಾದಾತ್ಮಕ ಹೇಳಿಕೆ | Oneindia Kannada

ವಿಜಯಪುರ, ಡಿಸೆಂಬರ್ 16: ಬಸವನ ಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಅವರ ವಿವಾದಾತ್ಮಕ ಹೇಳಿಕೆಗೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಅತಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಿವಪ್ರಕಾಶ ಸ್ವಾಮೀಜಿ ಒಬ್ಬ ತಲೆಕೆಟ್ಟ ಸ್ವಾಮಿಜಿ ಎಂದು ಬೈದಿದ್ದಾರೆ, ಅಷ್ಟೆ ಅಲ್ಲದೆ, ಶಿವಪ್ರಕಾಶ ಸ್ವಾಮಿಜಿಗೆ ಖಡಕ್ ವಾರ್ನಿಂಗ್ ನೀಡಿದ ಸಚಿವರು ಇನ್ನೊಮ್ಮೆ ಈ ತರಹ ಹೇಳಿಕೆ ನೀಡಿದರೆ ಉಗ್ರ ಕ್ರಮ ಕೈಕೊಳ್ಳುತ್ತೇನೆ ಎಂದರು.

ಮಹದಾಯಿ ನೀರು ಹಂಚಿಕೆ : ಅಂದಿನಿಂದ ಇಂದಿನವರೆಗೆಮಹದಾಯಿ ನೀರು ಹಂಚಿಕೆ : ಅಂದಿನಿಂದ ಇಂದಿನವರೆಗೆ

ಶಿವಪ್ರಕಾಶ ಹೇಳಿಕೆಯನ್ನು ಹತಾಶ ಹೇಳಿಕೆ ಎಂದ ಸಚಿವರು, ಶಿವಪ್ರಕಾಶ ಸ್ವಾಮೀಜಿಗಳು ಈ ರೀತಿಯ ಚಿಲ್ಲರೆ ಕೆಲಸ ಬಿಡಬೇಕು, ಇಲ್ಲದಿದ್ದರೆ ಎಂ.ಬಿ. ಪಾಟೀಲ ಯಾರು ಅಂತಾ ತೋರಿಸಬೇಕಾಗುತ್ತದೆ ಎಮದು ಖಡಕ್ ಆಗಿ ವಾರ್ನಿಂಗ್ ಮಾಡಿದ್ದಾರೆ.

ತಾಳಿ ತೆಗೆದು ಬರಲಿ

ತಾಳಿ ತೆಗೆದು ಬರಲಿ

ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆ ಬೇಕು ಎನ್ನುವವರ ಮನೆ ಹೆಣ್ಣುಮಕ್ಕಳು ತಮ್ಮ ಕೊರಳಲ್ಲಿಯ ತಾಳಿ, ಹಣೆ‌ ಮೇಲಿನ ಕುಂಕುಮ ಅಳಿಸಿ ನಂತರ ಹೋರಾಟ ನಡೆಸಲಿ ಎಂದು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಬಸವಣ್ಣನವರ ತತ್ತ್ವ ಪಾಲಿಸುವುದಾದರೆ ಮೊದಲು ತಮ್ಮ ಹೆಣ್ಣು ಮಕ್ಕಳು ಹಣೆ ಮೇಲಿನ ಕುಂಕುಮ, ಕಾಲುಂಗುರ, ಕೊರಳಲ್ಲಿನ ತಾಳಿ ತೆಗೆದು ಹಾಕಿ ರುದ್ರಾಕ್ಷಿ ಕಟ್ಟಿಕೊಳ್ಳಲಿ. ಹಣಬಲ, ತೋಳ್ಬಲದಿಂದ ಮಠಾಧೀಶರನ್ನು ಖರೀದಿಸಿ ವೀರಶೈವ ಧರ್ಮ ಒಡೆವ ಕೆಲಸ ಮಾಡಲಾಗುತ್ತಿದೆ. ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವೇನಿದ್ದರೂ ಮೇ ತಿಂಗಳವರೆಗೆ ಮಾತ್ರ ಎಂದು ಕಿಡಿಕಾರಿದ್ದರು.

ಕ್ರಮ ಕೈಗೊಳ್ಳಬೇಕು

ಕ್ರಮ ಕೈಗೊಳ್ಳಬೇಕು

ದಿನಕ್ಕೊಂದು ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಬಿಜೆಪಿ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ವಿರುದ್ಧವೂ ಹರಿಹಾಯ್ದ ಸಚಿವರು ಜನಪ್ರತಿನಿಧಿಗಳು ಈ ರೀತಿಯ ಕೆಳಮಟ್ಟದ ಭಾಷೆ ಮಾತಾಡಬಾರದು ಜನಪ್ರತಿನಿಧಿಗಳಾದವರು ಸಮಾಜಕ್ಕೆ ಮಾದರಿ ಆಗಿರಬೇಕು, ಕೀಳು ಮಟ್ಟದ ಮಾತನಾಡುವ ಇಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಓಟಿಗಾಗಿ ಮಹದಾಯಿ ಎನ್ನುತ್ತಿದ್ದಾರೆ

ಓಟಿಗಾಗಿ ಮಹದಾಯಿ ಎನ್ನುತ್ತಿದ್ದಾರೆ

ಮಹದಾಯಿ ನೀರಾವರಿ ಯೋಜನೆಯ ಬಗ್ಗೆ ಯಡಿಯೂರಪ್ಪಗೆ ಕನಿಷ್ಠ ಪರಿಜ್ಞಾನಕೂಡ ಇಲ್ಲ ಎಂದ ಎಂ.ಬಿ.ಪಾಟೀಲ್, ಕೇವಲ ಓಟಿಗಾಗಿ ಅವರು ಮಹದಾಯಿ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ, ಮಹದಾಯಿ ಸಮಸ್ಯೆ ಬಗೆಹರಿಸುವುದಾಗಿ ನೀಡುತ್ತಿರುವ ಭರವಸೆ ಪೊಳ್ಳು ಭರವಸೆ ಅಷ್ಟೆ ಎಂದರು.

ಮಹದಾಯಿ ತೀರ್ಪು: ಕನ್ನಡಿಗರು ಗಮನಿಸಬೇಕಾದ್ದು ಏನು?ಮಹದಾಯಿ ತೀರ್ಪು: ಕನ್ನಡಿಗರು ಗಮನಿಸಬೇಕಾದ್ದು ಏನು?

ಭಗೀರಥನಿಂದಲೂ ಸಾಧ್ಯವಿಲ್ಲ

ಭಗೀರಥನಿಂದಲೂ ಸಾಧ್ಯವಿಲ್ಲ

ಮಹದಾಯಿ ನೀರು ಹರಿಸಲು ಕನಿಷ್ಟ ಎರಡು ವರ್ಷ ಬೇಕು ಎಂದ ಸಚಿವರು ಆ ಭಾಗದಲ್ಲಿ ಕೆನಾಲ್ ವರ್ಕ್ ಮಾತ್ರ ಆಗಿದೆ, ಡ್ಯಾಂ ಇನ್ನೂ ಆಗಿಲ್ಲ, ನೀರು ಪಡೆಯಲು ಅಣೆಕಟ್ಟೆ ಇಲ್ಲದೆ ನೀರು ಹರಿಸಲು ಆಗಲ್ಲ ಸುಮ್ಮನೆ ಈಗಲೇ ನೀರು ಹರಿಸುತ್ತೇವೆ ಎಂದು ಬಾಯಿಗೆ ಬಂದಂತೆ ಯಡಿಯೂರಪ್ಪ ಮಾತನಾಡುತ್ತಿರುವುದು ಸರಿಯಲ್ಲ, ಪೂರ್ಣ ಕೆಲಸ ಆಗದೆ ಮಹದಾಯಿ ನೀರು ಹರಿಸಲು ಯಡಿಯೂರಪ್ಪ ಅಲ್ಲ, ಭಗೀರಥ ಬಂದರೂ ಸಾಧ್ಯ ಇಲ್ಲ ಎಂದು ಅವರು ಹೇಳಿದರು.

'ಯಡಿಯೂರಪ್ಪ ಬಟ್ಟೆ ಹಾವು ಬಿಡುವ ಕೆಲಸ ಮಾಡಿದ್ದಾರೆ''ಯಡಿಯೂರಪ್ಪ ಬಟ್ಟೆ ಹಾವು ಬಿಡುವ ಕೆಲಸ ಮಾಡಿದ್ದಾರೆ'

ಗೆಲ್ಲುವ ವಿಶ್ವಾಸವಿದೆ

ಗೆಲ್ಲುವ ವಿಶ್ವಾಸವಿದೆ

ಮಹದಾಯಿ ಪ್ರಕರಣ ಈಗಾಗಲೆ ಟ್ರಿಬ್ಯುನಲ್ ಮುಂದೆ ಇದೆ ನಮ್ಮ ವಾದ ಸಮರ್ಥವಾಗಿ ನಡೆಯುತ್ತಿದೆ, ನಮ್ಮ ಇಲಾಖೆ ವಕೀಲರ ತಂಡ ವಾದ ಮಾಡುತ್ತಿದ್ದು, ನಮ್ಮ ಪರವಾಗಿ ನಿರ್ಣಯ ಬರಲಿದೆ, ಮಹದಾಯಿ ವಿಚಾರದಲ್ಲಿ ನ್ಯಾಯಾಲಯ ನಮಗೆ ನಮಗೆ ನ್ಯಾಯ ಒದಗಿಸುತ್ತದೆ ಎಂಬ ವಿಶ್ವಾಸ ಇದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ಸರ್ವೆ ಮಾಡುತ್ತಿದ್ದೇವೆ

ಸರ್ವೆ ಮಾಡುತ್ತಿದ್ದೇವೆ

ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರು ಬೇರೆ ಬೇರೆಯಾಗಿ ಪ್ರವಾಸ ಮಾಡುತ್ತಿರುವ ವಿಚಾರದ ಬಗ್ಗೆ ಮಾತನಾಡಿದ ಎಂ.ಬಿ.ಪಾಟೀಲ್, ಸರ್ಕಾರದಲ್ಲಿ ನಮ್ಮ ಶಾಸಕರು ಇಲ್ಲದ ಕಡೆ ಸಿಎಂ ಹೋಗುತ್ತಿದ್ದಾರೆ ಪರಮೇಶ್ವರ ಅವರು ಶಾಸಕರು ಇದ್ದ ಕಡೆ ಪ್ರವಾಸ ಮಾಡುತ್ತಿದ್ದಾರೆ, ಇದು ಎಲ್ಲ ಭಾಗದಲ್ಲೂ ಸರ್ವೆ ಮಾಡಿಕೊಳ್ಳಲೂ ಅನುಕೂಲವಾಗಲಿದೆ ಕಾಂಗ್ರೆಸ್ ನಲ್ಲಿ ನಾವು ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ, ನಮ್ಮಲ್ಲಿ ಬಿನ್ನಾಭಿಪ್ರಾಯವಿಲ್ಲ ಎಂದರು.

English summary
'Shivaprakash swamiji is mean minded fellow, he should know his words before talking' Minister MB Patil said in Vijayapura on December 16th. He also said Mahadayi work is in progress it will complete in two years, till then no one can bring waiter from Mahadayi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X