ಮೃತ್ಯುಂಜಯ ಸ್ವಾಮಿ ಹೇಳಿಕೆ ಸಮರ್ಥಿಸಿಕೊಂಡ ಎಂ.ಬಿ ಪಾಟೀಲ್

By: ವಿಜಯಪುರ ಪ್ರತಿನಿಧಿ
Subscribe to Oneindia Kannada
ಬಸವ ಮೃತ್ಯುಂಜಯ ಸ್ವಾಮೀಜಿಯ ಹೇಳಿಕೆಯನ್ನ ಸಮರ್ಥಿಸಿಕೊಂಡ ಎಂ ಬಿ ಪಾಟೀಲ

ವಿಜಯಪುರ, ನವೆಂಬರ್, 6 : ಪಂಚಮಸಾಲಿ ಪೀಠದ ಮೃತ್ಯುಂಜಯ ಸ್ವಾಮೀಜಿಯ ವಿವದಾತ್ಮಕ ಹೇಳಿಕೆಯನ್ನು ಸಚಿವ ಎಂ ಬಿ ಪಾಟೀಲ ಸಮರ್ಥಿಸಿಕೊಂಡಿದ್ದಾರೆ.

ಲಿಂಗಾಯಿತ ಪ್ರತ್ಯೇಕ ಧರ್ಮ: ಶಿವಶಿವಾ.. ಸಂತರ ಬಾಯಿಯಿಂದ ಇಂಥಾ ಮಾತಾ?

ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಬಿ ಪಾಟೀಲ್, "ಅಪ್ಪ ಎನ್ನುವ ಪದ ಗೌರವದ ಸಂಕೇತ. ಇದನ್ನೇ ದೊಡ್ಡದು ಮಾಡೋದು ಸರಿಯಲ್ಲ. ಪಂಚಮಸಾಲಿ ಶ್ರೀಗಳ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡಿವೆ" ಎಂದು ಸಮರ್ಥನೆ ನೀಡಿದರು.

Minister MB Patil defended of Jaya Mruthyunjaya Swamiji's controversial statement

ವೀರಶೈವರಿಗೆ 5 ಪೀಠಗಳಿದ್ದು, ಐವರು ಗುರುಗಳು. ಲಿಂಗಾಯತರಿಗೆ ಬಸವಣ್ಣ ಒಬ್ಬರೇ ಗುರು ಎನ್ನುವ ಅರ್ಥದಲ್ಲಿ ಶ್ರೀಗಳು ಮಾತನಾಡಿದ್ದಾರೆ. ಇದರಲ್ಲಿ ಯಾವುದೇ ದುರುದ್ದೇಶ, ಕೀಳು ಭಾವನೆ ಇಲ್ಲ ಎಂದು ಸಮರ್ಥಿಸಿಕೊಂಡರು.

ಮಾತಾ ಮಹಾದೇವಿ ವಿರುದ್ಧ ಅನೈತಿಕ ಸಂಬಂಧದ ಆರೋಪ ಮಾಡಿದಾಗ ಮಾಧ್ಯಮಗಳು ಎಲ್ಲಿ ಹೋಗಿದ್ದವು ಎನ್ನುವ ಮೂಲಕ ಮಾಧ್ಯಮಗಳ ಮೇಲೆ ಗೂಬೆ ಕೂರಿಸಲು ಯತ್ನಿಸಿದರು.

"ಐದು ತಂದೆಗೆ ಹುಟ್ಟಿದವರು ವೀರಶೈವರು. ಒಬ್ಬ ತಂದೆಗೆ ಹುಟ್ಟಿದವರು ಲಿಂಗಾಯತರು" ಎಂದು ಭಾನುವಾರ ಹುಬ್ಬಳ್ಳಿಯಲ್ಲಿ ನಡೆದ ಲಿಂಗಾಯತ ಸಮಾವೇಶದಲ್ಲಿ ಹೇಳಿ ವಿವಾದ ಸೃಷ್ಟಿಸಿದ್ದರು.

ಇನ್ನು ಬರುವ ಡಿಸೆಂಬರ್ 10 ರಂದು ವಿಜಯಪುರದಲ್ಲಿ ಬೃಹತ್ ಲಿಂಗಾಯತ ಸಮಾವೇಶ ಹಮ್ಮಿಕೊಳ್ಳಲಾಗ್ತಿದೆ. ಹೋರಾಟ ಎಲ್ಲಿಯೂ ದಾರಿ ತಪ್ಪಿಲ್ಲ. ಇನ್ನು ಬಬಲೇಶ್ವರ ಕ್ಷೇತ್ರದಿಂದ 50 ಸಾವಿರ ಲೀಡ್ ನಲ್ಲಿ ಗೆದ್ದು ಬರೋದು ನಿಶ್ಚಿತ. ತಲೆಕೆಳಗೆ ಕಾಲು ಮೇಲೆ ಮಾಡಿದರೂ ನನ್ನನ್ನ ಸೋಲಿಸೋದಕ್ಕೆ ಸಾಧ್ಯವಿಲ್ಲ ಎಂದು ಎಂಬಿ ಪಾಟೀಲ್ ಸವಾಲು ಎಸೆದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Water Resource Minister MB Patil defended of Jaya Mruthyunjaya Swamiji's controversial statement. Koodalasangama Panchamasali Mutt Peetadipathi Basava Jaya Mruthyunjaya Swamiji gives controversial statement in Hubballi during Lingayat separate religion rally on Sunday (Nov 5).
Please Wait while comments are loading...