ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯಪುರ-ಮಂಗಳೂರು ಜಂಕ್ಷನ್ ರೈಲು ವೇಳಾಪಟ್ಟಿ ಬದಲು

|
Google Oneindia Kannada News

ವಿಜಯಪುರ, ಡಿಸೆಂಬರ್ 10; ಪ್ರತಿದಿನ ಸಂಚಾರ ನಡೆಸುವ ವಿಜಯಪುರ- ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ಈ ರೈಲು ಸಂಚಾರವನ್ನು 2022ರ ಜನವರಿ 15ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಈ ರೈಲಿನ ವೇಳಾಪಟ್ಟಿ ಪರಿಷ್ಕರಣೆ ಮಾಡುವಂತೆ ಒತ್ತಾಯಗಳು ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ವೇಳಾಪಟ್ಟಿ ಪರಿಷ್ಕರಣೆ ಮಾಡಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಕರಾವಳಿ ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ರೈಲು ಇದಾಗಿದೆ.

 ಬೆಂಗಳೂರಿನ ನಮ್ಮ ಮೆಟ್ರೋಗೆ ಸೇರಲಿವೆ 7 ಹೊಸ ರೈಲು ಬೆಂಗಳೂರಿನ ನಮ್ಮ ಮೆಟ್ರೋಗೆ ಸೇರಲಿವೆ 7 ಹೊಸ ರೈಲು

ಪರಿಷ್ಕೃತ ವೇಳಾಪಟ್ಟಿಯಂತೆ ರೈಲು ನಂಬರ್ 07377 ವಿಜಯಪುರ-ಮಂಗಳೂರು ಜಂಕ್ಷನ್ ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ವಿಜಯಪುರದಿಂದ ಸಂಜೆ 6.15ಕ್ಕೆ ಹೊರಟು ಮರುದಿನ ಮಧ್ಯಾಹ್ನ 1.30ರ ಬದಲು 12.40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.

ಮಂಗಳೂರು-ಸುಬ್ರಮಣ್ಯ ರಸ್ತೆ ರೈಲು; ವೇಳಾಪಟ್ಟಿಮಂಗಳೂರು-ಸುಬ್ರಮಣ್ಯ ರಸ್ತೆ ರೈಲು; ವೇಳಾಪಟ್ಟಿ

Mangaluru Junction Vijayapura Daily Special Train Schedule Changed

ರೈಲು ನಂಬರ್ 07378 ಮಂಗಳೂರು ಜಂಕ್ಷನ್-ವಿಜಯಪುರ ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 3 ಗಂಟೆ ಬದಲು ಮಧ್ಯಾಹ್ನ 2.50ಕ್ಕೆ ಹೊರಡಲಿದೆ. ವಿಜಯಪುರಕ್ಕೆ ಮರುದಿನ ಬೆಳಗ್ಗೆ 9.35ರ ಬದಲು 1.40ಕ್ಕೆ ತಲುಪಲಿದೆ ಎಂದು ವೇಳಾಪಟ್ಟಿಯಲ್ಲಿ ಮಾಹಿತಿ ನೀಡಲಾಗಿದೆ.

ಬೆಂಗಳೂರು ಸಬ್‌ಅರ್ಬನ್ ರೈಲು ಯೋಜನೆಗೆ ಮೊದಲ ಟೆಂಡರ್ ಆಹ್ವಾನಬೆಂಗಳೂರು ಸಬ್‌ಅರ್ಬನ್ ರೈಲು ಯೋಜನೆಗೆ ಮೊದಲ ಟೆಂಡರ್ ಆಹ್ವಾನ

ಈ ರೈಲಿನಲ್ಲಿ ಎಸಿ 3 ಟೈರ್ ಕೋಚ್-1, ಸ್ಲೀಪರ್ ಕ್ಲಾಸ್ ಕೋಚ್ -6, ದ್ವಿತೀಯ ದರ್ಜೆ ಸಿಟ್ಟಿಂಗ್ ಕೋಚ್-5, ಲಗೇಜ್ ಮತ್ತು ಬ್ರೇಕ್‌ ವ್ಯಾನ್ 2 ಕೋಚ್‌ಗಳಿವೆ. ಈ ರೈಲಿಗೆ ಚಿಕ್ಕಜಾಜೂರಿನಲ್ಲಿ ನಿಲುಗಡೆಯನ್ನು ನೀಡಲಾಗಿದೆ.

ವಿಜಯಪುರ-ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್‌ಪ್ರೆಸ್ ರೈಲನ್ನು ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಳಿಸಲಾಗಿತ್ತು. ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ರೈಲು ಸೇವೆಯನ್ನು ಮತ್ತೆ ಆರಂಭಿಸಬೇಕು, ವೇಳಾಪಟ್ಟಿ ಬದಲಾವಣೆ ಮಾಡಬೇಕು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವಗೆ ಮನವಿ ಮಾಡಿದ್ದರು. ಬಳಿಕ ಇಲಾಖೆ ರೈಲು ಸಂಚಾರಕ್ಕೆ ಒಪ್ಪಿಗೆ ನೀಡಿತ್ತು. ಆದರೆ ವೇಳಾಪಟ್ಟಿ ಬದಲಾವಣೆ ಮಾಡಿರಲಿಲ್ಲ.

ಕರಾವಳಿ ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ಪ್ರಮುಖ ರೈಲು ಇದಾಗಿದೆ. ಆದರೆ ರೈಲಿನ ವೇಳಾಪಟ್ಟಿ ಬಗ್ಗೆ ಜನರು ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ವೇಳಾಪಟ್ಟಿ ಬದಲಾವಣೆ ಮಾಡಿ, ರೈಲು ಸಂಚಾರವನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಹಂಪಿ ಎಕ್ಸ್‌ಪ್ರೆಸ್ ರೈಲು ಮಾರ್ಗದಲ್ಲಿ ಬದಲಾವಣೆ; ಹುಬ್ಬಳ್ಳಿ-ಮೈಸೂರು ನಡುವೆ ಸಂಚಾರ ನಡೆಸುವ ಹಂಪಿ ಎಕ್ಸ್‌ಪ್ರೆಸ್ ರೈಲಿನ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಡಿಸೆಂಬರ್ 13 ಹಾಗೂ 14ರಂದು ಬದಲಾವಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.

ಹುಬ್ಬಳ್ಳಿಯಿಂದ ತೆರಳುವಾಗ ರೈಲು ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರ, ಅರಸೀಕೆರೆ, ತುಮಕೂರು, ಯಶವಂತಪುರ ಮಾರ್ಗದಲ್ಲಿ ತೆರಳಲಿದೆ. ಮೊದಲು ರೈಲು ಗುಂತಕಲ್, ಧರ್ಮಾವರಂ, ಪೆನುಕೊಂಡ, ಹಿಂದೂಪುರ, ಗೌರಿಬಿದನೂರ, ದೊಡ್ಡಬಳ್ಳಾಪುರ ಮತ್ತು ಯಲಹಂಕ ಮಾರ್ಗದ ಮೂಲಕ ತೆರಳುತ್ತಿತ್ತು.

ರೈಲು ಸಂಚಾರ ವಿಸ್ತರಣೆ; ವಾಸ್ಕೋಡಗಾಮ ಹಾಗೂ ಜೈಸಿದಿಹ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು 2022ರ ಜನವರಿ 28ರ ತನಕ ಹಾಗೂ ಜೈಸಿದಿಹ್-ವಾಸ್ಕೋಡಗಾಮ ನಡುವಿನ ರೈಲು ಸಂಚಾರವನ್ನು ಜನವರಿ 31ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಈ ರೈಲು ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸ್‌ಗಢ್, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕ, ಗೋವಾ ರಾಜ್ಯಗಳ ಮೂಲಕ ಸಂಚಾರ ನಡೆಸಲಿದೆ.

ಕರ್ನಾಟಕದಲ್ಲಿ ರಾಯಚೂರು, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ, ಲೋಂಡಾ, ಕ್ಯಾಸಲ್‌ ರಾಕ್ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.

2 ಕೋಟಿ ದಂಡ ಕಟ್ಟಿದ ಜನರು; ನೈಋತ್ಯ ರೈಲ್ವೆ ವಿಭಾಗದಲ್ಲಿ ಟಿಕೆಟ್ ಖರೀದಿ ಮಾಡದೇ ಸಂಚಾರ ನಡೆಸುತ್ತಿದ್ದ ಪ್ರಯಾಣಿಕರಿಂದ ಒಂದೇ ತಿಂಗಳಿನಲ್ಲಿ 2 ಕೋಟಿ ದಂಡ ವಸೂಲಿ ಮಾಡಲಾಗಿದೆ. 38,479 ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು,2,18,72,355 ರೂ. ದಂಡದ ರೂಪದಲ್ಲಿ ಸಂಗ್ರಹ ಮಾಡಲಾಗಿದೆ.

Recommended Video

Virat Kohli ಜೊತೆ BCCI ನಡೆದುಕೊಂಡ ರೀತಿಗೆ ಮರುಗಿದ ಪಾಕಿಸ್ತಾನ ಆಟಗಾರರು | Oneindia Kannada

English summary
Indian railways changed the schedule of Mangaluru Junction-Vijayapura daily special train.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X