• search
  • Live TV
ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕನ್ನಡ ಎಂಎಯಲ್ಲಿ ಐದು ಚಿನ್ನದ ಪದಕ ಪಡೆದ ಮಹಾರಾಷ್ಟ್ರದ ಯುವತಿ

|

ವಿಜಯಪುರ, ಫೆಬ್ರವರಿ 14: ಗಡಿಜಿಲ್ಲೆಗಳಲ್ಲಿ ಎರಡು ರಾಜ್ಯಗಳ ನಡುವಿನ ಸಂಘರ್ಷ ಇಂದು ನಿನ್ನೆಯದ್ದಲ್ಲ. ಭಾಷೆ ಮತ್ತು ಗಡಿ ವಿವಾದ ಎರಡೂ ರಾಜ್ಯಗಳ ನಡುವೆ ರಾಜಕೀಯ ಬಣ್ಣ ಪಡೆದು ಹಲವು ದಶಕಗಳೇ ಆಗಿವೆ. ಅದರ ಜತೆಯಲ್ಲಿಯೇ ಇಲ್ಲಿನ ಜನರು ಸೌಹಾರ್ದದ ಬದುಕನ್ನೂ ಕಂಡುಕೊಂಡಿದ್ದಾರೆ.

ಕನ್ನಡಿಗರು ಮರಾಠಿ ಕಲಿಯುವುದು ಮರಾಠಿಗರು ಕನ್ನಡದಲ್ಲಿ ವ್ಯವಹರಿಸುವುದು ಹೊಸತಲ್ಲ. ಆದರೆ, ಮಹಾರಾಷ್ಟ್ರದ ಯುವತಿಯೊಬ್ಬರು ಬುಧವಾರ ನಡೆದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ಮಹಾರಾಷ್ಟ್ರದ ಸುಧಾರಾಣಿ ಶಿವಪ್ಪ ಮನೂರ್ ಕನ್ನಡ ಮಾಧ್ಯಮದಲ್ಲಿ ಸಾಧನೆ ತೋರುವ ಮೂಲಕ ಗಮನ ಸೆಳೆದಿದ್ದಾರೆ.

ಖೇಲೋ ಇಂಡಿಯಾದಲ್ಲಿ ಕರಾವಳಿ ಬಾಲಕಿಯರ ಪಾರಮ್ಯ

ಸಾಂಗ್ಲಿ ಜಿಲ್ಲೆಯ ಜಾಟ್ ತಾಲ್ಲೂಕಿನ ಬೆಲ್ಲುಂಡ್ಗಿ ಎಂಬ ಕುಗ್ರಾಮದ ಈ ಯುವತಿ ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಐದು ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.

ಸಾಮಾನ್ಯ ರೈತನ ಮಗಳಾದ ಸುಧಾರಾಣಿ ಅವರ ಕುಟುಂಬದಲ್ಲಿ ಹೆಚ್ಚಿನವರು ಅಕ್ಷರಸ್ಥರಲ್ಲಿ. ಸುಧಾರಾಣಿ ಅವರನ್ನು ಹೊರತುಪಡಿಸಿ ಬೇರಾರೂ ಎಸ್‌ಎಸ್‌ಎಲ್‌ಸಿ ದಾಟಿ ಶಿಕ್ಷಣ ಪಡೆದಿಲ್ಲ. ಆದರೆ, ಇವರು ಮಾತ್ರ ಓದಿನಲ್ಲಿ ಬಹಳ ಚುರುಕು. ದ್ವಿತೀಯ ಪಿಯು ಮತ್ತು ಪದವಿ ಪರೀಕ್ಷೆಗಳಲ್ಲಿಯೂ ಅವರು Rank ಪಡೆದಿದ್ದಾರೆ.

ಎಂಎಯಲ್ಲಿ ಸಾಧನೆ ಮಾಡಿದ ಬಳಿಕ ಇಲ್ಲಿಯೇ ಪಿಎಚ್‌ಡಿ ಕೂಡ ಮಾಡಲು ಬಯಸಿರುವ ಸುಧಾರಾಣಿ, ಕರ್ನಾಟಕದಲ್ಲಿಯೇ ಕೆಲಸ ಮಾಡಲು ಬಯಸಿದ್ದಾರೆ. ಪ್ರಾಥಮಿಕದಿಂದ ಸ್ನಾತಕೋತ್ತರ ಶಿಕ್ಷಣದವರೆಗೂ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದು ಎಂಬುದನ್ನು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಬೆಂಗಳೂರು ವಿವಿಯಲ್ಲಿ rank ಪಡೆದರೂ ಇಲ್ಲ ಚಿನ್ನದ ಪದಕ

ಇದೇ ವಿಶ್ವವಿದ್ಯಾಲಯದಲ್ಲಿ ಅಟೆಂಡರ್ ಆಗಿರುವ ನೌಕರನ ಮಗಳು ಗೀತಾ ಜಾಮದಾರ್ ಅರ್ಥಶಾಸ್ತ್ರದಲ್ಲಿ ಮೂರು ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ಚಂದ್ರಕಲಾ ತಡಕಲ್ ಸಮಾಜಶಾಸ್ತ್ರ ಎಂಎನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗಳಿಸಿದ್ದಾರೆ.

English summary
Sudharani Shivappa Manur from Bellundgi village in Jat Taluk of SAnglu district Maharashtra has secured five gold medals in MA Kannada. She was awarded in the 10th convocation of Akkamahadevi Women's University in Vijayapur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X