ಆಲಮೇಲ ಪಟ್ಟಣದಲ್ಲಿ ಕಾಲುವೆ ಒಡೆದು ನಗರ ಸಂಪೂರ್ಣ ಜಲಾವೃತ
ವಿಜಯಪುರ, ಡಿಸೆಂಬರ್19 : ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಆಲಮೇಲ ಪಟ್ಟಣದಲ್ಲಿ ಕಾಲುವೆ ಒಡೆದು ಪಟ್ಟಣಕ್ಕೆ ನೀರು ನುಗ್ಗಿದ ಘಟನೆ ಮಂಗಳವಾರ ನಡೆದಿದೆ.
ಕೃಷ್ಣಭಾಗ್ಯ ಜಲ ನಿಗಮದ 16 ನೇ ವಿತರಣಾ ಯೋಜನೆಯಲ್ಲಿ ಕಾಲುವೆ ಒಡೆದು ಅವಾಂತರ ಸೃಷ್ಟಿಸಿದ್ದಾರೆ, ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಆಲಮೇಲ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಬಸ್ ನಗರದಲ್ಲಿರುವ ಮನೆಗಳ ಕಾಂಪೌಂಡ್ ಹಾಗೂ ರಸ್ತೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ.

ರಸ್ತೆ ಜಲಾವೃತವಾಗಿರುವುದರಿಂದ ಸಂಚಾರ ಅಸ್ತವ್ಯಸ್ತವಾಗಿದೆ. ರಸ್ತೆಯಲ್ಲಿ ಸಂಚರಿಸುವವರು ಪರದಾಡುವಂಆಗಿದೆ. ಕಳೆದ ಮೂರು ವರ್ಷದಗಳ ಹಿಂದೆಯೇ ಕಾಲುವೆ ಒಡೆದಿದೆ. ಪ್ರತಿ ಬಾರಿ ಕಾಲುವೆಗೆ ನೀರು ಹರಿಸಿದಾಗಲೆಲ್ಲ ಬಸವನಗರ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.
ಈ ಕುರಿತು ಕೆಬಿಜೆಎನ್ ಎಲ್ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications