ಗಂಗಾಧರ ಚಡಚಣ ಹತ್ಯೆ : ನಾಲ್ವರಿಗೆ ಹೈಕೋರ್ಟ್‌ನಿಂದ ಜಾಮೀನು
ವಿಜಯಪುರ, ಏಪ್ರಿಲ್ 22 : ವಿಜಯಪುರ ಜಿಲ್ಲೆಯಲ್ಲಿ ಬಾರಿ ಚರ್ಚೆಗೆ ಕಾರಣವಾಗಿದ್ದ ಗಂಗಾಧರ ಚಡಚಣ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. 2017ರ ಅಕ್ಟೋಬರ್‌ನಲ್ಲಿ ಗಂಗಾಧರ ಚಡಚಣ ಹತ್ಯೆ ನಡೆದಿತ್ತು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕಲಬುರಗಿ ಹೈಕೋರ್ಟ್ ಪೀಠ ನಾಲ್ವರು ಆರೋಪಿಗಳಿಗೆ ಸೋಮವಾರ ಜಾಮೀನು ಮಂಜೂರು ಮಾಡಿದೆ. ಆದರೆ, ಈ ಆರೋಪಿಗಳು ಧರ್ಮರಾಜ ಚಡಚಣ ಹತ್ಯೆ ಪ್ರಕರಣದಲ್ಲಿಯೂ ಆರೋಪಿಗಳಾಗಿದ್ದು, ಜೈಲಿನಿಂದ ಬಿಡುಗಡೆಯಾವುದಿಲ್ಲ.

ಹಿಂದೆ ಚಡಚಣ ಠಾಣೆ ಪಿಎಸ್‌ಐ ಆಗಿದ್ದ ಗೋಪಾಲ ಹಳ್ಳೂರ, ಪೊಲೀಸ್ ಪೇದೆಗಳಾದ ಸತ್ಯಪ್ಪ ನಾಯ್ಕೋಡಿ, ಸಿದ್ದಾಡೂಢ ರೂಗಿ, ಚಂದ್ರಶೇಖರ ಜಾಧವ ಅವರಿಗೆ ಕಲಬುರಗಿ ಹೈಕೋರ್ಟ್ ಪೀಠ ಜಾಮೀನು ನೀಡಿದೆ.
2017ರ ಅಕ್ಟೋಬರ್ 30ರಂದು ವಿಜಯಪುರದಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಧರ್ಮರಾಜ ಚಡಚಣ ಮೃತಪಟ್ಟಿದ್ದ. ಆಗ ಸ್ಥಳದಲ್ಲಿದ್ದ ಗಂಗಾಧರ ಚಡಚಣನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಆತ ನಾಪತ್ತೆಯಾಗಿದ್ದ. ಬಳಿಕ ಆತನ ಹತ್ಯೆ ನಡೆದ ವಿಚಾರ ಬೆಳಕಿಗೆ ಬಂದಿತ್ತು. ಆದರೆ, ಶವ ಪತ್ತೆಯಾಗಿರಲಿಲ್ಲ.












Click it and Unblock the Notifications