Earthquake :ಬಾಗಲಕೋಟೆ, ವಿಜಯಪುರದಲ್ಲಿ ಭೂಕಂಪನ, ರಿಕ್ಟರ್ ಮಾಪಕದಲ್ಲಿ 4.9 ತೀವ್ರತೆ ದಾಖಲು

ವಿಜಯಪುರ, ಜುಲೈ 9 : ಹಾಸನ, ಕೊಡಗು ಜಿಲ್ಲೆಯ ನಂತರ ಇದೀಗ ವಿಜಯಪುರ ಮತ್ತಯ ಬಾಗಲಕೋಟೆ ನಜಿಲ್ಲೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆತಂಕಕ್ಕೀಡಾಗಿದ್ದಾರೆ. ಶನಿವಾರ ಬೆಳಿಗ್ಗೆ 6:21ರ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ, ಮಲಗಿದ್ದ ಜನರು ಭೀತಿಯಿಂದ ಓಡಿ ಹೊರಗೆ ಓಡಿ ಬಂದಿದ್ದಾರೆ.

ವಿಜಯಪುರ ಗ್ರಾಮೀಣಭಾಗದಲ್ಲಿ ಹೆಚ್ಚು ಭೂ ಕಂಪನದ ಅನುಭವ ಹೆಚ್ಚಾಗಿದೆ, ಇನ್ನು ರಿಕ್ಟರ್ ಮಾಪಕದಲ್ಲಿ 4.9 ತೀವ್ರತೆಯಲ್ಲಿ ಭೂಮಿಯಾಳದ 5 ಕಿಲೋ ಮೀಟರ್‌ ಒಳಗಿನಿಂದ ಭೂಮಿ ನಡುಗಿದೆ. ಬಸವನಬಾಗೇವಾಡಿ ಭಾಗದಲ್ಲಿ ಭೂಕಂಪನ ಕೇಂದ್ರೀಕೃತವಾಗಿತ್ತು ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ ಪ್ರಾಥಮಿಕ ವರದಿ ನೀಡಲಾಗಿದೆ.

ವಿಜಯಪುರದಲ್ಲಿ 2 ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಬೆಳಿಗ್ಗೆ 6:22ಕ್ಕೆ 4.9ರ ತೀವ್ರತೆಯಲ್ಲಿ ಭೂಮಿ ಕಂಪಿಸಿದರೆ, 6:24ರಲ್ಇ 4.6ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ವಿಯಜಪುರ , ಇಂಡಿ, ಬಸವನ ಬಾಗೇವಾಡಿ , ಬಬಲೇಶ್ವರ, ಸೊಲ್ಲಾಪುರ, ಜಮಖಂಡಿ ಭಾಗಗಳಲ್ಲಿ ಭೂಕಂಪನದ ತೀವ್ರತೆ ದಾಖಲಾಗಿದೆ.

Earthquake measuring 4.9 on Richter scale hits Bagalkot & Vijayapura Districts

ಬಾಗಲಕೋಟೆಯಲ್ಲೂ ಭೂಕಂಪನದ ಅನುಭವ:
ಬಾಗಲಕೋಟೆ ಜಿಲ್ಲೆಯ ಜಮಖಂಡಿ ಭಾಗದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ಜಮಖಂಡಿ ತಾಲ್ಲೂಕಿನ ತುಬಚಿ ಎಂಬ ಗ್ರಾಮದಲ್ಲಿ ಎರಡು ಮೂರು ಸೆಕೆಂಡ್ ಭೂಮಿ ಕಂಪಿಸಿದೆ. ಜಮಖಂಡಿ ನಗರದ ಹುಡ್ಕೊ ಕಾಲನಿಯಲ್ಲೂ 6 ಗಂಟೆ 21 ನಿಮಿಷದಲ್ಲಿ ಭೂಮಿ ಕಂಪಿಸಿತು ಎಂದು ಜಿಯೋಗ್ರಫಿ ಅಧ್ಯಯನ ಮಾಡಿರುವ ಅನಂದ ಕಾಳಪ್ಪ ಎಂಬುವವರು ಮಾಹಿತಿ ನೀಡಿದ್ದಾರೆ. ಭೂ ಕಂಪನದ ಬಗ್ಗೆ ಜಿಲ್ಲಾಡಳಿತ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದೆ.

ರಾಜ್ಯವಲ್ಲದೆ, ಮಹಾರಾಷ್ಟ್ರದ ಮುಂಬೈ , ಪುಣೆ ಭಾಗದಲ್ಲೂ ಭೂಮಿ ಕಂಪನದ ತೀವ್ರತೆ ಉಂಟಾಗಿದೆ. ಮಹಾರಾಷ್ಟ್ರದ ಸಾಂಗಲಿ ಭೂಕಂಪನ‌‌ ಕೇಂದ್ರ ಹಾಗೂ ಸೊಲ್ಲಾಪುರ ಭೂಕಂಪನ ಕೇಂದ್ರದಿಂದ ತೀವ್ರತೆಯನ್ನು ದಾಖಲಿಸಲಾಗಿದೆ. ಕೆಲವೆಡೆ ಭೂಕಂಪನದಿಂದ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಕೆಲವು ತಗಡಿನ ಶೀಟ್‌ , ಮನೆಗಳು ಅಲುಗಾಡಿದ ಘಟನೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+