ವಿಜಯಪುರ, ಕಲಬುರಗಿಯಲ್ಲಿ ಭೂಮಿ ಕಂಪಿಸಿದ ಅನುಭವ

ವಿಜಯಪುರ, ಸೆಪ್ಟೆಂಬರ್ 17: ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ನಿನ್ನೆ ರಾತ್ರಿ ಭೂಮಿ ಕಂಪಿಸಿದ ಅನುಭವವಾಗಿರುವುದಾಗಿ ತಿಳಿದುಬಂದಿದೆ.

ನಿನ್ನೆ ರಾತ್ರಿ 11:30ರ ಸುಮಾರಿಗೆ ಭೂಮಿ ಕಂಪಿಸಿದಂತಾಗಿ, ಮಲಗಿದ್ದ ಜನರು ಎಚ್ಚರಗೊಂಡು ಮನೆಯಿಂದ ಹೊರಗೆ ಬಂದಿದ್ದಾರೆ. ಭೂಕಂಪದ ಭಯದಿಂದ ಮನೆಯ ಹೊರಗಡೆಯೇ ಕುಳಿತು ರಾತ್ರಿ ಕಳೆದಿದ್ದಾರೆ.

ಇದು ನಿಜವಾಗಿಯೂ ಭೂಕಂಪವೋ ಅಥವಾ ಭೂಮಿ ಕಂಪಿಸಿದ ಅನುಭವವಾಗಲು ಬೇರೇನಾದರೂ ಕಾರಣಗಳಿವೆಯಾ ಎಂಬುದರ ಕುರಿತು ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ. ಈ ಕುರಿತು ವಿಜಯಪುರ ಜಿಲ್ಲಾಡಳಿತವೂ ಯಾವುದೇ ಮಾಹಿತಿ ನೀಡಿಲ್ಲ. ವಿಜಯಪುರದ ಮನಗೂಳಿ ಮತ್ತು ಸುತ್ತಮುತ್ತಲಿನ ಜನಕ್ಕೆ ಈ ಅನುಭವವಾಗಿರುವುದಾಗಿ ತಿಳಿಸಿದ್ದಾರೆ. ಆದರೆ ವಿಜಯಪುರ ಜಿಲ್ಲೆಯ ಮನಗೂಳಿಯಲ್ಲಿ ಭೂಕಂಪವಾಗಿಲ್ಲ. ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಸಿಸ್ಮಿಕ್ ಸೆಂಟರ್​ನಲ್ಲಿ ಭೂಮಿ ಕಂಪಿಸಿದ ಬಗ್ಗೆ ಯಾವುದೇ ಅಂಶಗಳು ದಾಖಲಾಗಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣ ಕೇಂದ್ರದ ಮಾಹಿತಿ ನೀಡಿದೆ.

Earthquake Experience At Vijayapura And Kalaburagi Districts

ವಿಜಯಪುರದಲ್ಲಷ್ಟೇ ಅಲ್ಲದೇ ಕಲಬುರಗಿ ಜಿಲ್ಲೆಯಲ್ಲೂ ಭೂಮಿ ಕಂಪಿಸಿದ ಅನುಭವವಾಗಿರುವುದಾಗಿ ತಿಳಿದುಬಂದಿದೆ. ಜೊತೆಗೆ, ವಿಚಿತ್ರ ಶಬ್ದ ಕೇಳಿಸಿರುವುದಾಗಿ ತಿಳಿದುಬಂದಿದೆ.

Recommended Video

      Modi ಹುಟ್ಟಿದ ಹಬ್ಬಕ್ಕೆ ಯಾರೆಲ್ಲಾ ಶುಭಾಶಯ ಕೋರಿದ್ದಾರೆ ನೋಡಿ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+