ರಾಹುಲ್ ಗಾಂಧಿ, ದೇವೇಗೌಡರ ಬಗ್ಗೆ ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ ಯತ್ನಾಳ
ವಿಜಯಪುರ, ಆಗಸ್ಟ್ 29: ಕಾಂಗ್ರೆಸ್ ಹಾಗೂ ಜೆಡಿಎಸ್ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ರಾಹುಲ್ ಗಾಂಧಿ ಒಬ್ಬ ಅರೆ ಹುಚ್ಚ ಎಂದು ಆಕ್ಷೇಪಾರ್ಹ ಭಾಷೆ ಬಳಸಿ ಬೈದರು.
ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹಿರಿಯರಾದ ದೇವೇಗೌಡರನ್ನೂ ವ್ಯಂಗ್ಯ ಮಾಡಿದ ಅವರು ದೇವೇಗೌಡ ಅವರ ಧನಿಯನ್ನು ಮಿಮಿಕ್ರಿ ಮಾಡಿದರು.

ರಾಹುಲ್ ಗಾಂಧಿ ಒಬ್ಬ ಅರೆಹುಚ್ಚ, ಆತನಿಗೆ ಬುದ್ಧಿ ಇದೆಯೋ ಇಲ್ಲವೋ ಗೊತ್ತಿಲ್ಲ, ಜರ್ಮನ್ ನಲ್ಲಿ ಹೋಗಿ ಏನೇನೋ ಮಾತಾಡ್ತಾನೆ, ಅಂತಹವನು ನಮ್ಮ ನಾಯಕ ಎಂದು ಹೇಳಿಕೊಂಡು ಇವರು ಓಡಾಡುತ್ತಾರೆ ಎಂದು ಏಕವಚನದಲ್ಲಿಯೇ ಅವರು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ಅವರು ನಾಲಿಗೆ ಹರಿಬಿಟ್ಟರು.
ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗಿಲ್ಲ, ಅಟಲ್ ಜಿ ಕೊನೆಯ ಆಸೆ ನದಿಗಳ ಜೋಡಣೆ ಮಾಡುವದಾಗಿತ್ತು, ಆದ್ರೆ ಮಾಜಿ ಪ್ರಧಾನಿ ದೇವೆಗೌಡರ ಕೊನೆಯ ಆಸೆ ಹಾಗೂ ಕನಸು ಏನಾಗಿತ್ತು ಅಂದ್ರೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡೋದಾಗಿತ್ತು ಎಂದು ಹೇಳಿದರು.
ದೇವೇಗೌಡರ ಕುಟುಂಬವನ್ನು ಗುರಿ ಮಾಡಿಕೊಂಡ ಅವರು, ಕುಮಾರಸ್ವಾಮಿ ಸಿಎಂ ಆಗಬೇಕು, ರೇವಣ್ಣಗೆ PWD ಪವರ್ ಬೇಕು, ಡಿ ಸಿ ತಮ್ಮಣ್ಣ, ಪುಟ್ಟರಾಜು ಎಲ್ಲರೂ ಮಂತ್ರಿಗಳೆ ಸಂಭಂದಿಕರು ಹಾಗೂ ಒಕ್ಕಲಿಗರೇ ಮಂತ್ರಿಗಳಾಗಬೇಕು,
ಮನೆಯವರೇಲ್ಲ ಕಮಿಷನ್ ತಿನ್ನಬೇಕು ಎಂದು ಅವರು ವಾಗ್ದಾಳಿ ನಡೆಸಿದರು.












Click it and Unblock the Notifications