ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2022ಕ್ಕೆ ಮಹಾ ರೋಗ ರುಜಿನ ಮುಕ್ತಾಯ: ಕೊಡೆಕಲ್ ಮಹಾರಾಜ್ ಭವಿಷ್ಯವಾಣಿ

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

''ಮುಂದೆ ಡಿಸೆಂಬರ್ ತಿಂಗಳಿನಲ್ಲಿ ಎರಡು ಗಂಟೆಗಳ ಕಾಲ ಬೆಂಕಿದ್ ಮಳೆಯಾಗಬೇಕು ಎಂದು ಕೊಡೆಕಲ್ಲಿನವರ....ಆ ಕಾಲಕ್ಕೆ ನೋಡಿ
ಇದೇ ವರ್ಷ 2021ಕ್ಕೆ ಏನು ರೋಗ ರುಜಿನ ಬಂದೈತೋ.. 2022ಕ್ಕೆ ಮುಕ್ತಾಯವಾಗಬೇಕಂತೆ...'' ಎಂದು ಕೊಡೆ ಹಿಡಿದುಕೊಂಡು ವಿಜಯಪುರ ಜಿಲ್ಲೆಯ ಯಾವುದೋ ಒಂದು ಓಣಿಕೇರಿಯಲ್ಲಿ ಶರಣರು ಕಾಣಿಸಿಕೊಳ್ಳುವ ಸಮಯ ಇದಾಗಿದೆ.. ಕೊಡೆಕಲ್ ಮಹಾರಾಜ್ ವಿರಚಿತ ಕಾಲಜ್ಞಾನ ಗ್ರಂಥದ ಉಕ್ತಿಗಳನ್ನು ಕಾಲಕಾಲಕ್ಕೆ ಊರೂರು ಸುತ್ತಿ ಶರಣರು ಎಲ್ಲರಿಗೂ ತಿಳಿಸುವುದು ರೂಢಿಯಲ್ಲಿದೆ. ಅದರಂತೆ, ಕಳೆದ ಒಂದು ತಿಂಗಳಿನಿಂದ ಕೊಡೆಕಲ್ ಬಸವೇಶ್ವರ ಮಹಾರಾಜ್ ಭವಿಷ್ಯವಾಣಿ ಸದ್ದು ಮಾಡುತ್ತಿದೆ.

ಬಸವನ ಬಾಗೇವಾಡಿ ತಾಲೂಕಿನ ನಂದಿಹಾಳ ಪಿ.ಯು. ಗ್ರಾಮದ ಕೊಡೇಕಲ್ಲ ಬಸವೇಶ್ವರರ ಕಾಲಜ್ಞಾನದ ಪುಸ್ತಕದಲ್ಲಿ ಕೊರೊನಾವೈರಸ್ ಬಗ್ಗೆ ಮೊದಲೇ‌ ಬರೆಯಲಾಗಿದೆ ಎಂದು ಭಕ್ತರು ನಂಬಿದ್ದಾರೆ. ''ಆಕಾಶದಿಂದ ಬರಲಿದೆ ಲೋಕಕ್ಕೆ ವಿಷದ ಗಾಳಿ...'' ಎಂದು 15ನೇ ಶತಮಾನದಲ್ಲೇ ಕೊಡೇಕಲ್ಲ ಬಸವೇಶ್ವರ ಕಾಲಜ್ಞಾನದ ಪುಸ್ತಕದಲ್ಲಿ ಉಲ್ಲೇಖವಾಗಿದೆ. ಕೊರೊನಾ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದಾರೆ. ಭವಿಷ್ಯವಾಣಿಯಲ್ಲಿ ಹೇಳಿರುವಂತೆ ಉತ್ತರದಲ್ಲಿರುವ ಚೀನಾದಿಂದ ಭಾರತಕ್ಕೆ ವಿಷದ ಗಾಳಿ ಬೀಸಿದೆ.

ಮಾಸ್ಕ್ ಧರಿಸಿ, ನಿಯಮ ಪಾಲಿಸಿ ಎಂದ ಸಂಗಯ್ಯ ಸ್ವಾಮೀಜಿ
ಅಸತ್ಯದಿಂದ ನಡೆಯುವ ಕಾಲ ಬಂದಾಗ ಕಷ್ಟಕಾಲ‌ ಹೆಚ್ಚಾಗಲಿದೆ. ಇದರಿಂದ ಪಾರಾಗಲು ಭಗವಂತನಲ್ಲಿ ಭಕ್ತಿಯಿಂದ ನಡೆಯಬೇಕು. ಸರ್ಕಾರದ ಆದೇಶ ಪಾಲನೆ ಮಾಡಬೇಕು. ಸಾಮಾಜಿಕ ಅಂತರ ಕಾಪಾಡಬೇಕು, ಮನೆಯಲ್ಲೇ ಇರಬೇಕು, ಮಾಸ್ಕ್ ಧರಿಸಬೇಕು. ಹೀಗೆ ಮಾಡಿದ್ರೆ ಮಾತ್ರ ಇದರಿಂದ ಪಾರಾಗಲು ಸಾಧ್ಯ, ಅಂದಾಗ ಮಾತ್ರ ಸುಖ ಸಂತೋಷ ಕಾಣಲಿದೆ, ಇಲ್ಲವಾದಲ್ಲಿ ಇನ್ನೂ ಕಷ್ಟ ಬರಲಿದೆ ಎಂದು ಮಠದ ಸಂಗಯ್ಯ ಸ್ವಾಮೀಜಿ ಕಾಲಜ್ಞಾನ ಪುಸ್ತಕ ನೋಡಿ ನುಡಿದಿದ್ದಾರೆ.

Astrology: Vijayapura Kodekallu Maharaj prediction on Rain, Tax, disease

ಕೊಡೆಕಲ್ ಸ್ವಾಮೀಜಿ ಇತ್ತೀಚಿನ ನುಡಿಗಳು ಇಂತಿವೆ:
ಆ ಕಾಲಕ್ಕೆ ನೋಡ್ರಣ್ಣ, ಕುಂತವನಿಗು ಸುಂಕ, ನಿಂತವನಿಗು ಸುಂಕ, ಕುಡಿಯುವ ನೀರಿಗೂ ಸುಂಕ, ಅನ್ನುಂಟು, ಆಳಿಲ್ಲ, ಹೆಣ್ಣುಂಟು ನಾಳೆ ಗಂಡಿರಬೇಕಾದ ಕಾಲಬರಬೇಕಂತೆ..

ಆ ಕಾಲಕ್ಕೆ ನೋಡ್ರಣ್ಣ, ಒಬ್ಬೊಬ್ಬ ಮಗ ಇರುವನು.. ಸೂರ್ಯ ಹುಟ್ಟೋ ಕಡೆ.. 100 -200 ಕಿ.ಮೀನಷ್ಟು ಸಂಚರಣೆ ಮಾಡಬಾರದಂತೆ.. ಹೋಗಬೇಕಾದರೆ ಮಂದಿಯಾಗಿ ಹೋಗ್ತನಂತೆ, ಬರಬೇಕಾದರೆ ಹೆಣವಾಗಿ ಬರ್ತಾನಂತೆ..ಕೊಡೆಕಲ್ಲಿನವರ ಕಾಲಜ್ಞಾನದವರು ಹೇಳಾರೆ

ಆ ಕಾಲಕ್ಕೆ ನೋಡಿ ಮುಂದೆ ಮಳೆ ಬೆಳೆಗಳು... ಮೂರು ವರ್ಷಗಳ ಕಾಲ ಸಂಪೂರ್ಣವಾಗಿ ಮಳೆ ಬೆಳೆಗಳು ಬರೆದವರೆ.. 2 ರುಪಾಯಿ ಭಾಗ ಮಳೆ, 1 ರುಪಾಯಿ ಭಾಗ ಬಿಸಿಲು, 50 ಪೈಸೆ ಗಾಳಿಯಾಗಬೇಕೆಂದ ಕೊಡೆಕಲ್ಲಿನವರಿಗೆ ಶರಣೆನ್ನಿ

ಕರ್ಮವು ಲಯವಾಗಿ, ಧರ್ಮವು ಜಯವಾಗಲಿ, ಕೊಡೆಕಲ್ ಮಹಾರಾಜ್ ಕಿ ಜೈ

ಇದಕ್ಕೂ ಮುನ್ನ.. ಇನ್ನು ಹಂಪಿಯಲ್ಲಿ ಕಲ್ಲು ಕೋಳಿ ಎಚ್ಚೆತ್ತು ಕೂಗಿದಾಗ ಹಾಗೂ ಕೂಡಲ ಸಂಗಮದಲ್ಲಿನ‌ ಶಿಖರ ಮುಳುಗಿ ಅದರ ಮೇಲೆ ಕಾಗೆಯೊಂದು ಕುಳಿತು ನೀರು ಕುಡಿದಾಗ ಪ್ರಳಯದ ಸೂಚನೆ ಸಿಗಲಿದೆ. ಆ ಬಳಿಕ ಕೂಡಲ ಸಂಗಮದ ಸಂಗಮನಾಥನ ತೇರು ಜಲದುರ್ಗಕ್ಕೆ ಸಾಗಿದಾಗ ಪ್ರಳಯ ಆಗಲಿದೆ ಎಂದು ಭವಿಷ್ಯವನ್ನೂ ಸಹ ನುಡಿದಿದ್ದಾರೆ. ಆಗ ಎಲ್ಲವೂ ನಾಶವಾಗಲಿದ್ದು, ಉರಿಯೊಳಗಿನ(ಬೆಂಕಿಯೊಳಗಿನ) ಸಸಿ ಉಳಿದಂತೆ ಶರಣರು ಮಾತ್ರ ಉಳಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಾಲಜ್ಞಾನವೊಂದು ಸಿದ್ಧಿ

Recommended Video

Virat Kohli ನಾಯಕತ್ವದಿಂದ ಕೆಳಗಿಯುತ್ತಿದ್ದಂತೆ ಶಾಕಿಂಗ್ ನ್ಯೂಸ್ ಕೊಟ್ಟ Ravindra Jadeja | Oneindia Kannada

ತ್ರಿಕಾಲ ಜ್ಞಾನಿಗಳಾದ ಶಿವಶರಣರೇ ಮೊದಲಾದವರು ಭವಿಷ್ಯವನ್ನು ಕುರಿತು ಹಾಡಿದ ವಚನಗಳಿವು. ಇಂಥದೇ ವಿಷಯ ಪುರಾಣಗಳಲ್ಲಿ, ದಾಸರ ಪದಗಳಲ್ಲಿ ಬಂದಿರುವುದೂ ಉಂಟು. ಕಾಲಜ್ಞಾನವೊಂದು ಸಿದ್ಧಿ. ಪತಂಜಲಿ ಋಷಿಗಳು ತಮ್ಮ ಯೋಗದರ್ಶನದ ವಿಭೂತಿ ಪಾದದಲ್ಲಿ ಇದರ ಬಗ್ಗೆ ತಿಳಿಸಿದ್ದಾರೆ

ಧರ್ಮ, ಲಕ್ಷಣ, ಅವಸ್ಥಾ-ಈ ಪರಿಣಾಮಗಳಲ್ಲಿ ಸಂಯಮ ಮಾಡುವುದರಿಂದ ಕ್ರಮವಾಗಿ ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲದ ಜ್ಞಾನವಾಗುವುದು ಎಂದು ಅವರ ಮತ. ಅಂಥ ತ್ರಿಕಾಲಜ್ಞಾನಿಗಳು ಭರತಖಂಡದ ಭವಿಷ್ಯವನ್ನು ಕುರಿತು ಅಪಾರವಾಗಿ ಹೇಳಿದ್ದಾರೆ. ಭಾರತದ ದೇಶಗಳನ್ನು ಕುರಿತು, ಅಲ್ಲಿಯ ದೊರೆ ಮತ್ತು ಪಾಳೆಯಗಾರರ ದೆಸೆಯಿಂದ ಸಾಮಾನ್ಯರಿಗೆ ಆಗಬಹುದಾದ ಕಷ್ಟನಷ್ಟಗಳ ಕುರುಹುಗಳನ್ನು ಎಲ್ಲ ಕಾಲಜ್ಞಾನಿಗಳೂ ವಿಶದಪಡಿಸಿದ್ದಾರೆ.
ಕಾಲಜ್ಞಾನ ವಚನಗಳನ್ನು ಬೋಧಿಸಿರುವ ಶರಣರೆಲ್ಲ 12ನೆಯ ಶತಮಾನದಿಂದ ಈಚಿನವರು. ಅನಂತರ ಬಂದವರು ಪದ, ಪದ್ಯ, ಲಾವಣಿಗಳ ರೂಪದಲ್ಲಿ ಹಿಂದಿನವರನ್ನು ಅನುಕರಣೆ ಮಾಡಿ ಕಾಲಜ್ಞಾನವನ್ನು ತಿಳಿಸಿದ್ದಾರೆ ಮುಸಲ್ಮಾನರ ಆಡಳಿತದಿಂದ ಆಗಬಹುದಾದ ತೊಂದರೆಗಳು; ಜಾತಿ, ನೀತಿ, ಧರ್ಮಗಳನ್ನು ಬಿಟ್ಟು ಜನ ಅನೀತಿವಂತರಾಗುವುದು; ಒಟ್ಟಾರೆ ಕಲಿಯುಗದ ಮಹಿಮೆಯ ವಿವಿಧ ಮುಖಗಳು ಈ ವಚನಗಳಲ್ಲಿ ಬಂದಿವೆ. ಈ ವಚನಗಳು ಮತ್ತೊಂದು ದೃಷ್ಟಿಯಿಂದಲೂ ಮಹತ್ತ್ವಪೂರ್ಣವಾದುವು. ಅಂದಿನ ವೀರಶೈವರ ಸಾಮಾಜಿಕ ಮತ್ತು ರಾಜಕೀಯ ಸಂಗತಿಗಳನ್ನು ತಿಳಿಯಲು ಇವು ಬಹುಮಟ್ಟಿಗೆ ಅನುಕೂಲವಾಗಿವೆ.

English summary
Astrology: Vijayapura Kodekallu Maharaj Kalajnana prediction on Rain, Tax, disease for upcoming year is here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X