ವಿಜಯಪುರ: ರವಿ ಬೆಳಗೆರೆಗೆ ಶ್ರೀಮುರಳಿ ಗುಡ್ ಲಕ್

ವಿಜಯಪುರ, ಡಿಸೆಂಬರ್ 09 : ಕೊಲೆಗೆ ಸಂಚು ಮಾಡಿರುವ ಆರೋಪದಡಿ ಬಂಧನಕ್ಕೊಳಗಾಗಿರುವ ಪತ್ರಕರ್ತ ರವಿ ಬೆಳಗೆರೆ ಅವರಿಗೆ ಕನ್ನಡ ಸಿನಿಮಾ ನಟ ಶ್ರೀಮುರಳಿ ಬೆಂಬಲ ಸೂಚಿಸಿದ್ದಾರೆ.

ನಟ ಶ್ರೀಮುರಳಿ ಆರೋಪಿ ರವಿ ಬೆಳಗೆರೆ ಅವರಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದು, 'ರವಿ ಅಂಕಲ್‌ಗೆ ಅವರ ಅಳಿಯ ಶ್ರೀನಗರ ಕಿಟ್ಟಿಗೆ ಹಾಗೂ ಮಗಳಾದ ಭಾವನಾ ಅವರಿಗೆ ನನ್ನ ಸಹಕಾರ, ಬೆಂಬಲ ಹಾಗೂ ಗುಡ್ ಲಕ್ ಯಾಗಲೂ ಇರುತ್ತದೆ ಎಂದಿದ್ದಾರೆ.

ವಿಜಯಪುರದಲ್ಲಿ ನೂತನ ಮಲಬಾರ್ ಗೋಲ್ಡ್ ಶೋರೂಂ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಬಲ ಸೂಚಿಸುತ್ತಿರುವ ಬಗ್ಗೆ ನಾವು ಎಲ್ಲಿ ಬರೆಯಬೇಕಾಗಿಲ್ಲ, ಬೇರೊಬ್ಬರಿಗೆ ಹೇಳಬೇಕಾಗಿಲ್ಲ ಆದರೆ ಬೆಂಬಲ ಇದ್ದೇ ಇರುತ್ತದೆ ಎಂದಿದ್ದಾರೆ.

Actor Srimurali extended his support to Ravi Belagere

ರವಿ ಬೆಳಗೆರೆ ಅವರ ಅಳಿಯ ಶ್ರೀನಗರ ಕಿಟ್ಟಿ ಅವರಿಗೆ ನಾನು ಯಾವತ್ತೂ ಬೆಂಬಲಾಗಿ ಇರುತ್ತೇನೆ ಶ್ರೀನಗರ ಕಿಟ್ಟಿ ಅವರು ಕರೆದರೂ, ಕರೆಯದೇ ಇದ್ದರು ಅವರಿಗೆ ಅವರ ಕುಟುಂಬಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಅವರು ಹೇಳಿದ್ದಾರೆ.

ಎಲ್ಲರೂ ಒಬ್ಬರಿಗೊಬ್ಬರು ಆಗಿ ಬಾಳೋಣಾ, ಏಲ್ಲಾದರೂ ಹೆಚ್ಚು ಕಡಿಮೆ ಆಗಿದ್ದರೆ ತಿದ್ದಿಕೊಳ್ಳೋಣ, ಎಲ್ಲರೂ ಚೆನ್ನಾಗಿ ಇರೋಣ, ಎಲ್ಲರನ್ನೂ ಪ್ರೀತಿಸೋಣಾ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಬಿಡುಗಡೆ ಆದ ತಮ್ಮ ಮಫ್ತಿ ಸಿನಿಮಾ ಬಗ್ಗೆಯೂ ಮಾತನಾಡಿದ ಅವರು ಮಫ್ತಿ ಸಿನೆಮಾವನ್ನು ಎಲ್ಲರೂ ಪ್ರೀತಿಯಿಂದ ಸ್ವೀಕರಿಸಿದ್ದಾರೆ, ಮುಂದಿನ ಸಿನೆಮಾ ಕೂಡಾ ಜಯಣ್ಣ ಕಂಬೈನ್ಸ್ ನಲ್ಲಿಯೇ ಮೂಡಿ ಬರಲಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+