ಸಾಮಾಜಿಕ ಬಹಿಷ್ಕಾರ: ಎಫ್‌ಬಿ ಲೈವ್‌ನಲ್ಲಿ ಯುವತಿ ಆತ್ಮಹತ್ಯೆಗೆ ಯತ್ನ

ವಿಜಯಪುರ, ಅ.3: 'ನನಗೆ ಬದುಕುವ ಯಾವ ಹಕ್ಕೂ ಇಲ್ಲ' ಎಂದು ಫೇಸ್‌ಬುಕ್ ಲೈವ್‌ ಮಾಡುತ್ತಾ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಜಯಪುರದಲ್ಲಿ ನಡದಿದೆ.

ಹಾಗಾದರೆ ಆಕೆ ಆತ್ಮಹತ್ಯೆ ಯತ್ನಕ್ಕೆ ಕಾರಣವೇನು? ಮುಂದೆ ಓದಿ., ಯುವತಿ ವಿಜಯಪುರದ ಹಂಚಿನಾಳ ತಾಂಡದವಳು, ಆಕೆಯದ್ದು ತಂದೆ-ತಾಯಿ, ಸಹೋದರ ಇರುವ ಸುಂದರ ಪುಟ್ಟ ಕುಟುಂಬ, ಆಕೆಗೆ ಪೋಷಕರೆಂದರೆ ಪಂಚ ಪ್ರಾಣ, ನೆಮ್ಮದಿಯಾಗಿ ಜೀವನ ಸಾಗುತ್ತಿರುವಾಗ ಸಾಮಾಜಿಕ ಬಹಿಷ್ಕಾರ ಎಂಬ ಬಿರುಗಾಳಿ ಬೀಸಿತು.

ಯಾವುದೋ ಜಮೀನಿನ ವಿವಾದದಲ್ಲಿ ಸಿಲುಕಿದ ಅವರು ಪಂಚರು, ಊರಿನ ಮುಖಂಡರಿಂದ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿ ಕುಟುಂಬ ಛಿದ್ರ, ಛಿದ್ರವಾಯಿತು.

18 year old girl attempts suicide in Facebook live

ಆಕೆ ಅಲ್ಲಿಯ ಸಬ್‌ಇನ್‌ಸ್ಪೆಕ್ಟರ್ ಗೆ ದೂರು ನೀಡಿದಳು, ಅವರು ದೂರನ್ನು ಸ್ವೀಕರಿಸಿದರು ಆದರೆ ಎಫ್‌ಐಆರ್ ದಾಖಲಿಸಿರಲಿಲ್ಲ, ಒಂದೊಮ್ಮೆ ಈ ಕುಟುಂಬಕ್ಕೆ ಸಹಾಯ ಮಾಡದಿದ್ದರೆ ಪೊಲೀಸ್‌ರನ್ನು ಅಲ್ಲಿಂದ ಎತ್ತಂಗಡಿ ಮಾಡುವುದಾಗಿ ಮಾಜಿ ಸಚಿವ ಎಂಬಿ ಪಾಟೀಲ್ ಹೇಳಿದ್ದರು.

ಆದರೂ ಯಾವುದೇ ಪ್ರಯೋಜನವಾಗಿಲ್ಲ, ಸ್ವಜಾಯಿತಿಂದಲೇ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಲ್ಲಿ ಹೋಗಬೇಕು, ಎಲ್ಲಿ ವಾಸಿಸಬೇಕು ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ ಎಂದು ಆಕೆ ಅಳಲು ತೋಡಿಕೊಂಡಿದ್ದಾಳೆ.

ನಾನು ದ್ವಿತೀಯ ಪಿಯುಸಿ ಓದುತ್ತಿದ್ದೇನೆ, ನನ್ನ ಶಿಕ್ಷಣಕ್ಕಾಗಿ ತಂದೆ ಸಾಕಷ್ಟು ಸಾಲ ಮಾಡಿದ್ದಾರೆ, ಈ ಜಂಜಾಟದಲ್ಲಿ ಬದುಕಲು ಕಷ್ಟವಾಗುತ್ತಿದೆ, ಕಾಲೇಜಿಗೆ ಹೋಗುವಾಗ ಬರುವಾಗ ಜನರು ಹಲವು ಹೆಸರುಗಳಿಂದ ಕರೆಯುತ್ತಾರೆ, ನನ್ನನ್ನು ಅಣುಕಿಸುತ್ತಾರೆ ನನಗೆ ಬದುಕುವ ಯಾವ ಹಕ್ಕು ಇಲ್ಲ ಎಂದು ಫೇಸ್‌ಬುಕ್ ಲೈವ್ ಮಾಡುತ್ತಲೇ ವಿಷ ಸೇವಿಸಿದ್ದಾಳೆ. ಬಳಿಕ ತಾಯಿ ಬಂದು ನೋಡಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 24 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+