ಉಡುಪಿ: ಪೊಲೀಸರಿಂದ ಹಲ್ಲೆ ಆರೋಪ, ಯುವಕನಿಂದ ಆತ್ಮಹತ್ಯೆಗೆ ಯತ್ನ

ಉಡುಪಿ, ಮಾರ್ಚ್ 28: ಪ್ರಕರಣವೊಂದರ ವಿಚಾರಣೆಗೆಂದು ಠಾಣೆಗೆ ಕರೆಸಿ ಪೋಲಿಸರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಯುವಕನೋರ್ವ ಅತ್ಮಹತ್ಯೆಗೆ ಯತ್ನಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿಯ ಉದ್ಯಾವರದ ರಾಕೇಶ್ ಪೂಜಾರಿ ಅವರ ಮೇಲೆ ಮಣಿಪಾಲ ಠಾಣೆಯ ಪೋಲಿಸ್ ಸಿಬ್ಬಂದಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ರಾಕೇಶ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎರಡು ದಿನಗಳ ಹಿಂದೆ ಮಣಿಪಾಲದ ಡಿ.ಸಿ ಕಚೇರಿ ರಸ್ತೆ ಬಳಿ ವಾಹನಕ್ಕೆ ಸೈಡ್ ನೀಡುವ ವಿಚಾರದಲ್ಲಿ ಕಾರು ಚಾಲಕ ಪ್ರೊ.ಚಂದ್ರಕಾಂತ್ ಮತ್ತು ಬೈಕ್ ಸವಾರ ರಾಕೇಶ್ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿತ್ತು. ರಾಂಗ್ ಸೈಡಿಂದ ಬಂದವರು ಯಾರು ಎಂಬ ವಿಚಾರದಲ್ಲಿ ಈ ಗಲಾಟೆ ನಡೆದಿದೆ. ಕುಪಿತಗೊಂಡ ರಾಕೇಶ್, ಪ್ರೊ.ಚಂದ್ರಕಾಂತ್ ಅವರ ಮೇಲೆ ಕಲ್ಲನ್ನು ಎತ್ತಿ ಹಾಕುವುದಕ್ಕೆ ಮುಂದಾಗಿದ್ದ.

Youth attempts suicide after allegedly torture by Manipal police

ಈ ಕುರಿತು ಉಪನ್ಯಾಸಕ ಚಂದ್ರಕಾಂತ್, ರಾಕೇಶ್ ವಿರುದ್ದ ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಗಲಾಟೆ ದೃಶ್ಯವು ರಸ್ತೆ ಪಕ್ಕದಲ್ಲೇ ಅಳವಡಿಸಿದ್ದ ಸಿ.ಸಿ ಕ್ಯಾಮಾರಾದಲ್ಲಿ ಸೆರೆಯಾಗಿತ್ತು. ಸಿ.ಸಿ.ಟಿ.ವಿ ದೃಶ್ಯ ದ ಆಧಾರದ ಮೇರೆಗೆ ರಾಕೇಶ್ ನನ್ನು ಪೋಲಿಸರು ಪತ್ತೆಹಚ್ಚಿ ಠಾಣೆಗೆ ಕರೆಸಿದ್ದಾರೆ.

ವಿಚಾರಣೆಗೆ ಕರೆಸಿದ ಪೊಲೀಸರು ದೈಹಿಕ ಹಲ್ಲೆ ನಡೆಸಿದ್ದಾರೆ, ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ರಾಕೇಶ್ ಆರೋಪಿಸಿದ್ದು, ಠಾಣೆಯಲ್ಲಿ ಅವಮಾನವಾದ ಹಿನ್ನಲೆಯಲ್ಲಿ ಯುವಕ ರಾಕೇಶ್ ಪೂಜಾರಿ ತನ್ನ ಕೈ ಕುಯ್ದುಕೊಂಡು ಆತ್ಮಹತ್ಯೆಗೂ ಯತ್ನಿಸಿದ್ದಾನೆ.

ಪೋಲಿಸರು ಹಲ್ಲೆ ಮಾಡಿದ ಪರಿಣಾಮ ಕೈ ಮುರಿತವಾಗಿದೆ ಎಂದು ಮಣಿಪಾಲ ಆಸ್ಪತ್ರೆಗೆ ರಾಕೇಶ್ ದಾಖಲಾಗಿದ್ದಾನೆ. ಈ ಬಗ್ಗೆ ಯುವಕನ ತಾಯಿ ಮಣಿಪಾಲ ಠಾಣೆಯ ಪೊಲೀಸರ ವಿರುದ್ದ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+