ಮೊಬೈಲಲ್ಲಿ ಮಾತಾಡುತ್ತ, ಅಳುತ್ತ ನದಿಗೆ ಜಿಗಿದ ಯುವತಿ

By: ಉಡುಪಿ ಪ್ರತಿನಿಧಿ
Subscribe to Oneindia Kannada

ಉಡುಪಿ, ಸೆಪ್ಟೆಂಬರ್ 28 : ಕೆ.ಜಿ.ರಸ್ತೆ ಸೇತುವೆಯಲ್ಲಿ ಸಂತೆಕಟ್ಟೆಯ ಚಂದ್ರಶೇಖರ ಎಂಬುವರ ಪುತ್ರಿ ಚೈತ್ರಾ(18) ಎಂಬ ಯುವತಿ ಮೊಬೈಲ್ ಫೋನ್ನಲ್ಲಿ ಅಳುತ್ತಾ ಮಾತನಾಡುತ್ತಲೇ, ಎಲ್ಲರೂ ನೋಡನೋಡುತ್ತಿದ್ದಂತೆ ಸೇತುವೆಯಿಂದ ತುಂಬಿ ಹರಿಯುತ್ತಿದ್ದ ನದಿಗೆ ಜಿಗಿದ ಘಟನೆ ಬುಧವಾರ ಸಂಜೆ ನಡೆದಿದೆ.

ಅಂಬಲಪಾಡಿಯ ನೆಟ್ ಜಿ ಎಂಬ ಮೊಬೈಲ್ ಅಂಗಡಿಯ ಉದ್ಯೋಗಿ, ಜ್ಯೋತಿ ಎಂಬವರ ಮಗಳು ಕೆಲಸ ಬಿಟ್ಟು ಎಂದಿನಂತೆ ಸಂತೆಕಟ್ಟೆಗೆ ಬಸ್ಸಿನಲ್ಲಿ ಬಂದಿಳಿದಿದ್ದು, ಮನೆಯತ್ತ ತೆರಳುತ್ತಿದ್ದಳು. ಆಕೆ ಸೇತುವೆ ಮೇಲೆ ನಡೆಯುವ ಸಂದರ್ಭ ಬಿಕ್ಕಿಬಿಕ್ಕಿ ಅಳುತ್ತಿದ್ದಳಂತೆ. ಏಕಾಏಕಿ ತನ್ನ ಚಪ್ಪಲಿ ಮತ್ತು ಬ್ಯಾಗ್ ಅನ್ನು ಅಲ್ಲೇ ಬಿಟ್ಟು ಮೊಬೈಲ್ ಫೊನಿನೊಂದಿಗೆ ಸ್ವರ್ಣ ನದಿಗೆ ಜಿಗಿದಿದ್ದಾಳೆ.

Young girl jumps into river in front of everyone in Udupi

ಆಕೆಯ ಬ್ಯಾಗಿನಲ್ಲಿದ್ದ ದಾಖಲೆಗಳಿಂದ ಅವಳ ಗುರುತು ಪತ್ತೆಯಾಗಿದೆ. ನೋಡಲು ಲಕ್ಷಣವಾಗಿದ್ದ ಚೈತ್ರಾ ಯಾವ ಕಾರಣಕ್ಕೆ ನದಿಗೆ ಜಿಗಿದಳು ಎಂದು ಇನ್ನೂ ತಿಳಿದುಬಂದಿಲ್ಲ. ಡಿವೈಎಸ್ಪಿ ಕುಮಾರಸ್ವಾಮಿ ಸ್ಥಳಕ್ಕೆ ಧಾವಿಸಿದ್ದಾರೆ. ನದಿಯಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ. ಬ್ರಹ್ಮಾವರದಿಂದ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Young girl jumped into river in front of everyone in Udupi. The onlookers say Chaitra (18) was crying and talking to someone on mobile phone. The search is on.
Please Wait while comments are loading...