TS Nagabharana: ಡಿಕೆಶಿ ನಟ್ಟು ಬೋಲ್ಟ್ ಹೇಳಿಕೆಗೆ ಭಾರೀ ಆಕ್ರೋಶ- ಟಿ.ಎಸ್‌ ನಾಗಾಭರಣ ಹೇಳಿದ್ದೇನು?

ಡಿಸಿಎಂ ಡಿಕೆ ಶಿವಕುಮಾರ್‌ ಫಿಲ್ಮ ಫೆಸ್ಟಿವಲ್ ಉದ್ಘಾಟನೆಯ ದಿನ ಹೇಳಿದ ಹೇಳಿಕೆ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಡಿಕೆ ಶಿವಕುಮಾರ್ ಹೇಳಿಕೆಯ ವಿರುದ್ಧ ನಿರ್ದೇಶಕ ಟಿ.ಎಸ್‌ ನಾಗಾಭರಣ, ನಿರ್ಮಾಪಕ ಸಾರಾ ಗೋವಿಂದು ಹಾಗೂ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಆಕ್ರೋಶ ಹೊರಹಾಕಿದ್ದಾರೆ.

'ಆ ಪದವೇ, ಸಂಸ್ಕಾರ ತೋರಿಸುತ್ತೆ'

ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ದೇಶಕ ಟಿ.ಎಸ್‌ ನಾಗಾಭರಣ, 'ಹೌದು ಹೋಗಲು ಆಗಿಲ್ಲ. ಅಂದ ಮಾತ್ರಕ್ಕೆ ಏನೋ ತಪ್ಪು ಮಾಡಿದ್ದಾರೆ ಅನ್ನೋ ಅರ್ಥ ಅಲ್ಲ. ಅವರು ಬಳಸಿದ ಪದಗಳು ಸರಿಯಾಗಿಲ್ಲ. ಅದು ಯಾವ ಸಂಸ್ಕಾರದಿಂದ ಬಂದಿದಿಯೋ ಅದು ಆ ಸಂಸ್ಕಾರಕ್ಕೆ ಒಗ್ಗಿ ಹೋಗಿರುವುದರಿಂದ ಬಂದಿದೆ. ನಾವು ಅದನ್ನು ದುರಾದೃಷ್ಟ ಅಂದುಕೊಳ್ಳಬೇಕು' ಎಂದಿದ್ದಾರೆ.

word used by DK Shivakumar shows his culture - T S Nagabharana

'ನಟ್ಟು ಬೋಲ್ಟು ಎಂದಿದ್ದು ಸರಿಯಲ್ಲ'

ಜೊತೆಗೆ ನಿರ್ಮಾಪಕ ಸಾರಾ ಗೋವಿಂದು ಅವರು ಮಾತನಾಡಿ, 'ಈ ವಿಚಾರದಲ್ಲಿ ವಾರ್ನಿಂಗ್, ನೆಟ್ಟು ಬೋಲ್ಟ್ ಮಾತುಗಳು ಬರಬಾರದು. ಚಲನಚಿತ್ರ ಕಲಾವಿದರು ಹಲವಾರು ಬಾರಿ ಹೋರಾಟವನ್ನು ಮಾಡಿದ್ದಾರೆ. ಆಗ ಒಂದು ಹೋರಾಟವನ್ನು ಮಾಡಿ ಸರ್ಕಾರವನ್ನು ಬಿಳಿಸುವ ಶಕ್ತಿ ಚಿತ್ರರಂಗಕ್ಕೆ ಇತ್ತು' ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

'ದರ್ಪದಿಂದ ಹೇಳಿದ್ದಾರೆ'

ಇನ್ನೂ ಇದೇ ವಿಚಾರಕ್ಕೆ ವಾಗ್ದಾಳಿ ಮಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು, 'ಅವರಿಗೆ ಅಧಿಕಾರ ಇದೆ. ಕೋಪಬಂದಾಗ ಆ ದರ್ಪದಿಂದ ಹೇಳಿದ್ದಾರೆ. ಆ ಮಾತು ಹೇಳಿದ್ದು ನಿಜಾ' ಎಂದರು.

ಫಿಲ್ಮ ಫೆಸ್ಟಿವಲ್ ಅಧ್ಯಕ್ಷರಿಗೆ ಎಚ್ಚರಿಕೆ ಕೊಟ್ಟ ರವಿ ಗಣಿಗ

ಇನ್ನೂ ನರಸಿಂಹ ಅವರ ಹೇಳಿಕೆಗೆ ಕಾಂಗ್ರೆಸ್ ಶಾಸಕ ರವಿ ಗಣಿಗ ಆಕ್ರೋಶಗೊಂಡರು. 'ಇಲ್ಲಿ ಫಿಲ್ಮ ಫೆಸ್ಟಿವಲ್ ನಡೆಯುತ್ತಿದೆ. ಅಲ್ಲಿ ನೀವು ಕ್ರಿಕೆಟ್ ಆಡಿಸ್ತಾಯಿದ್ದೀರಾ. ನಿಮಗೆ ಕ್ರಿಕೆಟ್ ಗೇಮ್ ನಿಲ್ಲಿಸಿ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಭಾಗವಹಿಸಿ ಎಂದು ಹೇಳುವ ತಾಕತ್ತು ಇಲ್ವ. ಬಾಯಿಮುಚ್ಚಿಕೊಂಡು ಇರಿ, ಲಾಸ್ಟ್ ವಾರ್ನಿಂಗ್ ಕೊಡುತ್ತಿದ್ದೇನೆ' ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

'ನಾವು ಎಲ್ಲರಿಗೂ ಆಹ್ವಾನಿಸಿದ್ದೇವೆ'

ಅಲ್ಲದೆ ಸಾಧುಕೋಕಿಲ ಅವರು ಕೂಡ ಫಿಲ್ಮ್ ಫೆಸ್ಟಿವಲ್‌ಗೆ ಎಲ್ಲರಿಗೂ ಆಹ್ವಾನ ನೀಡಲಾಗಿದೆ. ಆದರೂ ಕೂಡ ಬಂದಿಲ್ಲ ಎಂದಿದ್ದಾರೆ. 'ನಾವು ಎಲ್ಲರಿಗೂ ಆಮಂತ್ರಣ ನೀಡಿದ್ದೇವೆ. ಎಲ್ಲೋ ಒಬ್ಬ ಇಬ್ಬರು ಮಿಸ್ ಆಗಿರುತ್ತಾರೆ. ಆದರೆ ಕರೆದೇ ಇಲ್ಲ ಅಂತ ನಮ್ಮ ಮೇಲೆ ಗೂಬೆ ಕೂರಿಸೋದು ತಪ್ಪು. ನಮ್ಮ ಬಳಿ ಒಂದು ಲಿಸ್ಟ್ ಇರುತ್ತದೆ. ನಾವು ಯಾರಿಗೆಲ್ಲಾ ಆಮಂತ್ರಣ ಕಳುಹಿಸುತ್ತೇವೆ ಅನ್ನೋದು. ಯಶ್‌, ಸುದೀಪ್ ಇವರಿಗೆಲ್ಲಾ ಆಮಂತ್ರಣ ಹೋಗಿದೆ' ಎಂದು ಹೇಳಿದರು.

'ವೇದಿಕೆ ಮೇಲೆ ಯಾರು ಇರುತ್ತಾರೆ. ವೇದಿಕೆ ಮುಂಭಾಗದಲ್ಲಿ ಯಾರು ಇರಬೇಕು. ಇಂಥವರನ್ನು ನಾವು ಕರೆದೇ ಇರುತ್ತೇವೆ. ಈ ಕೆಲಸವನ್ನು ನಾವು ಮುಂಚೆ ಮಾಡಿದ್ದೇವೆ. ಪೋಸ್ಟರ್ ಅಲ್ಲೂ ಹೋಗಿದೆ. ಪಿಆರ್‌ಓಗಳು ಹೋಗಿ ಕೊಟ್ಟಿದ್ದಾರೆ. ನಾನು ಕೂಡ ಖುದ್ದಾಗಿ ಹೋಗಿ ಕೊಟ್ಟಿದ್ದೇನೆ. ಕೆಲವರಿಗೆ ಕರೆ ಮೂಲಕ ಕರೆದಿದ್ದೇವೆ. ಕೆಲವರು ರಿಸಿವ್ ಮಾಡಿಲ್ಲ. ಕೆಲವರು ಮನೆಯಲ್ಲಿ ಇರಲಿಲ್ಲ. ಕೆಲವರ ಮನೆಯಲ್ಲಿ ಬರೀ ನಾಯಿ ಮಾತ್ರ ಇತ್ತು. ಕೆಲವರು ಆಮಂತ್ರಣ ವಾಪಸ್ ಕಳುಹಿಸಿದ್ದಾರೆ. ನಮ್ಮ ಬಳಿ ಯಾರಿಗೆಲ್ಲಾ ಇನ್ವಿಟೇಷನ್ ಕಳುಹಿಸಿದ್ದೇವೆ ಎನ್ನುವ ಬಗ್ಗೆ ನನ್ನ ಬಳಿ ಲಿಸ್ಟ್ ಇದೆ. ಕೆಲವರು ಇನ್ವಿಟೇಷನ್ ಪಡೆದು ಸಹಿ ಕೂಡ ಹಾಕಿದ್ದಾರೆ' ಎಂದು ಲಿಸ್ಟ್ ತೋರಿಸಿದ್ದಾರೆ.

ಡಿಕೆ ಶಿವಕುಮಾರ್ ಹೇಳಿದ್ದೇನು?

ಫಿಲ್ಮ ಫೆಸ್ಟಿವಲ್ ಗೆ ಆಮಂತ್ರ ನೀಡಿದರೂ ಕೂಡ ಸಾಕಷ್ಟು ಕಲಾವಿದರು, ನಿರ್ಮಾಪಕರು, ನಿರ್ದೇಶಕರು ಬಂದಿಲ್ಲ. ಇದೇ ವಿಚಾರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಕಲಾವಿದರನ್ನು ತಾರಟೆಗೆ ತೆಗೆದುಕೊಂಡಿದ್ದರು. 'ಇದು ನಿಮ್ಮ ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿದ್ದು ನಿಮ್ಮ ಕರ್ತವ್ಯ. ಇದು ನನ್ನ ಅಥವಾ ಸಿದ್ದರಾಮಯ್ಯ ಅವರ ಮನೆ ಕಾರ್ಯಕ್ರಮವಲ್ಲ. ನಾಳೆ ಒಂದು ದಿನ ಸಿನಿಮಾ ಥಿಯೇಟರ್‌ಗೆ ಹಾಕಬೇಡಿ ಅಂತ ನಾವು ಹೇಳಿದರೆ ಏನಾಗುತ್ತೆ? ನಮಗೂ ನೆಟ್ಟು ಬೋಲ್ಟು ಟೈಟ್ ಮಾಡೋದು ಗೊತ್ತಿದೆ' ಎಂದು ಎಚ್ಚರಿಕೆ ಸಂದೇಶ ಕೊಟ್ಟಿದ್ದರು.

ಇದೀಗ ಭಾರೀ ವಿವಾದವನ್ನು ಸೃಷ್ಟಿ ಮಾಡಿದೆ. ವಿಪಕ್ಷಗಳು ಡಿಕೆ ಶಿವಕುಮಾರ್ ಹೇಳಿಕೆ ವಿರುದ್ಧ ಕಿಡಿ ಕಾರಿದ್ದಾರೆ. 'ಸಾಕಷ್ಟು ಜನ ಕಲಾವಿದರಿಗೆ ಅವರದ್ದೇ ಆದ ಕೆಲಸಗಳಿರುತ್ತವೆ. ಫಿಲ್ಮ್ ಫೆಸ್ಟಿವಲ್‌ಗೆ ಬರಬೇಕು ಬೇಡ್ವಾ ಅನ್ನೋದು ಅವರ ಸ್ವಂತ ನಿರ್ಧಾರ. ನೆಟ್ಟು ಬೋಲ್ಟ್ ಟೈಟ್ ಮಾಡಲಿಕ್ಕೆ ಬೇರೆಯವರಿದ್ದಾರೆ. ಡಿಕೆ ಶಿವಕುಮಾರ್‌ ಅವರದ್ದು ನೆಟ್ಟು ಬೋಲ್ಟ್ ಟೈಟ್ ಮಾಡುವ ಕೆಲಸ ಅಲ್ಲ' ಎಂದು ವಿಪಕ್ಷ ನಾಯಕರು ಗುಡುಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+