• search
 • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಡುಪಿಯಲ್ಲಿ ತಾಯಿಯೊಬ್ಬಳ ಕೊನೆಯಾಸೆ ತೀರಿಸಿದ ಮಗನಲ್ಲದ ಮಗ

By ಉಡುಪಿ ಪ್ರತಿನಿಧಿ
|

ಉಡುಪಿ, ಏಪ್ರಿಲ್ 1: ಋಣಾನುಬಂಧ ಹೇಗಿರುತ್ತದೆ ಎಂಬುದನ್ನು ಊಹಿಸಲು ಕೂಡ ಅಸಾಧ್ಯ. ಅದೆಲ್ಲೋ ಹುಟ್ಟಿದ ತಾಯಿಗೆ, ಇನ್ನೆಲ್ಲೋ ಹುಟ್ಟಿದ ಮಗನೊಬ್ಬ ಅಂತ್ಯ ಸಂಸ್ಕಾರ ನಡೆಸುತ್ತಾನೆ ಅಂದರೆ ಅದಕ್ಕಿಂತ ಮಿಗಿಲಾದ ಋಣಾನುಬಂಧದ ವಿಧಿಯಾಟವನ್ನು ಊಹಿಸಲು ಸಾಧ್ಯವೆ?

ಆತ ಹೆತ್ತ ಮಗನಲ್ಲದಿದ್ದರೂ ಆ ತಾಯಿಯ ಕೊನೆ ಆಸೆಯನ್ನು ನೆರವೇರಿಸಿದ್ದಾರೆ. ಬೀದಿ ಹೆಣವಾಗಬೇಕಿದ್ದ ಪಾರ್ಥಿವ ಶರೀರಕ್ಕೆ ಸಕಲ ಗೌರವ ನೀಡಿ, ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ ಅವರು ಮಾನವೀಯತೆ ಮೆರೆದಿದ್ದಾರೆ. ಆ ವೃದ್ಧೆ ಅದಾಗಲೇ ಮನೆ ಬಿಟ್ಟು ಬಂದು ಐದು ದಶಕಗಳೇ ಕಳೆದಿದ್ದವು. ಉಡುಪಿ ಕೃಷ್ಣ ಮಠದ ರಥಬೀದಿಯಲ್ಲೇ ಆಕೆಯ ದಿನಚರಿ.

ತಂದೆಯ ಶವವನ್ನು ಸೈಕಲ್ ನಲ್ಲಿ ಕೊಂಡೊಯ್ದ ಮಕ್ಕಳು!

ಆ ವೃದ್ಧೆಯ ಬಾಳಿಗೆ ಬೆಳಕಾದವರು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ. ಹಲವು ವರ್ಷಗಳ ಹಿಂದೆ ವಿಶು ಶೆಟ್ಟಿಯ ಕಣ್ಣಿಗೆ ಬಿದ್ದ ಈ ವೃದ್ಧೆಯ ಆರೈಕೆಯನ್ನು ಮಾಡುತ್ತಾ ಬಂದಿದ್ದರು. ಆಕೆಯ ಹೆಸರು ಸುಂದರಿ ಶೆಟ್ಟಿಗಾರ್. ತನ್ನನ್ನು ಪ್ರೀತಿಯಿಂದ ಕಾಣುತ್ತಿದ್ದ ಮಗನಿಗೆ ಸಮನಾದ ವಿಶು ಶೆಟ್ಟಿ ಬಳಿ ತನ್ನ ಕೊನೆ ಆಸೆಯನ್ನು ಎರಡು ವರ್ಷಗಳ ಹಿಂದೆ ಹೇಳಿಕೊಂಡಿದ್ದರು.

ವಾದ್ಯ, ಓಲಗ ಮೂಲಕ ಶವ ಕೊಂಡೊಯ್ಯಬೇಕು

ವಾದ್ಯ, ಓಲಗ ಮೂಲಕ ಶವ ಕೊಂಡೊಯ್ಯಬೇಕು

ನನ್ನವರು ಅಂತ ಯಾರೂ ಇಲ್ಲ. ನಾನು ಮೃತಪಟ್ಟರೆ ನೀನೇ ಶವ ಸಂಸ್ಕಾರ ನಡೆಸಬೇಕು. ವಾದ್ಯ, ಓಲಗ ಮೂಲಕ ನನ್ನ ಶವ ಕೊಂಡೊಯ್ಯಬೇಕು ಎಂದಿದ್ದರು. ಅಷ್ಟೇ ಅಲ್ಲ, ನನಗೆ ಹೊಸ ಬಟ್ಟೆ, ಬಳೆ, ಕುಂಕುಮ ಹಾಕಬೇಕು ಎನ್ನುವುದು ಸುಂದರಿ ಶೆಟ್ಟಿಗಾರ್ ಅವರ ಕೊನೆಯಾಸೆಯಾಗಿತ್ತು. ಆಕೆ ಕೊನೆ ಆಸೆಯಂತೆಯೇ ಶವ ಸಂಸ್ಕಾರವನ್ನು ನಡೆಸಲಾಗಿದೆ.

ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು

ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು

70ರ ಹರೆಯದ ಸುಂದರಿ ಶೆಟ್ಟಿಗಾರ್ ಎರಡು ತಿಂಗಳ ಹಿಂದೆ ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಮೊದಲಿಗೆ ಮೃತರ ಕುಟುಂಬದವರನ್ನು ಸಂಪರ್ಕಿಸಲಾಯಿತು. ಆದರೆ ಆಕೆಯ ಮನೆಯವರು ಶವಸಂಸ್ಕಾರ ಮಾಡಲು ಮುಂದೆ ಬಂದಿಲ್ಲ.

ಉಡುಪಿಯ ಬೀಡಿನಗುಡ್ಡೆಯಲ್ಲಿ ಅಂತ್ಯ ಸಂಸ್ಕಾರ

ಉಡುಪಿಯ ಬೀಡಿನಗುಡ್ಡೆಯಲ್ಲಿ ಅಂತ್ಯ ಸಂಸ್ಕಾರ

ಈಗಾಗಲೇ ಮನೆ ಬಿಟ್ಟು ಹೋಗಿದ್ದರಿಂದ ಮನೆಯವರಿಗೂ ಆ ವೃದ್ಧೆ ಮೇಲಿನ ಪ್ರೀತಿ ಕಡಿಮೆಯಾಗಿತ್ತು. ಕೊನೆಗೆ ಈ ತಾಯಿಯ ಕೊನೆಯಾಸೆಯಂತೆ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿಯವರೇ ಮುಂದೆ ನಿಂತು ಉಡುಪಿಯ ಬೀಡಿನಗುಡ್ಡೆಯಲ್ಲಿ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಈ ಮೂಲಕ ವಿಶು ಶೆಟ್ಟಿಯವರು ಸುಂದರಿ ಶೆಟ್ಟಿಗಾರ್ ಮಗನ ಸ್ಥಾನದಲ್ಲಿ ನಿಂತು ಜವಾಬ್ದಾರಿ ನಿರ್ವಹಿಸಿದ್ದಾರೆ.

79 ಶವಗಳ ಅಂತ್ಯಸಂಸ್ಕಾರ

79 ಶವಗಳ ಅಂತ್ಯಸಂಸ್ಕಾರ

ಈ ವರೆಗೂ ವಿಶು ಶೆಟ್ಟಿ ಅವರು 79 ಅಪರಿಚಿತ ಹಾಗೂ ವಾರಸುದಾರರಿಲ್ಲದ ಶವಗಳ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಇವರ ಈ ಕಾರ್ಯಕ್ಕೆ ಒಂದಿಬ್ಬರು ಗೆಳೆಯರು ಬೆನ್ನುಲುಬಾಗಿ ನಿಂತಿದ್ದಾರೆ. ಸಮಾಜ ಹಾಗೂ ಸರಕಾರದ ಯಾವುದೇ ನೆರವು ಈವರೆಗೆ ಪಡೆಯದ ವಿಶು ಶೆಟ್ಟಿ, ಮಗನ ಸ್ಥಾನದಲ್ಲಿದ್ದು ಸುಂದರಿ ಶೆಟ್ಟಿಗಾರ್ ಅಂತ್ಯ ಸಂಸ್ಕಾರ ನಡೆಸುವ ಮೂಲಕ ಮತ್ತೊಮ್ಮೆ ಮಾದರಿಯಾಗಿದ್ದಾರೆ.

ಉಡುಪಿ ಚಿಕ್ಕಮಗಳೂರು ರಣಕಣ
 • Shobha Karandlaje
  ಶೋಭಾ ಕರಂದ್ಲಾಜೆ
  ಭಾರತೀಯ ಜನತಾ ಪಾರ್ಟಿ
 • Pramod Madhavraj
  ಪ್ರಮೋದ್ ಮಧ್ವರಾಜ್
  ಇಂಡಿಯನ್ ನ್ಯಾಷನಲ್ ಕಾಂಗ್ರೆಸ್

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Social worker Vishu Shetty performed last ritual of Sundari Shettigar according to her wish in Udupi. She was residing at Udupi Ratha bidi, died recently. Her family members did not come forward to perform last rituals.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more