ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿ ಭಾಗದಲ್ಲಿ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗಿರಲು ಕಾರಣ ಇದೇ!

|
Google Oneindia Kannada News

ಉಡುಪಿ, ಜನವರಿ 06: ಉಡುಪಿ ಕಡಲ ತೀರದ ಮೀನುಗಾರರಲ್ಲಿ ಆತಂಕ ಮನೆಮಾಡಿದೆ. ನಿತ್ಯ ನೀಲಿ ಬಣ್ಣದಲ್ಲಿ ಕಣ್ಣಿಗೆ ಹಬ್ಬ ನೀಡುವ ಸಮುದ್ರ ಸದ್ಯ ಹಸಿರು ಬಣ್ಣಕ್ಕೆ ತಿರುಗಿದೆ.

ಉಡುಪಿಯ ಕಾಪು, ಪಡುಬಿದ್ರಿ, ಮಲ್ಪೆ ಕಡಲ ತೀರ ಭಾಗದಲ್ಲಿ ಸಮುದ್ರದ ನೀರು ಕಳೆದ ಮೂರ್ನಾಲ್ಕು ದಿನಗಳಿಂದ ಹಸಿರು ಬಣ್ಣಕ್ಕೆ ತಿರುಗಿದ್ದು, ಸಮುದ್ರದಲ್ಲಿ ಆಗಿರುವ ಈ ಬೆಳವಣಿಗೆ ಮೀನುಗಾರರಲ್ಲಿ ಆತಂಕ ಮೂಡಿಸಿದೆ.

ಮಲ್ಪೆಯಲ್ಲಿ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗಲು ಕಾರಣವೇನು?ಮಲ್ಪೆಯಲ್ಲಿ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗಲು ಕಾರಣವೇನು?

ಉಚ್ಚಿಲ, ಎರ್ಮಾಳು, ಪಡುಬಿದ್ರಿ ಪರಿಸರದಲ್ಲೂ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ದುರ್ವಾಸನೆ ಬರುತ್ತಿದೆ. ಇದು ಮೀನುಗಾರರಲ್ಲಿ ಆತಂಕಕ್ಕೆ ಕಾರಣವಾಗಿದ್ದರೆ, ಪ್ರವಾಸಿಗರಲ್ಲಿ ಕುತೂಹಲ ಮೂಡಿಸಿದೆ. ಸಮುದ್ರದ ನೀರು ಪಾಚಿಗಟ್ಟಿದ ಹಸಿರು ಬಣ್ಣದಂತೆ ಇರುವುದರಿಂದ ಕಡಲ ಕಿನಾರೆಗೆ ಬರುವ ಪ್ರವಾಸಿಗರು ನೀರಿಗಿಳಿಯಲು ಹಿಂದೇಟು ಹಾಕುತ್ತಿದ್ದಾರೆ. ಸಮುದ್ರಕ್ಕೆ ಇಳಿದ ಯಾರಿಗೂ ಬಣ್ಣ ಮೆತ್ತಿಕೊಳ್ಳುತ್ತಿಲ್ಲ.

ಹೌದು, ಎಲ್ಲಿ ನೋಡಿದ್ರೂ ಹಚ್ಚ ಹಸಿರು, ಯಾರೋ ಸಮುದ್ರದ ನೀರಿಗೆ ಹಸಿರು ಬಣ್ಣ ಬೆರೆಸಿರಬೇಕೆಂದು ಭ್ರಮೆ ಉಂಟಾಗುತ್ತದೆ. ಆದರೆ ಇದು ಬೆರೆಸಿದ ಬಣ್ಣವಲ್ಲ, ಪ್ರಕೃತಿ ಸಹಜವಾಗಿ ಸಮುದ್ರ ನೀರಿನ ಬಣ್ಣವೇ ಹಸಿರಾಗಿದೆ.

ವಿಸ್ಮಯ ಕಡಲು : ನೀಲಿ ಬಣ್ಣ ತುಂಬಿಕೊಂಡು ಹೊಳೆಯುತ್ತಿರಲು ಕಾರಣವೇನು?ವಿಸ್ಮಯ ಕಡಲು : ನೀಲಿ ಬಣ್ಣ ತುಂಬಿಕೊಂಡು ಹೊಳೆಯುತ್ತಿರಲು ಕಾರಣವೇನು?

ಆದರೆ ಸಮುದ್ರದ ನೀರು ಕೆಲವೊಮ್ಮೆ ಹಸಿರು ಬಣ್ಣ ಬರುವುದು ಸಹಜ ಪ್ರಕ್ರಿಯೆ ಪಾಚಿ ಬಿಡುವುದು ಅನ್ನುವುದು ಮೀನುಗಾರ ಅಂಬೋಣ. ಹಾಗಾದರೆ ಸಮುದ್ರದ ಬಣ್ಣ ಹಸಿರಾಗಲು ಕಾರಣವೇನು? ಇಲ್ಲಿದೆ ನೋಡಿ ಉತ್ತರ...

 ಹಸಿರು ನೀರಿನಿಂದ ಕೆಟ್ಟ ಪರಿಣಾಮ!

ಹಸಿರು ನೀರಿನಿಂದ ಕೆಟ್ಟ ಪರಿಣಾಮ!

ಸಮುದ್ರದ ಒಡಲಿನಾಳದಲ್ಲಿ ಡೈನೋಫ್ಲಾರೆಜಿಸ್ಟ್ ಎಂಬ ಜೀವಾಣುವಿನಿಂದ ಉಂಟಾಗುವ ನೈಸರ್ಗಿಕ ರಾಸಾಯನಿಕ ಪ್ರಕ್ರಿಯೆಯಿಂದ ನೀರು ಹಸಿರಾಗುತ್ತದೆ ಅನ್ನುತ್ತಾರೆ ಪರಿಸರ ತಜ್ಞರು. ಸಮುದ್ರದಲ್ಲಿ ಹೀಗೆ ಹಸಿರು ಬಣ್ಣ ಪಡೆದುಕೊಳ್ಳುವ ನೀರು ಸುಮಾರು ಒಂದು ವಾರದಿಂದ ಮೂರು ವಾರಗಳ ತನಕ ತನ್ನ ಹಸಿರು ಬಣ್ಣವನ್ನು ಉಳಿಸಿಕೊಳ್ಳುತ್ತದೆ. ನಂತರ ಸಹಜವಾಗಿ ನೀಲಿ ಬಣ್ಣ ಪಡೆಯುತ್ತದೆ. ತೀರ ಅಪಾಯಕಾರಿ ಅಲ್ಲದೇ ಹೋದ್ರೂ ಸ್ವಲ್ಪಮಟ್ಟಿಗೆ ಹಸಿರು ನೀರು ಕೆಟ್ಟ ಪರಿಣಾಮ ಉಂಟು ಮಾಡುತ್ತದೆ ಎಂಬುದು ಪರಿಸರ ತಜ್ಞ ಮಧ್ಯಸ್ಥ ಅವರ ಅಭಿಪ್ರಾಯ.

 ಕಳೆದ ವರ್ಷ ಹೀಗೆ ಆಗಿತ್ತು

ಕಳೆದ ವರ್ಷ ಹೀಗೆ ಆಗಿತ್ತು

ಕಳೆದ ವರ್ಷ 2017 ರಂದು ಆಗಸ್ಟ್ ನಲ್ಲಿ ಕಾರವಾರದ ಕಡಲ ತೀರದಲ್ಲಿ ಈ ರೀತಿಯ ವಿದ್ಯಮಾನ ಬೆಳಕಿಗೆ ಬಂದಿತ್ತು. ಕಾರವಾರದ ಕಡಲ ಕಿನಾರೆ ಹಸಿರು ಬಣ್ಣಕ್ಕೆ ತಿರುಗಿತ್ತು. ಈ ಬೆಳವಣಿಗೆ ಕಾರವಾರದ ಮೀನುಗಾರರಲ್ಲಿ ಆತಂಕ ಮೂಡಿಸಿತ್ತು.

ಆಗಸದಿಂದ ಉಡುಪಿಯ ಕಣ್ತುಂಬಿಕೊಳ್ಳಲು ಆರಂಭವಾಗಿದೆ ಹೆಲಿಟೂರಿಸಂಆಗಸದಿಂದ ಉಡುಪಿಯ ಕಣ್ತುಂಬಿಕೊಳ್ಳಲು ಆರಂಭವಾಗಿದೆ ಹೆಲಿಟೂರಿಸಂ

 ಸಣ್ಣ ಪುಟ್ಟ ಮೀನುಗಳು ಸಾವನ್ನಪ್ಪುತ್ತಿವೆ

ಸಣ್ಣ ಪುಟ್ಟ ಮೀನುಗಳು ಸಾವನ್ನಪ್ಪುತ್ತಿವೆ

ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗುವುದು ಬೇರೆ ಸಮುದ್ರದಲ್ಲಿ ಸಹಜವಾಗಿದೆ. ಅಮೆರಿಕಾದ ಸಮುದ್ರ ನೀರಿನಲ್ಲಿ ಈ ರೀತಿಯ ಪ್ರಕ್ರಿಯೆ ಸಹಜವಾಗಿ ಬಂದು ಹೋಗುತ್ತಿರುತ್ತದೆ. ಆದರೆ ಅರಬ್ಬಿ ಸಮುದ್ರದಲ್ಲಿ ಇದು ಅಪರೂಪವಾಗಿದೆ. ಸುಮಾರು ನಲವತ್ತು ವರುಷಗಳ ಹಿಂದೆ ಒಮ್ಮೆ ಈ ರೀತಿಯಾಗಿರುವುದನ್ನು ಹಿರಿಯರು ನೆನಪಿಕೊಳ್ಳುತ್ತಾರೆ. ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಗಂಧಕ‌ ಮತ್ತು ರಂಜಕದ ಅಂಶ ಸಮುದ್ರಕ್ಕೆ ಸೇರುವುದರಿಂದ ಹಾಗೂ ಸಮುದ್ರದಲ್ಲಿ ಉತ್ಪತ್ತಿಯಾಗುವ ಸೂಕ್ಷ್ಮಾಣು ಜೀವಿಗಳಿಂದ ಈ ಬಣ್ಣದ ಬದಲಾವಣೆ ಮೀನಿನ ಸಂತತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಸಿರು ನೀರಿನ ರಾಸಯನಿಕ ಬದಲಾವಣೆಯಿಂದಾಗಿ ಸಣ್ಣ ಪುಟ್ಟ ಮೀನುಗಳು ಸಾವನ್ನಪ್ಪುತ್ತಿವೆ.

 ಸ್ನಾನ ಮಾಡಿದ್ರೆ ತುರಿಕೆ

ಸ್ನಾನ ಮಾಡಿದ್ರೆ ತುರಿಕೆ

ಅಷ್ಟೇ ಅಲ್ಲ, ಬರುವ ವರುಷ ಮೀನಿನ ಇಳುವರಿ ಕೂಡ ಇಳಿಮುಖವಾಗುವ ಜೊತೆಗೆ ಮುಂಬರುವ ವರುಷ ಕಡಿಮೆಯಾಗುವ ಸಾಧ್ಯತೆ ಇದೆ. ಮೀನಿನ ಸಂತತಿ ನಾಶದ ಆಂತಕ ಒಂದು ಕಡೆಯಾದರೆ, ಸದ್ಯ ಮೀನುಗಾರಿಕೆ ಮಾಡೋದು ಕೂಡ ಕಷ್ಟ. ಬಲೆ ಬೀಸಿದ್ರೆ ಪಾಚಿಯೇ ಬರುತ್ತೆ ಅನ್ನುವುದು ಮೀನುಗಾರ ಅಳಲು. ಇನ್ನು ಸಮುದ್ರ ತೀರಕ್ಕೆ ಆಗಮಿಸುವ ಪ್ರವಾಸಿಗರು ಕೂಡ ಹಸಿರು ಬಣ್ಣದ ನೀರಿನಲ್ಲಿ ನೀರಾಟವಾಡುವುದಕ್ಕೆ ಹಿಂಜರಿಯುತ್ತಿದ್ದಾರೆ. ಹಸಿರು ಬಣ್ಣಕ್ಕೆ ತಿರುಗಿದ ನೀರಿನಲ್ಲಿ ಸ್ನಾನ ಮಾಡಿದ್ರೆ ತುರಿಕೆ, ಉಸಿರಾಟ ಸಮಸ್ಯೆ ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಒಟ್ಟಿನಲ್ಲಿ ಹಸಿರು ಬಣ್ಣಕ್ಕೆ ತಿರುಗಿದ ನೀರು ನೋಡುಗರ ಕಣ್ಣಿಗೆ ಹಬ್ಬವಾದ್ರೂ ಸಮುದ್ರಕ್ಕೆ ಇಳಿದು ಖುಷಿ ಪಡುವಂತಿಲ್ಲ. ಮೀನುಗಾರಿಕೆಗೆ ತೆರಳುವ ಮೀನುಗಾರರು ನೀರಿನ ಬಣ್ಣ ನಸು ನೀಲಿ ಬಣ್ಣಕ್ಕೆ ತಿರುಗುವವರೆಗೆ ಕಾಯುವ ಸ್ಥಿತಿ ಸದ್ಯ ಅನಿವಾರ್ಯ.

English summary
Sea water in Malpe, Padubidre turned to green in colour. Why sea water turned in to green in colour?. Read this article for more information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X