ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯಪುರ ವಿವಿ ನಂತರ ಮಣಿಪಾಲ ವಿವಿಯಲ್ಲಿ ನೀರಿನ ಹಾಹಾಕಾರ!

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ನೀರಿನ ಸಮಸ್ಯೆಯಿಂದ ರಜೆ ಘೋಷಣೆಯಾದ ಬೆನ್ನಲ್ಲೇ ಮಣಿಪಾಲ ವಿಶ್ವವಿದ್ಯಾಲಯದಲ್ಲೂ ನೀರಿನ ಹಾಹಾಕಾರ ಎದ್ದಿದೆ.

By Mahesh
|
Google Oneindia Kannada News

ವಿಜಯಪುರ/ಮಣಿಪಾಲ, ಮೇ 8: ವಿಶ್ವ ವಿದ್ಯಾನಿಲಯಕ್ಕೆ ನೀರಿನ ತೀವ್ರ ಕೊರತೆ ಹಿನ್ನೆಲೆಯಲ್ಲಿ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಮೂರು ದಿನಗಳ ಕಾಲ ಕುಲಸಚಿವರು ರಜೆ ಘೋಷಿಸಿದ್ದಾರೆ. ಕರಾವಳಿಯಲ್ಲಿ ಮಣಿಪಾಲ ವಿಶ್ವವಿದ್ಯಾಲಯದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಉಡುಪಿ ಜಿಲ್ಲೆಯ ನೀರಿನ ಬರ ವಿಶ್ವವಿದ್ಯಾಲಯಕ್ಕೆ ಬಲವಾಗಿ ತಟ್ಟಿದೆ.

ವಿಶ್ವವಿದ್ಯಾನಿಲಯದಲ್ಲಿ ನೀರಿನ ಕೊರತೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದ್ದು, ಮೂರು ದಿನಗಳ ಕಾಲ ವಿವಿಗೆ ರಜೆಯನ್ನು ಘೋಷಿಸಲು ಪ್ರಿನ್ಸಿಪಾಲ್ ಅವರಿಗೆ ಕುಲಸಚಿವ ಪ್ರೊ.ಕೆ.ಪಿ.ಶ್ರೀನಾಥ್ ಅವರು ಅನುಮತಿ ನೀಡಿದ್ದಾರೆ.

ನೀರಿನ ಸಮಸ್ಯೆ ನಿವಾರಿಸುವಂತೆ ಕುಲಪತಿ ಪ್ರೊ.ಸಬೀಹಾ ಭೂಮಿ ಗೌಡ ನೇತೃತ್ವದ ತಂಡ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

Water crisis worsens in Vijayapura and Manipal University

ನೀರಿನ ಸಮಸ್ಯೆಯ ಭೀಕರತೆ ಎಲ್ಲೆಡೆ ವ್ಯಾಪಿಸಿದ್ದು, ಭಾನುವಾರದಂದು ವಿಜಯಪುರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರತಿಭಟನೆಯ ಕಾವು ತಟ್ಟಿತ್ತು. ಸಿದ್ದರಾಮಯ್ಯ ಅವರ ಕಾರು ಬರುವ ರಸ್ತೆಗಳಲ್ಲಿ 'ನೀರು ಕೊಡಿ' ಎಂದು ದೊಡ್ಡದಾಗಿ ಕಾಣುವಂತೆ ಬರೆದು ಪ್ರತಿಭಟನೆ ನಡೆಸಲಾಯಿತು.

ವಿವಿಗೆ ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ ಹಾಗೂ ವಿವಿಯಲ್ಲಿರುವ ಕೊಳವೆ ಬಾವಿಯನ್ನು ದುರಸ್ತಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದ್ದಾರೆ.

ಮಣಿಪಾಲ: ಉಡುಪಿ ಜಿಲ್ಲೆಯ ಬಜೆ ಜಲಾಶಯದಲ್ಲಿ ನೀರಿನ ಮಟ್ಟ ಡೆಡ್ ಸ್ಟೋರೇಜ್ ಮಟ್ಟ ತಲುಪಿದೆ. ಜಲ ಸಮಸ್ಯೆಯಿಂದಾಗಿ ಸೆಮಿಸ್ಟರ್ ಗಳನ್ನು ಅವಧಿಗೆ ಮುನ್ನ ಮೊಟಕುಗೊಳಿಸಲು ಮಣಿಪಾಲ್ ವಿವಿ ನಿರ್ಧರಿಸಿದೆ. ಹೀಗಾಗಿ ಅವಧಿಗೆ ಮುನ್ನ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಮಣಿಪಾಲ್ ವಿವಿ ಅಡಿಯಲ್ಲಿ 22 ವಿದ್ಯಾಸಂಸ್ಥೆಗಳಿವೆ.

ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಅಧೀನದಲ್ಲಿ ಬರುವ ಕಸ್ತೂರ್ ಬಾ ಮೆಡಿಕಲ್ ಕಾಲೇಜ್ ಹೊರತುಪಡಿಸಿ ಎಲ್ಲಾ ವಿದ್ಯಾಸಂಸ್ಥೆಗಳ ಸೆಮಿಸ್ಟರ್ ಅವಧಿ ಮೊಟಕುಗೊಳ್ಳಲಿದೆ ಎಂದು ವಿವಿ ರಿಜಿಸ್ಟ್ರಾರ್ ಡಾ. ನಾರಾಯಣ್ ಸಭಾಹಿತ್ ಹೇಳಿದ್ದಾರೆ.

English summary
Water shortage has affected Akkamahadevi Women’s University in Vijayapura and Manipal University in Udupi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X