ಉಡುಪಿ ಶ್ರೀಕೃಷ್ಣ ಮಠಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ

Posted By: Ramesh
Subscribe to Oneindia Kannada

ಉಡುಪಿ, ಜನವರಿ. 13 : ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಸಂಜೆ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ಪೇಜಾವರ ಶ್ರೀಗಳ ಆಶೀರ್ವಾದ ಪಡೆದರು.

ನಂತರ ಮಾತನಾಡಿದ ಅವರು ಜಿಎಸ್ ಟಿ ಬಗ್ಗೆ ಕೇಂದ್ರ ಹಣಕಾಸು ಸಚಿವರು ಮುಖ್ಯಸ್ಥರಾಗಿ ಅದರ ಎಲ್ಲಾ ಮಗ್ಗುಲುಗಳನ್ನು ಚರ್ಚಿಸುತ್ತಿದ್ದಾರೆ. ಇದನ್ನು ರಾಜಕೀಯೇತರವಾಗಿ ಸ್ವೀಕರಿಸುವ ಆಶಾವಾದ ವಿದೆ. ಬಹುಶ: ಮುಂದಿನ ಎಪ್ರಿಲ್‌ನಿಂದಲೇ ಇದನ್ನು ಜಾರಿಗೊಳಿಸುವ ವಿಶ್ವಾಸವಿದೆ ಎಂದು ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.[ಅಡಿಕೆ ಬೆಂಬಲ ಬೆಲೆ ಅವಧಿ ಮತ್ತೆ ವಿಸ್ತರಣೆ : ಸಚಿವೆ ನಿರ್ಮಲಾ]

Union Minister Nirmala Sitharaman visits udupi sri krishna Math

ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪರ್ಯಾಯ ಶ್ರೀಪೇಜಾವರ ಮಠಾಧೀಶರೊಂದಿಗೆ ಮಠದ ಅಭಿವೃದ್ಧಿ ಕುರಿತು ಚರ್ಚಿಸಿದ ಸಚಿವೆ, ಶ್ರೀಕೃಷ್ಣಮಠಕ್ಕೆ ಅಗತ್ಯದ ಬೇಡಿಕೆಗಳ ಕುರಿತು ಯೋಜನೆಗಳನ್ನು ಸಲ್ಲಿಸಲು ಸಚಿವೆ ನಿರ್ಮಲಾ ಸೀತಾರಾಮನ್ ಸೂಚಿಸಿದರು.

ಮುಖ್ಯವಾಗಿ ನೀರು, ಶೌಚಾಲಯ, ಘನತ್ಯಾಜ್ಯ ನಿರ್ವಹಣೆ ಘಟಕದ (ಎಸ್‌ಟಿಪಿ) ಅಗತ್ಯವಿದೆ ಎಂದು ತಿಳಿಸಿದಾಗ, ಜೈವಿಕ ಶೌಚಾಲಯ ನಿರ್ಮಿಸಲು ವಿಸ್ತೃತ ಯೋಜನೆಗಳನ್ನು ಸಲ್ಲಿಸುವಂತೆ ತಿಳಿಸಿದರು. ಎಸ್‌ಟಿಪಿಗೆ ಜಾಗ ಇತ್ಯಾದಿಗಳಿದ್ದರೆ ಅದರ ಕುರಿತೂ ವರದಿ ಸಲ್ಲಿಸಲು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Union minister Nirmala Sitharaman meets Pejawar Swamiji at Udupi Krishna Matha on Thursday, January 12 and discussed the development programmes that has to be taken place at the Krishan Math.
Please Wait while comments are loading...